ರೂ.10 ಮುಖಬೆಲೆಯ ನಾಣ್ಯ ಚಲಾವಣೆ, ಅಧೀಕೃತವಾಗಿ ಸ್ವೀಕರಿಸುವಂತೆ ಸೂಚನೆ: ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ

0
93

BP NEWS: ಬಳ್ಳಾರಿ: ಆಗಸ್ಟ್.29:
ಆರ್.ಬಿ.ಐ.ವು ಸಾರ್ವಜನಿಕರ ವಹಿವಾಟಿನ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕಾಲಕಾಲಕ್ಕೆ ನಾಣ್ಯಗಳನ್ನು ಪರಿಚಯಿಸುತ್ತಿದೆ. ಪ್ರಸ್ತುತ ರೂ.10 ಮುಖ ಬೆಲೆಯ ನಾಣ್ಯ ಚಲಾವಣೆಯಲ್ಲಿದ್ದು, ಅಧೀಕೃತವಾಗಿ ಅವುಗಳನ್ನು ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ವಹಿವಾಟು ಮತ್ತು ಪಾವತಿಗಾಗಿ ರೂ.10 ರೂಪಾಯಿ ನಾಣ್ಯವನ್ನು ಸ್ವೀಕರಿಸಲು ರಿಸರ್ವ್ ಬ್ಯಾಂಕ್ ತೆಗೆದುಕೊಂಡ ಜಾಗೃತಿ ಪ್ರಯತ್ನಗಳ ಹೊರತಾಗಿಯೂ, ಅಂಗಡಿಯವರು, ವ್ಯಾಪಾರಿಗಳು ಮತ್ತು ಸಾಮಾನ್ಯ ಸಾರ್ವಜನಿಕರು ರೂ.10 ನಾಣ್ಯಗಳ ಸ್ವೀಕಾರ ಮತ್ತು ಬಳಕೆಯನ್ನು ನಿರಾಕರಿಸುವುದನ್ನು ರಾಜ್ಯ ಆರ್ಥಿಕ ಇಲಾಖೆಯು ಗಮನಿಸಿದೆ.
ವ್ಯಾಪಾರಿಗಳು, ಸಾರ್ವಜನಿಕರು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ರೂ.10 ನಾಣ್ಯಗಳನ್ನು ಸ್ವೀಕರಿಸಬೇಕು. ಭಾರತೀಯ ನಾಣ್ಯಗಳ ಕಾಯಿದೆ 2011 ರ ಸೆಕ್ಷನ್ 6ರ ಪ್ರಕಾರ ಅದರಲ್ಲಿ ನಿರ್ದಿಷ್ಟಪಡಿಸಿದ ನಾಣ್ಯಗಳು ಕಾನೂನುಬದ್ಧವಾಗಿರುತ್ತವೆ ಎಂದು ಅವರು ತಿಳಿಸಿದ್ದಾರೆ.
ಎಲ್ಲರೂ ದಿನ ನಿತ್ಯದ ವಹಿವಾಟುಗಳಿಗಾಗಿ ಸ್ವೀಕರಿಸಬಹುದಾಗಿದೆ. ರೂ.10 ನಾಣ್ಯಗಳನ್ನು ಸ್ವೀಕರಿಸದಿರುವುದು ನಾಣ್ಯ ಕಾಯ್ದೆ 2011 ರ ಸೆಕ್ಷನ್ 6(1) ರ ಉಲ್ಲಂಘನೆಯಾಗಿದೆ.
ನಾಣ್ಯಗಳ ಬಗ್ಗೆ ತಪ್ಪು ದಾರಿಗೆಖೆಯುವ ಮಾಹಿತಿಯನ್ನು ನಂಬಬಾರದು ಮತ್ತು ವದಂತಿಗಳಿಗೆ ಕಿವಿಗೊಡಬಾರದು. ಎಲ್ಲಾ ಬ್ಯಾಂಕ್‍ಗಳೂ ತಮ್ಮ ವಹಿವಾಟುಗಳಲ್ಲಿ ನಾಣ್ಯಗಳನ್ನು ಸ್ವೀಕರಿಸಲು ಹಾಗೂ ತಮ್ಮ ಎಲ್ಲಾ ಶಾಖೆಗಳಲ್ಲಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ.
ಪ್ರಸ್ತುತ ಚಲಾವಣೆಯಲ್ಲಿರುವ ಎಲ್ಲಾ ನಾಣ್ಯಗಳ ಮಾಹಿತಿಗಾಗಿ www.rbi.org.in/coins ಗೆ ಭೇಟಿ ನೀಡಬಹುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್‍ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here