BP NEWS: ಬಳ್ಳಾರಿ: ಆಗಸ್ಟ್.24: ಬಳ್ಳಾರಿಯ ಸಂಚಾರಿ ಪೊಲೀಸ್ ಠಾಣೆ ಯಲ್ಲಿ ಇಂದು ಶಾಲಾ ವಿದ್ಯಾರ್ಥಿ ಗಳಿಗೆ ಓಪನ್ ಹೌಸ್ ಮೀಟಿಂಗ್ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಹೀರದ ಸೂಗಮ್ಮ ಶಾಲೆ ವಿದ್ಯಾರ್ಥಿಗಳಿಗೆ ಸಂಚಾರಿ ಪೊಲೀಸ್ ಸ್ಟೇಷನ್ ನಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ರವರಾದ ಅಯ್ಯನಗೌಡ ಡಿ ಪಾಟೀಲ್ ರವರು, ಪೊಲೀಸರು ಸೇರಿ ಪೊಲೀಸ್ ರ , ಪೋಲೀಸ್ ಠಣೆಯಲ್ಲಿಯ ಕೆಲಸ ಕಾರ್ಯಗಳನ್ನು ಸವಿವರವಾಗಿ ವಿವರಿಸಿದರು.
ವಿದ್ಯಾರ್ಥಿಗಳು ತಾವುಗಳು ರಸ್ತೆಯಲ್ಲಿ ಸಂಚರಿಸುವಾಗ ಪೊಲೀಸ್ ನಿಯಮಗಳನ್ನು ತಿಳಿದುಕೊಂಡು ರಸ್ತೆಯಲ್ಲಿ ಆಗುವ ಅಪಘಾತ ದಿಂದ ಅಂಗ ವಿಕಲರಾಗಿ ಜೀವನ ದಲ್ಲಿ ನೋವು ಅನುಭವಿಸುವುದು ತಪ್ಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದರು. ಒಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ತಾವುಗಳು ಕಟ್ಟುನಿಟ್ಟಿನ ಸಂಚಾರಿ ನಿಯಮ ಪಾಲಿಸುವಂತೆ ತಿಳಿಸಿದರು. ತಾವುಗಳು ರಸ್ತೆಯಲ್ಲಿ ಸಂಚಾರಿಸುವಾಗ ಅಪಘಾತ ವಾದರೆ ವಿಡಿಯೋ ಮಾಡುವುದು ಬಿಟ್ಟು ಅಪಘಾತಕ್ಕಿಡಾದವರನ್ನು ಆಸ್ಪತ್ರೆಗೆ ಸೇರಿಸುವುದು, ಸೇರಿಸುವುದುದಕ್ಕೂ ಮುಂಚೆ ಪ್ರಥಮ ಚಿಕಿತ್ಸೆ ಕೊಡಲು ತಿಳಿಹೇಳಿದರು. ವಿದ್ಯಾರ್ಥಿಗಳಿಗೆ ತಮ್ಮ ಕುಟುಂಬದವರು ವಾಹನ ತೆಗೆದುಕೊಂಡು ಹೋಗುವಾಗ ಹೆಲ್ಮೆಟ್ ತಪ್ಪದೆ ಬಳಸಲು ತಿಳಿಸಿದರು. ಈ ಕಾರ್ಯಕ್ರಮ ದಲ್ಲಿ ASI ಸೈಫುಲ್ಲಾ ಬಾಗವಹಿಸಿದ್ದರು.