ಕೌಶಲ್ಯಭಿವೃದ್ಧಿ ತರಬೇತಿಗೆ ಶಾಸಕ ಭರತ್ ರೆಡ್ಡಿ ಮೇಯರ್ ತ್ರಿವೇಣಿ ಮಾಜಿ ಮೇಯರ್ ರಾಜೇಶ್ವರಿ ಅವರಿಂದ ಚಾಲನೆ

0
81

BP NEWS: ಬಳ್ಳಾರಿ: ಅಕ್ಟೋಬರ್.13: ಬಳ್ಳಾರಿ ನಗರದ 34ನೇ ವಾರ್ಡಿನ ಭತ್ರಿ ಪ್ರದೇಶದ ಭತ್ರಿ ಈರಣ್ಣ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ಕೊಳಗೆರೆ ಅಭಿವೃದ್ಧಿ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಬಳ್ಳಾರಿ ಉಪ ವಿಭಾಗ ಹಾಗೂ ಸ್ಪೂರ್ತಿ ರೂರಲ್ ಡೆವಲಪ್ಮೆಂಟ್ ಆರ್ಗನೈಸೇಷನ್ ಚಿತ್ರದುರ್ಗ ರವರ ಸಹಯೋಗದೊಂದಿಗೆ ಬಳ್ಳಾರಿ ನಗರದಲ್ಲಿ 2023-24ನೇ ಸಾಲಿನ ಐ.ಇ.ಸಿ ಚಟುವಟಿಕೆ ಕಾರ್ಯಕ್ರಮಗಳ ಅಡಿಯಲ್ಲಿ ಮತ್ತು ಮಾಜಿ ಮಹಾಪೌರರು ಹಾಗೂ 34ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ಅವರ ಅಧ್ಯಕ್ಷತೆಯಲ್ಲಿ ಕೌಶಲ್ಯಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮಕ್ಕೆ ಬಳ್ಳಾರಿ ನಗರ ಶಾಸಕರಾದ ನಾರಾ ಭರತ್ ರೆಡ್ಡಿ, ನಗರ ಪಾಲಿಕೆ ಮಹಾಪೌರರಾದ ಕುಮಾರೆಡ್ಡಿ ತ್ರಿವೇಣಿ ಹಾಗೂ ಮಾಜಿ ಮಹಾಪೌರರು ಹಾಗೂ 34ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ರಾಜೇಶ್ವರಿ ಸುಬ್ಬರಾಯುಡು ಮತ್ತು ಉಪ ಪೌರರದ ಬಿ.ಜಾನಕಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು ಮಾತನಾಡಿ ಮಹಿಳೆಯರು ಸ್ವಾವಲಂಬಿಯಗಳಾಗಿ ಬದುಕಲು ಸರ್ಕಾರ ಹಲವು ರೀತಿಯಲ್ಲಿ ಯೋಚನೆಗಳನ್ನು ತಂದಿದೆ ಇಂತಹ ಯೋಜನೆಗಳನ್ನು ತಾವು ಸದುಪಯೋಗ ಪಡಿಸಿಕೊಳ್ಳಬೇಕು ಮಹಿಳೆಯರಿಗಾಗಿ ನಮ್ಮ ಸರ್ಕಾರ ತಮ್ಮ ಜೊತೆಗಿದೆ ಶಕ್ತಿ ಯೋಜನೆ, ಗೃಹಜೋತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಯೋಜನೆಗಳ ಜೊತೆಗೆ ಕೌಶಲ್ಯಾಭಿವೃದ್ಧಿ ಯೋಜನಾ ಅಡಿಯಲ್ಲಿ ಹಲೋ ರೀತಿ ತರಬೇತಿ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ನಮಗೆ ಬಹಳ ಹೆಮ್ಮೆ ಎಂದು ಹೇಳಿದರು ಅಲ್ಲದೆ ಇನ್ನು ಕೆಲವೇ ದಿನಗಳಲ್ಲಿ ಗೃಹ ಲಕ್ಷ್ಮಿಯ ಎರಡನೇ ಕಂತಿನ ಹಣ ತಮ್ಮ ಖಾತೆಗೆ ಕೆಲವು ದಿನಗಳಲ್ಲಿ ಜಮಾ ಆಗಲಿದೆ ಎಂದು ಹೇಳಿದರು.

ನಂತರ ಮಾಜಿ ಮಹಾಪೌರರಾದ ಎಂ. ರಾಜೇಶ್ವರಿ ಸುಬ್ಬಾ ರಾಯುಡು ಅವರು ಮಾತನಾಡಿ ಮಹಿಳೆಯರು ಸ್ವಾವಲಂಬಿಯಾಗಿ ಬದುಕಬೇಕು ತಮಗೆ ಕಷ್ಟ ಬಂದರೆ ಯಾರನ್ನು ನಂಬದೇ ತಮ್ಮ ದುಡಿಮೆಯಿಂದ ತಾವು ಬದುಕಲು ಸಾಧ್ಯ ಎಂದು ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಸಭೆಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಕೊಳಗೇರಿ ಮಂಡಳಿ ಅಭಿವೃದ್ಧಿಯ ವ್ಯವಸ್ಥಾಪಕರಾದ ವಾರ್ಕರ್, ಸಮಾಜ ಸೇವಕರು ಕಾಂಗ್ರೆಸ್ ಮುಖಂಡರಾದ ಪಿ.ಜಗನ್, ಎಂ.ಸುಬ್ಬಾ ರಾಯುಡು, ಬಯೋಪಾಟಿ ವಿಷ್ಣು, ಯೋಗಾನಂದ ರೆಡ್ಡಿ ಸೇರಿದಂತೆ ಮುಂತಾದ ಕಾರ್ಯಕರ್ತರು ಅಭಿಮಾನಿಗಳು ಮಹಿಳೆಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here