ಅದ್ದೂರಿಯಾಗಿ ಶಿಕ್ಷಕರ ದಿನವನ್ನು ಆಚರಿಸಿದ ಕರ್ನಾಟಕ ಪಬ್ಲಿಕ್ ಶಾಲೆ, ಮೋಕಾದ ವಿದ್ಯಾರ್ಥಿಗಳು

0
476

BP NEWS: ಬಳ್ಳಾರಿ: ಸೆಪ್ಟೆಂಬರ್.05:  ಇಂದು ಕರ್ನಾಟಕ ಪಬ್ಲಿಕ್ ಶಾಲೆ ಮೋಕಾದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಅದ್ದೂರಿಯಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಪ್ರತಿ ಜವಾಬ್ದಾರಿಯನ್ನು ಅಂದರೆ ನಿರೂಪಣೆ, ಸ್ವಾಗತ, ಪ್ರಸ್ತಾವಿಕ ನುಡಿ, ವಂದನಾರ್ಪಣೆ ಒಳಗೊಂಡಂತೆ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ನಿರ್ವಹಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿಗಳ ನೆಚ್ಚಿನ ಉಪರಾಚಾರ್ಯರಾದ ಭಾರತಿ ಜೆ ಅವರು ವಹಿಸಿಕೊಂಡಿದ್ದರು. ಉದ್ಘಾಟಕರಾಗಿ ಬಳ್ಳಾರಿ ಪೂರ್ವ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಯೀಮ್ ಉರ್ ರೆಹಮಾನ್ ಅವರು ಆಗಮಿಸಿ ಕಾರ್ಯಕ್ರಮನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಸುಂದರ ಕಾರ್ಯಕ್ರಮದ ಅತಿಥಿಗಳಾಗಿ ECO ಗೂಳೆಪ್ಪ ಬೆಳ್ಳೆಕಟ್ಟೆ, BRC ಮಲ್ಲಪ್ಪ, AK ಚಂದ್ರಪ್ಪ ಅವರು ಆಗಮಿಸಿದ್ದರು.


ಊರಿನ ಗಣ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವೆಂಕಟೇಶ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಡಿ ರಾಮಣ್ಣ, ಕರ್ನಾಟಕ ಪಬ್ಲಿಕ್ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಹೇಶ್ ಗೌಡ, ಪಂಚಾಯತ್ ಡೆವಲಪ್ಮೆಂಟ್ ಆಫೀಸರ್ ಆದ ಕಾಂತರಾಜ್, ವೀರಾರೆಡ್ಡಿ ಅವರು ಹಾಜರಿದ್ದು ಶಿಕ್ಷಕರಿಗೆ ಶುಭಾಶಯಗಳನ್ನು ತಿಳಿಸಿದ್ದು ವಿಶೇಷ.
ಸರಳ ಸುಂದರವಾದ ಈ ದಿನಕ್ಕೆ, ಸಂಭ್ರಮದ ಈ ಆಚರಣೆಗೆ ಕರ್ನಾಟಕ ಪಬ್ಲಿಕ್ ಶಾಲೆಯ ಸರ್ವ ಸಿಬ್ಬಂದಿ ವರ್ಗದವರು ಹಾಜರಿದ್ದು ಮಕ್ಕಳ ಆತಿಥ್ಯವನ್ನು ಸ್ವೀಕರಿಸಿ ಮಕ್ಕಳನ್ನು ಆಶೀರ್ವದಿಸಿದರು.
ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ಸಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಗಣ್ಯರ, ಶಿಕ್ಷಕರ ಗಮನ ಸೆಳೆದವು.


ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದ ಕರ್ನಾಟಕ ಪಬ್ಲಿಕ್ ಶಾಲೆಯ ಶಾಲಾ ಸಂಸತ್ ಮಕ್ಕಳಿಗೆ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜವಾಬ್ದಾರಿಯನ್ನು ವಹಿಸಿದಂತಹ ಸಹ ಶಿಕ್ಷಕಿಯಾದ ವೈ ಎಚ್ ಲಕ್ಷ್ಮಿ ದೇವಿ ಅವರ ಅತ್ಯದ್ಭುತ ಮಾರ್ಗದರ್ಶನದಿಂದ ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬಂತು.

ಉಪ ಪ್ರಾಚಾರ್ಯರಾದ ಭಾರತಿ ಜೆ ಅವರ ಸಹಕಾರದಿಂದ ಶಾಲೆಯಲ್ಲಿ ಇಂತಹ ಕಾರ್ಯಕ್ರಮಗಳು ಸಾಧ್ಯವಾಗುತ್ತಿವೆ ಎನ್ನುವುದು ಎಲ್ಲಾ ಶಿಕ್ಷಕರ, ಊರಿನ ಗಣ್ಯರ ಮನದಾಳದ ಮಾತು. ಶಿಕ್ಷಕರಿಗೆ, ಅತಿಥಿಗಳಿಗೆ ಭೋಜನದ ವ್ಯವಸ್ಥೆಯನ್ನು ಮಾಡಿದ್ದ ಮಕ್ಕಳು ಸಂಪೂರ್ಣ ಕಾರ್ಯಕ್ರಮವನ್ನು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟುಕೊಂಡೆ ಸಂಪನ್ನಗೊಳಿಸಿದ್ದು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ತಂದಿತು ಎಂದರೆ ತಪ್ಪಾಗಲಿಕ್ಕಿಲ್ಲ.
ಒಟ್ಟಿನಲ್ಲಿ ಶಿಕ್ಷಕರ ದಿನಕ್ಕೆ ಸೂಕ್ತವಾದ ಕಾರ್ಯಕ್ರಮ ಇದು ಯೆನ್ನುವಂತೆ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here