ರಾಜ್ಯ ಮಟ್ಟದ ಯುವಜನೋತ್ಸವ: ಜ.06, 07 ರಂದು ನಡೆಯುವ ಕಾರ್ಯಕ್ರಮಗಳ ಪಟ್ಟಿ

0
76

BP NEWS: ಬಳ್ಳಾರಿ: ಜನವರಿ.05:
ಜಿಲ್ಲೆಯಲ್ಲಿ 2023-24 ನೇ ಸಾಲಿನ ರಾಜ್ಯ ಮಟ್ಟದ ಯುವಜನೋತ್ಸವದ ಕಾರ್ಯಕ್ರಮವನ್ನು ಜ.06, 07 ರಂದು ಆಯೋಜಿಸುತ್ತಿದ್ದು, ಕಾರ್ಯಕ್ರಮವು ಸಾಂಸ್ಕøತಿಕ ಸ್ಪರ್ಧೆಗಳಿಂದ ಕೂಡಿದ್ದು, ಯುವ ಕಲಾ ತಂಡಗಳ ಪ್ರತಿಭೆ ಅನಾವರಣೆಗೊಳ್ಳುವ ಅತ್ಯುತ್ತಮ ವೇದಿಕೆಯಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ನಗರದ ವಿವಿಧೆಡೆ ಆಯೋಜಿಸಲಾಗುತ್ತಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಗ್ರೇಸಿ ಅವರು ತಿಳಿಸಿದ್ದಾರೆ.
ಸ್ಪರ್ಧೆಗಳ ವಿವರ:
ರಾಜ್ಯ ಮಟ್ಟದ ಯುವಜನೋತ್ಸವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಮತ್ತು ಜನಪದ ನೃತ್ಯ ಗುಂಪು – ಶ್ರೀ ಮಹರ್ಷಿ ವಾಲ್ಮೀಕಿ ಭವನ.
ಜನಪದ ನೃತ್ಯ ವೈಯಕ್ತಿಕ – ಎಂ.ಆರ್.ಕೆ.ಫಂಕ್ಷನ್ ಹಾಲ್.
ಜನಪದ ಗೀತೆ ಗುಂಪು – ವಾಲ್ಮೀಕಿ ಭವನ.
ಜನಪದ ಗೀತೆ ವೈಯಕ್ತಿಕ – ಗುರು ಫಂಕ್ಷನ್ ಹಾಲ್.
ಭಿತ್ತಿ ಪತ್ರ ರಚನೆ (ಪೋಸ್ಟರ್ ಮೇಕಿಂಗ್) – ಕರ್ನಾಟಕ ಫಂಕ್ಷನ್ ಹಾಲ್.
ಘೋಷಣೆ (ವೈಯಕ್ತಿಕ) ಮತ್ತು ಕಥೆ ಬರೆಯುವುದು (ವೈಯಕ್ತಿಕ) – ಬಿಡಿಎಎ ಫುಟ್ಬಾಲ್ ಮೈದಾನದ ಸಭಾಭವನ.
ಫೋಟೋಗ್ರಾಫಿ (ಛಾಯಾಚಿತ್ರಣ) (ವೈಯಕ್ತಿಕ) – ಜಿಲ್ಲಾ ಕ್ರೀಡಾಂಗಣ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಅಥವಾ ಮೊ.9972552385, 9008949847, 8971238689, 9731742590, 9632051468, 7026401500 ಮತ್ತು 9036335986 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here