ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆಯಲ್ಲಿ ರಾಷ್ಟ್ರ ಧ್ವಜಾರೋಹಣ

0
180

‌BP NEWS: ಬಳ್ಳಾರಿ: ಆಗಸ್ಟ್.೧೫: ಸ್ವಾತಂತ್ರ್ಯ ವು ನಮ್ಮ ಜನ್ಮಸಿದ್ಧ ಹಕ್ಕೆಂದು ಭಾವಿಸಿದ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ಲಾಠಿಯೇಟು,ಬೂಟಿನೊದೆತ,
ಸಿಡಿಗುಂಡುಗಳಿಗೆ ಜಗ್ಗದೆ ಎದೆಕೊಟ್ಟು ಹೋರಾಟ ಮಾಡಿ ಸ್ವಾತಂತ್ರ್ಯಸಂಭ್ರಮದ ಹಣತೆಗಳಾಗಿದ್ದಾರೆ.ಅವರ ತ್ಯಾಗ ಬಲಿದಾನಗಳ ಬೆಳಕಿನಲ್ಲಿ ಬಲಿಷ್ಠ ಭಾರತವು ನಿರ್ಮಾಣಗೊಳ್ಳಬೇಕಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಅಧ್ಯಕ್ಷ ,ಸಾಹಿತಿ ಸಿದ್ದರಾಮ ಕಲ್ಮಠ ಹೇಳಿದರು.

ಅವರು ಕಿತ್ತೂರು ರಾಣಿ ಚನ್ನಮ್ಮ ಪ್ರೌಢಶಾಲೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಮಹಾತ್ಮ ಗಾಂಧೀಜಿ,ಸುಭಾಷ್ ಚಂದ್ರಭೋಸ್,ಭಗತ್ ಸಿಂಗ್,ಖುದಿರಾಮ್ ಬೋಸ್,ಬಾಲಗಂಗಾಧರ್ ತಿಲಕ್,ಸರ್ದಾರ್ ವಲ್ಲಭಭಾಯಿ ಪಟೇಲ್,ಚಂದ್ರಶೇಖರ ಅಜಾದ್ ಹೀಗೆ ನೂರಾರು ದೇಶಭಕ್ತರ ಅವಿರತ ಹೋರಾಟಗಳ ಫಲದಿಂದ ದೇಶವು ಪರಕೀಯರ ಕಪಿಮುಷ್ಟಿಯಿಂದ ಪಾರಾಯಿತು.ದೇಶದ ಹಿರಿಮೆ ಗರಿಮೆಗಳ ಸ್ವಾಭಿಮಾನವು ಪ್ರತಿಯೊಬ್ಬ ಭಾರತೀಯರ ಧಮನಿಗಳಲಿ ಹರಿದಾಗ ಮಾತ್ರ ನವಭಾರತ ಸಂಕಲ್ಪವು ಸಾಕಾರಗೊಳ್ಳವದು. ಅವರ ಹೋರಾಟವು ವ್ಯರ್ಥವಾಗದೆ ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ಏಳಿಗೆಗೆ ದುಡಿಯಬೇಕು.ಭ್ರಷ್ಟಾಚಾರ,ಸ್ವಜನ ಪಕ್ಷಪಾತ,ಮತೀಯವಾದ ಗಳನ್ನು ಬಿಟ್ಟು ರಾಷ್ಟ್ರದ ಸರ್ವಾಂಗೀಣ ವಿಕಾಸಕ್ಕೆ ಸರ್ವರೂ ಕೈ ಜೋಡಿಸಿದಾಗ ಮಾತ್ರ ಸ್ವಾತಂತ್ರ್ಯ ಸಂಭ್ರಮಕ್ಕೆ ನಿಜಾರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ವೇದಿಕೆಯಲ್ಲಿ ಆಡಳಿತ ಮಂಡಳಿ ಸದಸ್ಯರಾದ ಅರವಿ ಶರಣಗೌಡ,ಪ್ರಾಥಮಿಕ ,ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಗಿರಿಜಾ, ಕಟ್ಟೆಮ್ಮ ,ಎಸ್,ತಿಪ್ಪೇರುದ್ರ ಹಾಗೂ ಶಾಲೆಯ ಶಿಕ್ಷಕ-ಶಿಕ್ಷಕಿಯರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಸುಮಲತ,ಭೂಮಿಕಾ ಸಂಗಡಿಗರು ಪ್ರಾರ್ಥಿಸಿದರು.ಸಹನಾ ಸ್ವಾಗತಿಸಿದರು,ಜೆ.ಎಂ.ಅಶ್ವಿನಿ ವಂದಿಸಿದರು.

LEAVE A REPLY

Please enter your comment!
Please enter your name here