BP NEWS: ಬಳ್ಳಾರಿ: ಆಗಸ್ಟ್.14:
ನಗರದ ಟಿಬಿ ಸ್ಯಾನಿಟೋರಿಯಂ ಹತ್ತಿರ ವಿಮ್ಸ್ ಸೂಪರ್ ಸ್ಪೆಶಾಲಿಟಿ ಟ್ರಾಮಾಕೇರ್ ಸೆಂಟರ್ ಆವರಣದಲ್ಲಿ ಬಡ ಜನರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಔಷಧಿಗಳನ್ನು ಒದಗಿಸುವ ಉದ್ದೇಶದಿಂದ ಶುಕ್ರವಾರ ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಮಳಿಗೆಯನ್ನು ಪ್ರಾರಂಭಿಸಲಾಗಿದೆ.
ಜನ ಔಷಧಿ ಕೇಂದ್ರ ಮಳಿಗೆಯಲ್ಲಿ ಶೇ ೫೦% ರಿಂದ ೮೦% ರಷ್ಟು ಕಡಿಮೆ ದರದಲ್ಲಿ ಔಷಧಿಗಳು ಲಭ್ಯ ಇದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊ ಳ್ಳಬಹುದು ಎಂದು ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರದ ವ್ಯವಸ್ಥಾಪಕರು ತಿಳಿಸಿದ್ದಾರೆ.