BP NEWS: ಬಳ್ಳಾರಿ: ಸೆಪ್ಟೆಂಬರ್.20:
ಪ್ರಸ್ತಕ ಸಾಲಿನಲ್ಲಿ ಕಂಪ್ಲಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ ಕಾರ್ಯಕ್ರಮವನ್ನು ಸೆ.23ರಂದು ಬೆಳಿಗ್ಗೆ 10.30ಕ್ಕೆ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಸಂಘಟಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಗ್ರೇಸಿ ಅವರು ತಿಳಿಸಿದ್ದಾರೆ.
ಕ್ರೀಡಾಕೂಟದಲ್ಲಿ ಆಯಾ ತಾಲ್ಲೂಕಿನ ಪುರಷ ಮತ್ತು ಮಹಿಳಾ ಕ್ರೀಡಾಪಟುಗಳು ಭಾಗವಹಿಸಬಹುದು, ಇದರಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್, ಕಬಡ್ಡಿ, ಖೋ-ಖೋ, ಫುಟ್ಬಾಲ್ (ಪುರಷರಿಗೆ ಮಾತ್ರ), ಥ್ರೋಬಾಲ್, ಯೋಗಾ ಮತ್ತು ಬ್ಯಾಡ್ಮಿಂಟನ್ ಕ್ರೀಡೆಗಳಾಗಿವೆ. ಒಬ್ಬ ಕ್ರೀಡಾಪಟು ಅಥವಾ ತಂಡ ಯಾವುದೇ ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ ನಂತರ ಬೇರೆ ಯಾವುದೇ ತಾಲ್ಲೂಕು ಅಥವಾ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶವಿಲ್ಲ. ಅಂತಹ ಪ್ರಕರಣವೇನಾದರೂ ದಾಖಲಾದಲ್ಲಿ, ಆಕ್ಷೇಪಣೆಯಾದಲ್ಲಿ ಅಥವಾ ಗಮನಕ್ಕೆ ಬಂದಲ್ಲಿ ನಿಯಮಾನುಸಾರ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು.
ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಕ್ರೀಡಾಪಟುಗಳಿಗೆ ಮಾತ್ರ ಅರ್ಹರು ಇರುತ್ತದೆ. ಅಂತಹ ಪ್ರಕರಣಗಳು ಬಂದಲ್ಲಿ ಆಧಾರ್‍ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು. ಕ್ರೀಡಾ ಕೂಟದಲ್ಲಿ ರಕ್ಷಣಾ ಪಡೆ, ಅರೆ ರಕ್ಷಣಾ ಪಡೆ, ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರರಲ್ಲ ಹಾಗೂ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಶಿಕ್ಷಕ ಎ.ಎಂ.ಬಸವರಾಜ್ ಅವರ ಮೊ.6362803296, ದೈಹಿಕ ಶಿಕ್ಷಕ ಬೀರ ಲಿಂಗೇಶ್ವರ ಅವರ ಮೊ.9740110210, ಅಶೋಕ್ ಅವರ ಮೊ.406471869, ಅಬ್ದುಲ್ ಅಜೀಜ್ ಅವರ ಮೊ.6361919204, ವೆಂಕಟರಾಮಣ್ಣ ಅವರ ಮೊ.9845461689 ಮತ್ತು ಎಂ.ಜಾಕೀರ್ ಅವರ ಮೊ.9036335986 ಇವರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.