ನವೆಂಬರ್ -11 ಬಳ್ಳಾರಿ ನಗರದಲ್ಲಿ ಗಡಿನಾಡ ಕನ್ನಡಿಗರ ರಾಜ್ಯ ಸಮಾವೇಶ

0
134

   BP News Karnataka Sept 23.2023

ಸ್ವಾತಂತ್ರ್ಯದ ನಂತರ ಒಡೆಯರ್ ಮಹಾರಾಜರ ಭಾರತದ ಭಾಗವಾಗಲು ಸಮ್ಮತಿಸಿದರು 1950 ರಲ್ಲಿ ಮೈಸೂರು ಭಾರತದ ರಾಜ್ಯವಾಯಿತು ಹಾಗೂ ಪೂರ್ವ ಮಹಾರಾಜ 1957 ರವರೆಗೆ ರಾಜ್ಯಪಾಲರಾದರು.                 ಏಕೀಕರಣ ಚಳುವಳಿ 19 ನೇ ಶತಮಾನದ 2ನೇ ಭಾಗದಲ್ಲಿ ಪ್ರಾರಂಭವಾಗಿ 1956 ರಾಜ್ಯ ಪುನರ್ ಸಂಘಟನೆ ಕಾಯ್ದೆಯೊಂದಿಗೆ ಮುಕ್ತಾಯವಾಯಿತು. ಆಗ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಲಾಯಿತು.

1956 ನವೆಂಬರ್-1 ರಂದು ಕನ್ನಡ ರಾಜ್ಯೋತ್ಸವವಾಗಿ ಆಚರಿಸಲಾಯಿತು. ಕರ್ನಾಟಕಕ್ಕೆ ತನ್ನದೇ ಆದ ಪ್ರತ್ಯೇಕ ಬಾವುಟ ಇದೆ.   ಹಳದಿ ಮತ್ತು ಕೆಂಪು ಬಣ್ಣಗಳನ್ನೊಂದಿದ ಕನ್ನಡದ ಧ್ವಜವಿದೆ: ರಾಜ್ಯೋತ್ಸವ ದಿನದಂದು ಕರ್ನಾಟಕದಾದ್ಯಂತ ಅತ್ಯಂತ ಸಂತೋಷ ಸಡಗರ ಸಂಭ್ರಮದಿಂದ ನಾಡ ಹಬ್ಬವನ್ನು ಆಚರಿಸಲಾಗುತ್ತದೆ. ಬಾವುಟದ ಹಳದಿ ಬಣ್ಣ ಶಾಂತಿ ಸೌಹಾರ್ಧತೆ ಸೂಚಿಸಿದರೆ ಕೆಂಪು ಬಣ್ಣವು ಕ್ರಾಂತಿಯ ಸಂದೇಶವನ್ನು ನೀಡುತ್ತದೆ. ಕನ್ನಡಿಗರು ಶಾಂತಿಗೂ ಬದ್ಧ ಸಮರಕ್ಕೂ ಸಿದ್ಧ ಎಂಬ ಸಂದೇಶವನ್ನು ಸಾರುತ್ತಾರೆ.

ಬಳ್ಳಾರಿ ನಗರದಲ್ಲಿ ಗಡಿನಾಡ ಕನ್ನಡಿಗರ ರಾಜ್ಯ ಸಮಾವೇಶವು ನವೆಂಬರ್ -11ನೇ ತರೀಖಿನ ಶನಿವಾರದಂದು ನಗರದ ಬಸವ ಭವನದಲ್ಲಿ ನಡೆಯಲಿದೆ. ದಿನಾಂಕ: 11 ರಂದು ಬೆಳಿಗ್ಗೆ 09-00ಗಂಟೆಗೆ ನಗರ ದೇವತೆ ಕನಕದುರ್ಗಮ್ಮ ದೇವಸ್ಥಾನದ ಆವರಣದಲ್ಲಿರುವ ಭುವನೇಶ್ವರಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಬಸವಭವನದವರೆಗೆ ಭುವನೇಶ್ವರಿ ತಾಯಿಯ ಭಾವಚಿತ್ರದೊಂದಿಗೆ ಸಕಲವಾಧ್ಯ ವೃಂದದೊಂದಿಗೆ ಕಲಾತಂಡದೊಂದಿಗೆ ಭವ್ಯ ಮೆರವಣಿ ಣಿಗೆಯ ಮೂಲಕ ಬಸವ ಭವನವನ್ನು ತಲುಪುವುದು.

ಬಸವ ಭವನದ ಮುಂದಿನ ಆವರಣದಲ್ಲಿ ಶನಿವಾರ 11-00 ಗಂಟೆಗೆ ಕನ್ನಡದ ಧ್ವಜರೋಹಣ ಕಾರ್ಯಕ್ರಮ ನಡೆಯುತ್ತದೆ. ಕನ್ನಡದ ಹಾಡುಗಳಿಗೆ ಮೆರಗು ನೀಡುವ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಬಾಲ್ಯ ವಿವಾಹ ನಿಷೇದ ಕಾಯ್ದೆ ಬಗ್ಗೆ ಜನ ಜಾಗೃತಿ ಕಾರ್ಯಕ್ರಮ, 11-30ಕ್ಕೆ ಮೆರವಣಿಗೆಯ ನಂತರ ವೇದಿಕೆಯ ಕಾರ್ಯಕ್ರಮ ಪ್ರಾರಂಭವಾಗುವುದು.

ಕಾರ್ಯಕ್ರಮದಲ್ಲಿ ಕನ್ನಡದ ಕಣ್ಮಣಿ ಹಾಗೂ ಕರುನಾಡ ಸೇವಾ ರತ್ನ ಪ್ರಶಸ್ತಿ ಸಮಾರಂಭ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭೆ ಪುರಸ್ಕಾರ ರೈತರಿಗೆ, ಮಾಜಿಸೈನಿಕರಿಗೆ, ಶಿಕ್ಷಕರಿಗೆ, ಸನ್ಮಾನ ಕಾರ್ಯಕ್ರಮ ನೆರವೇರುವುದು ಹಾಗೂ ಗಡಿಭಾಗದ ಕನ್ನಡಿಗರ ಸಮಸ್ಯೆಗಳ ಕುರಿತು ಜಾಗೃತನುಡಿ ನಂತರ ಪ್ರೀತಿಯ ಎಲ್ಲಾ ಕನ್ನಡಾಭಿಮಾನಿಗಳಿಗೆ ಬೋಜನದ ವ್ಯವಸ್ಥೆ ಮಾಡಲಾಗಿದೆ. ಎಂದು ಹೆಚ್. ಶಿವರಾಮೇ ಗೌಡ ನೇತೃತ್ವದ ಕರ್ನಾಟಕ‌ ರಕ್ಷಣಾ ವೇದಿಕೆಯ ಬಳ್ಳಾರಿ‌ ಮತ್ತು ವಿಜಯನಗರ ಜಿಲ್ಲಾಧ್ಯಕ್ಷರಾದ ಜಿ.ರಾಜಶೇಖರ ಅವರು ಮಾಧ್ಯಮಕ್ಕೆ ತಿಳಿಸಿದರು.

LEAVE A REPLY

Please enter your comment!
Please enter your name here