ವಡ್ಡು ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ.

0
300

BP NEWS: ಬಳ್ಳಾರಿ: ನವೆಂಬರ್. 07: ಸೋಮವಾರ ಸಂಜೆ ಸಂಡೂರು ತಾಲೂಕಿನ ಬಳ್ಳಾರಿ ಜಿಲ್ಲೆಯ ವಡ್ಡು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ) ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು .

ಈ ಕಾರ್ಯಕ್ರಮವು ಜ್ಯೋತಿಯನ್ನು ಬೆಳಗಿಸವುದರ ಮೂಲಕ ಪ್ರಾರಂಭಿಸಿದ್ದರು. ಈ ಕಾರ್ಯಕ್ರಮದಲ್ಲಿ ವಡ್ಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ ,ಸಂಗೀತ ,ಹಾಗೂ ಕವನ ವಚನ, ಮತ್ತು ಮುಂತಾದ ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು . ಈ ಕಾರ್ಯಕ್ರಮವು ಶಾಲಾ ಮಕ್ಕಳಿಗೆ ಪ್ರೋತ್ಸಾಹಿಸುತ್ತಾ ಮತ್ತು ಗ್ರಾಮದ ಆಶ ಕಾರ್ಯಕರ್ತೆಯಾರಿಗೆ ಕರವೇ ಕಡೆಯಿಂದ *ಬ್ಲಡ್ ಪ್ರೆಸರ್ ಮಾನಿಟರ್ ಕೊಡಲಾಯಿತು* ಹಾಗೂ ಅವರಿಗೆ ಸನ್ಮಾನಿಸುತ್ತಾ ಅವರನ್ನು ಪ್ರೋತ್ಸಾಹಿಸಿದರು. ಈ ಕಾರ್ಯಕ್ರಮದಲ್ಲಿ ಮತ್ತೋರ್ವ ವ್ಯಕ್ತಿಗಳಾದ ವಿಜಯಲಕ್ಷ್ಮಿ ಸಿ.ಹೆಚ್.ಒ , ರಾಜೇಶ್ವರಿ ಪಿಎಚ್‌ಒ ಡಾಕ್ಟರ್ ಗಳಿಗೆ ಸನ್ಮಾನಿಸುತ್ತಾ ಇವರಿಗೂ ಸಹ ಬ್ಲಡ್ ಪ್ರೆಷರ್ ಮಾನಿಟರ್ ಕೊಡಲಾಯಿತು. ಗ್ರಾಮದ ಶ್ರೇಯಸಿಗಾಗಿ ದುಡಿಯುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷರಾದ ಜೀ ಸ್ವಾಮಿ ಹಾಗೂ ಉಪಾಧ್ಯಕ್ಷರಾದ ಕೆ ಮಹೇಶ್ ಇವರ ಸಂಗಡಿಗರಿಂದ ಮೂಡಿಬಂದ ಈ ಕಾರ್ಯಕ್ರಮವು ವಡ್ಡು ಗ್ರಾಮಕ್ಕೆ ಬೆಳಕು ಚೆಲುವಂತಿತ್ತು, ಇವರ ಕುರಿತು ಮಾತನಾಡಿದ ಕಾರ್ಯಕ್ರಮದ ಮತ್ತೋರ್ವ ಅತಿಥಿಯಾದ *ರಂಗ ತಿಲಕ ಟ್ರಸ್ಟಿನ* ಅಧ್ಯಕ್ಷರಾದ ಹಾಗೂ ಜನಪದ ಕಲಾವಿದರಾದ ಡಿಜಿ ತಿರುಮಲ ಇವರು ಈ ಕಾರ್ಯಕ್ರಮದ ಕುರಿತು ಗ್ರಾಮ ಘಟಕದಲ್ಲಿಯೇ ಇಂತಹ ಅದ್ಭುತ ಕಾರ್ಯಕ್ರಮಗಳು ನಡೆಯುತ್ತಿವೆ ನಮ್ಮ ಸಂಡೂರು ತಾಲೂಕಿನಲ್ಲಿ ನಡೆಯಬೇಕಾಗಿದ್ದು ಇಂತಹ ಕಾರ್ಯಕ್ರಮಗಳು ತಾಲೂಕು ಮಟ್ಟದಲ್ಲಿ ಎಲ್ಲರ ಸಹಯೋಗದೊಂದಿಗೆ ಆಯೋಜನೆಗೊಂಡರೆ ಸಂಡೂರಿನ ಕೀರ್ತಿಯು, ದುಪ್ಪಟ್ಟಾಗುತ್ತದೆ ಎಂದ್ದರು ಮತ್ತು ಕಲಾವಿದರನ್ನು ಗುರುತಿಸುವಂತಹ ಕಾರ್ಯಕ್ರಮಗಳು ಹಾಗೂ ಊರಿನ ಹೇಳಿಕೆಗಾಗಿ ಶ್ರಮಿಸುವ ಮಿತ್ರರು ಹಾಗೂ ಗಣ್ಯರು ಕರ್ನಾಟಕ ರಕ್ಷಣಾ ವೇದಿಕೆಯಲ್ಲಿ ಬಹಳಷ್ಟು ಇದ್ದಾರೆ ಇದು ಖುಷಿಯ ವಿಚಾರ ಎಂದು ತಿಳಿಸಿದರು.

ಶಾಲಾ ಮಕ್ಕಳಿಂದ ಕ್ಯಾನ್ಸರ್ ಹೇಗೆ ಬರುತ್ತದೆ ಅದನ್ನು ಹೇಗೆ ತಡೆಗಟ್ಟಬೇಕು ಎಂಬುದರ ಕುರಿತು ಒಂದು ಚಿಕ್ಕ ಮನವರಿಕೆಯ ನಾಟಕವು ಬಹಳ ಅತ್ಯದ್ಭುತವಾಗಿ ಮೂಡಿ ಬಂದಿತು ಮತ್ತು ಅದೇ ಗ್ರಾಮಸ್ಥರಾದ ಡಾಕ್ಟರ್ ವಿಜಯಲಕ್ಷ್ಮಿ ಹಾಗೂ ರಾಜೇಶ್ವರಿ ಇವರು ಕ್ಯಾನ್ಸರ್ ಒಂದು ಮಾರಕ ರೋಗವಾಗಿ ಪ್ರಸ್ತುತದಲ್ಲಿದ್ದು ಅದನ್ನು ತಡೆಗಟ್ಟುವ ಕೆಲವು ವಿಚಾರಗಳನ್ನು ತಿಳಿಯಪಡಿಸಿದ್ದರು ಹಾಗೂ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು ಈ ಕಾರ್ಯಕ್ರಮವು ಕರವೇಯ ಅಧ್ಯಕ್ಷರು ಜಿ.ಸ್ವಾಮಿ ,ಉಪಾಧ್ಯಕ್ಷರು ಕೆ.ಮಹೇಶ್, ಗೌರವಾಧ್ಯಕ್ಷರು ಫಕೀರಪ್ಪ ,ಪ್ರಧಾನ ಕಾರ್ಯದರ್ಶಿ ನಾಗೇಶ್. ಕೆ ,ಪತ್ರಕರ್ತ ತಿಮ್ಮಯ್ಯ ,ಸಂಘಟನಾ ಕಾರ್ಯದರ್ಶಿ ಹನುಮಂತ, ಖಜಂಜಿ ಅಬ್ದುಲ್ ಮತ್ತು ಸದಸ್ಯರೊಂದಿಗೆ ನೆರವೇರಿಸಲ್ಪಟ್ಟಿದ್ದು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನಿಂಗಮ್ಮನಾಗರಾಜ್, ಉಪಾಧ್ಯಕ್ಷರು ಪಾರ್ವತಮ್ಮ ಮಲ್ಲಯ್ಯ ಹಾಗೂ ಎಲ್ಲಾ ಸದಸ್ಯರು ಮತ್ತು ಉಬ್ಬಲಗಂಡಿಯ ಕರವೇ ಅಧ್ಯಕ್ಷರು ಬಿ.ಧನಂಜಯ ಮತ್ತು ಉಪಾಧ್ಯಕ್ಷರು ಕೆ.ಕೆ.ವೀರೇಶ್ ಮತ್ತು ಎಲ್ಲಾ ಊರಿನ ಗಣ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here