ಕಲಿಸಿದ ಗುರುವನ್ನು ಆತ್ಮೀಯವಾಗಿ ಬೀಳ್ಕೊಟ್ಟ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಗ್ರಾಮಸ್ಥರು.

0
326

BP NEWS: ಬಳ್ಳಾರಿ : ಅಗಸ್ಟ್.18: ಸಂಡೂರು ತಾಲೂಕಿನ ಎಂ.ಬಸಾಪುರ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಶಿಕ್ಷಕರಿಗೆ ದುಃಖದಿಂದ ಬೀಳ್ಕೊಡುಗೆ ಮಾಡಿಕೊಟ್ಟ ವಿದ್ಯಾರ್ಥಿಗಳು ಶಿಕ್ಷಕರು ಗ್ರಾಮಸ್ಥರು.

ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಾಮಸಮುದ್ರ ಗ್ರಾಮದ ಶಿಕ್ಷಕ ತೇಜಮೂರ್ತಿಯವರು 2010 ಮೇ 28ರಂದು ಮೊದಲ ಬಾರಿಗೆ ಶಿಕ್ಷಕರಾಗಿ ಎಂ.ಬಸಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಿಂದಿ ಶಿಕ್ಷಕರಾಗಿ ನೇಮಕಗೊಂಡಿದ್ದರು.

ಸುಮಾರು 13 ವರ್ಷಗಳ ಕಾಲ ಎಂಬಸಾಪುರ ಗ್ರಾಮದಲ್ಲಿ ಶಿಸ್ತಿನಿಂದ “ಸರ್ಕಾರಿ ಕೆಲಸ ದೇವರ ಕೆಲಸ”ದಂತೆ ಶಾಲೆಯ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಟ್ಟು ಕಲಿಕೆಗೆ ಆಗುವ ಅನುಕೂಲತೆ ಮತ್ತು ಮಕ್ಕಳ ತೊಂದರೆಯನ್ನು ನಿವಾರಿಸಿ ಅವರಿಗೆ ಒಳ್ಳೆಯ ಶಿಕ್ಷಣವನ್ನು ಕೊಟ್ಟಿದ್ದಾರೆ. ಕಲಿಕೆಯಲ್ಲಿ ಒಳ್ಳೆಯ ಪಾಠವನ್ನು ಹಾಗೂ ನೀತಿಯ ಪಾಠವನ್ನು ಹೇಳುತ್ತಾ ಮಕ್ಕಳನ್ನು ನಿರಂತರವಾಗಿ ಕಲಿಕೆಯನ್ನು ಮಾಡುತ್ತ ಬಂದಿದ್ದಾರೆ. ಇವರ ಕೈಯಲ್ಲಿ ಓದಿದ ಮಕ್ಕಳು ಪ್ರಸ್ತುತ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ.
ಆದರೆ ಅವರಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಭೋಗೇನಹಳ್ಳಿ ಎಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಆಗಿದ್ದು, ಅದರ ನಿಮಿತ್ತ ಶಾಲೆಯ ಸಿಬ್ಬಂದಿ ವರ್ಗದವರು ಹಳೆಯ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ ಅವರಿಗೆ ದುಖದ ಬೀಳ್ಕೊಡುಗೆ ಮಾಡಿಕೊಟ್ಟರು.
ಗ್ರಾಮದ ಎಲ್ಲಾ ಗ್ರಾಮಸ್ಥರ ಸಹಕಾರದಿಂದ ಹಾಗೂ ಹಳೆಯ ವಿದ್ಯಾರ್ಥಿಗಳು ನಮ್ಮ ಶಿಕ್ಷಕರ ಸಿಬ್ಬಂದಿ ವರ್ಗದವರು 13 ವರ್ಷ ಮೂರು ತಿಂಗಳ ಕಾಲ ಸೇವೆಸಲ್ಲಿದ ಅವಧಿಯಲ್ಲಿ, ನಮಗೆ ಅತ್ಯಂತ ಸಲಹೆಯೊಂದಿಗೆ ಗ್ರಾಮಸ್ಥರು ವಿದ್ಯಾರ್ಥಿಗಳು ನಿಮ್ಮ ಪ್ರೀತಿ ಸದಾ ಹೀಗೆ ಇರುತ್ತೆ ನಾನೆಂದಿಗೂ ಗ್ರಾಮಕ್ಕೆ ಹಾಗೂ ಶಾಲೆಗೆ ಚಿರಋಣಿಯಾಗಿರುತ್ತೇನೆ. ಎಂದು ವರ್ಗಾವಣೆಗೊಂಡ ಹಿಂದಿ ಶಿಕ್ಷಕರಾದ ತೇಜ ಮೂರ್ತಿಯವರು ಮಾತನಾಡಿದರು.


ಕಾರ್ಯಕ್ರಮದಲ್ಲಿ ಶಾಲೆಯ ಸಹಶಿಕ್ಷಕರು ಜೊತೆ ಮುಖ್ಯ ಗುರುಗಳು ಓಬಳೇಶ್, ಎಸ್ಡಿಎಂಸಿ ಅಧ್ಯಕ್ಷರಾದ ಯಲ್ಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವರಲಕ್ಷ್ಮಿ ರುದ್ರಪ್ಪ, ಸದಸ್ಯರಾದ ಕೇಶವ, ಊರಿನ ಮುಖಂಡರಾದ ತಿಪ್ಪೇಸ್ವಾಮಿ, ಹಾಗೂ ಹಳೆಯ ವಿದ್ಯಾರ್ಥಿಗಳಾದ ಚಂದ್ರು ಬಸಾಪುರ ದೇವರಾಜ್ ಕೆ. ತಿಪ್ಪೇಸ್ವಾಮಿ. ಅರುಣ್ ಕುಮಾರ್ ಶ್ರೀರಾಮ್ ಕಾರ್ತಿಕ್. ಶಿವರಾಜ್. ನಟರಾಜ್ ಹಾಗು ಹಳೆಯ ವಿದ್ಯಾರ್ಥಿಗಳು ಸೇರಿ ಬಿಳ್ಕೊಡುಗೆ ಮಾಡಿಕೊಟ್ಟರು.

LEAVE A REPLY

Please enter your comment!
Please enter your name here