BP NEWS: ಬಳ್ಳಾರಿ: ಅಕ್ಟೋಬರ್.26: ಬಳ್ಳಾರಿ ನಗರದಲ್ಲಿರುವ ಜಿಲ್ಲಾ ಕ್ರೀಡಾಂಗಣ ಪಕ್ಕದಲ್ಲಿರುವ ಡಾಕ್ಟರ್ ಪುನೀತ್ ರಾಜಕುಮಾರ್ ಪುತ್ಥಳಿ ಮತ್ತು ಕೆರೆ ಉದ್ಘಾಟನೆಯಾಗಿ ಇನ್ನೂ ಒಂದು ವರ್ಷವೂ ಕಳೆದಿಲ್ಲ ಸೂಕ್ತವಾದಂತ ನಿರ್ವಹಣೆ ಇಲ್ಲದಂತೆ ಅಕ್ಷರಶಃ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಪುನೀತ್ ರಾಜಕುಮಾರ್ ಪುತ್ತಳಿಯ ಕೆರೆಯಲ್ಲಿ ನೀರು ಸಂಪೂರ್ಣ ಪಾಚಿಗಟ್ಟಿದ್ದು, ದುರ್ವಾಸನೆಯಿಂದ ಪಕ್ಕದಲ್ಲಿ ನಿಲ್ಲಲಾಗುತ್ತಿಲ್ಲ.
ಕೆರೆ ಫಿಲ್ಟರ್ ಗಳು ಸ್ಥಗಿತಗೊಂಡಿದ್ದು, ಕೆರೆಯ ಸುತ್ತ ವಾಯುವಿಹಾರ ಮಾಡುವವರಿಗೆ ಗಬ್ಬುವಾಸನೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಡಾ.ಪುನೀತ್ ರಾಜಕುಮಾರ ಪುತ್ಥಳಿಯ ಭಾಗಶಃ ಬಣ್ಣವೂ ನಶಿಸಿದ್ದು, ಅಭಿಮಾನಿಗಳಿಗೆ ಮುಜುಗರ ಉಂಟಾಗುತ್ತಿದೆ. ಇದೇ ತಿಂಗಳು ಅಕ್ಟೋಬರ್ 29ರಂದು ಅವರ ಪುಣ್ಯ ಸ್ಮರಣೆ ಇದ್ದು ಅಭಿಮಾನಿಗಳ ಬಳಗವೇ ದಂಡೋಪ ದಂಡವಾಗಿ ಆಗಮಿಸುವ ನಿರೀಕ್ಷೆ ಇದ್ದು ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ವಿಪರ್ಯಾಸ.
ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
‘ಡಾ. ಪುನೀತ್ ರಾಜಕುಮಾರ್ ಅವರ ಪುತ್ತಳಿಯನ್ನು ಪ್ರತಿಷ್ಠಾಪಿಸುವುದು ಎಷ್ಟು ಮುಖ್ಯವೋ ಅದರ ನಿರ್ವಹಣೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಡಾ. ಪುನೀತ್ ರಾಜಕುಮಾರ್ ಅವರ ಪುತ್ತಳಿಯು ಕೇವಲ ಉದ್ಘಾಟನೆಗೆ ಮಾತ್ರ ಸೀಮಿತವಾಗಿರುವುದು ನೋವಿನ ಸಂಗತಿ. ಇದೇ ಅಕ್ಟೋಬರ್ 29ರಂದು ಪುನೀತ್ ಅವರ ಪುಣ್ಯ ಸ್ಮರಣೆ ಇರುವುದರಿಂದ ಬಹುತೇಕ ಅಭಿಮಾನ ಬಳಗ ಆಗಮಿಸುತ್ತಿದ್ದು ಡಾ. ಪುನೀತ್ ರಾಜಕುಮಾರ್ ಅವರಿಗೆ ಪುಷ್ಪಾರ್ಚನೆ ಮಾಡಲು ಇಲಾಖೆಯವರು ವ್ಯವಸ್ಥೆ ಮಾಡಿಕೊಡಬೇಕೆಂದು ಮನವಿ’
– ಚಂದ್ರ ಶೇಖರ್ ಆಚಾರ್, ಗೌರವ ಅಧ್ಯಕ್ಷರು ಅಪ್ಪು ಸೇವಾ ಸಮಿತಿ, ಬಳ್ಳಾರಿ
‘ ಅತ್ಯಂತ ಎತ್ತರದ ಪುನೀತ್ ಪುತ್ಥಳಿಯನ್ನು ಹೊಂದಿರುವ ಹೆಮ್ಮೆ ನಮ್ಮ ಬಳ್ಳಾರಿಗೆ ಇದೆ. ಆದರೆ ಅದಕ್ಕೆ ಸೂಕ್ತವಾದಂತಹ ವ್ಯವಸ್ಥೆ ಕಲ್ಪಿಸದೆ ಇರುವುದು ನೋವಿನ ಸಂಗತಿ. ಅಪ್ಪು ನಮ್ಮ ಜೀವನದಲ್ಲಿ ಬೆರೆತು ಹೋಗಿದ್ದಾರೆ ಅವರ ಅಗಲಿಕೆಗೆ ಇನ್ನೂ ನಮ್ಮನ್ನು ಕಾಡುತ್ತಿದೆ’
– ಜೆಪಿ ಮಂಜುನಾಥ್, ಅಧ್ಯಕ್ಷರು ಅಪ್ಪು ಸೇವಾ ಸಮಿತಿ, ಬಳ್ಳಾರಿ