ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿರವ ಬಳ್ಳಾರಿಯ ವಾಸವಿ ಶಾಲೆ : ಸೊಂತ ಗಿರಿಧರ್

0
833

Ballari 02.08.2023, Bisiloorapost Daily , BP NEWS Karanataka : 

ಬಳ್ಳಾರಿಯ ಆರ್ಯ ವೈಶ್ಯ ಅಸೋಸಿಯೇಷನ್ ಮತ್ತು ಶ್ರೀ ವಾಸವಿ ಎಜುಕೇಷನ್ ಟ್ರಸ್ಟಿನಾ ಸಮಸ್ಯೆ ನ್ಯಾಯಾಲಯದ ಮೆಟ್ಟಿಲೇರಿದ್ದು ಆರ್ಯ ವೈಶ್ಯ ಸಮುದಾಯಕ್ಕೆ ಮುಜುಗರ ತಂದಿತ್ತು. ಅಲ್ಲದೇ ವಾಸವಿ ಎಜುಕೇಷನ್ ಟ್ರಸ್ಟಿನವರು ಪತ್ರಿಕೆಗಳಲ್ಲಿ ಹೇಳಿಕೆಯನ್ನು ನೀಡುತ್ತಿರುವುದು ಕೂಡ ಬಳ್ಳಾರಿಯ ಆರ್ಯ ವೈಶ್ಯ ಅಸೋಸಿಯೇಷನ್ ಅಸಮಧಾನಕ್ಕೆ ಕಾರಣವಾಗಿತ್ತು. ಈಗ ಈ ಎಲ್ಲಾ ಬೆಳವಣಿಗೆಗಳನ್ನು ಖಂಡಿಸಿ, ಆರ್ಯ ವೈಶ್ಯ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯವರು ಪ್ರಕಟಣೆಯನ್ನು ಹೊರಡಿಸಿದ್ದು ಸದ್ಯ ಸಂಚಲನವನ್ನು ಮೂಡಿಸಿದೆ.

ಪ್ರಕಟಣೆಯ ಪ್ರಮುಖ ಅಂಶಗಳು :

  • ಬಳ್ಳಾರಿಯ ವಾಸವಿ ಎಜುಕೇಷನ್ ಟ್ರಸ್ಟಿನವರು ಲೀಜ್ ಡೀಡ್, ಜಾಗದ ಮಾಲೀಕರ ಸಹಿ, ಕರ್ನಾಟಕ ಎಜುಕೇಷನ್ ವೆಬ್‌ಸೈಟ್‌ನಲ್ಲಿ ನೋಂದಣಿಯೇ ಇಲ್ಲದೇ  ಶ್ರೀ ವಾಸವಿ ಶಾಲೆ ನಡೆಸುತ್ತಿರವುದು ಎಷ್ಟು ಸರಿ..?

• 1986 ರಲ್ಲಿ ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ಇನವರಿಗೆ 2.08 ಎಕರೆ ಜಾಗದಲ್ಲಿರುವ ಕಟ್ಟಡವನ್ನು ಆರ್ಯ ವೈಶ್ಯ ಅಸೋಸಿಯೇಷನ್  ನವರು30 ವರ್ಷಕ್ಕೆ ಲೀಜ್ ಒಪ್ಪಂದ ಮಾಡಿಕೊಡಲಾಗಿತ್ತು, ಈಗ ಆ ಒಪ್ಪಂದ 2016ಕ್ಕೆ ಮುಕ್ತಾಯವಾಗಿದೆ.

• ಆರ್ಯವೈಶ್ಯ ಸಂಘವು, ನಗರದ ಇನ್ಫಟ್ರಿ ರಸ್ತೆಯಲ್ಲಿರುವ 2.08 ಎಕರೆ (96 ಸಾವಿರ ಚದುರ ಅಡಿ ) ಜಾಗದಲ್ಲಿ ಅಂದರೆ ವಾಸವಿ ಶಾಲೆಯ ಆವರಣದಲ್ಲಿ 10 ಸಾವಿರ ಚದರ ಅಡಿಯಲ್ಲಿ ಬಳ್ಳಾರಿಯ ಜನತೆಯ ಆರೋಗ್ಯದ ದೃಷ್ಟಿಯಿಂದ ಡಯಾಲಿಸಿಸ್ ಮತ್ತು ಪಿಜಿಯೋಥೆರಪಿಗಳನ್ನು ಬಡವರಿಗೆ ರೂ.5.00 ಕೋಟಿ ಗಳನ್ನು ಖರ್ಚುಮಾಡಿ ಕಟ್ಟಡವನ್ನು ಕಟ್ಟಲಿಕ್ಕೆ ತಯಾರಾಗಿದ್ದಾರೆ. ಇದನ್ನೇ ತಪ್ಪೆಂದು ಈಗ  ಹೈ ಕೋರ್ಟೆ್ಗಗೆ ಅರ್ಜಿ ಸಲ್ಲಿಸಿದ್ದಾರೆ.

• ಇಂದು ಒಟ್ಟು 2.08 ಎಕರೆ ಆಸ್ತಿಯನ್ನು ವಾಸವಿ ಎಜುಕೇಷನ್ ಟ್ರಸ್ಟ್ಗೆ ಸೇರಿದೆ ಎಂದು ಬಳ್ಳಾರಿ ಕೋರ್ಟ್ನಲ್ಲಿ ಕೇಸ್ ಫೈಲ್ ಮಾಡಿದ್ದಾರೆ.

• ಡಿ.ಡಿ.ಪಿ.ಐ, ಬಳ್ಳಾರಿ ಅವರನ್ನು ಕರೆಸಿ ಇದರ ಬಗ್ಗೆ ವಿಚಾರಿಸಲು ಅಂದರೆ ಈ ಆಫೀಸರ್‌ಗಳು ಯಾವ ತರಹವಾಗಿ ಪ್ರತಿವರ್ಷವೂ ಲೈಸೆನ್ಸನ್ನು 2016 ರಿಂದ ಈ 7 ವರ್ಷದ ವರೆಗೆ ಲ್ಲೇಜ್ ಡೀಡ್ ಇಲ್ಲದೆ ಕೊಟ್ಟಿರುತ್ತಾರೆ ಎಂಬುದು ಕೇಳಬೇಕಾಗಿದೆ.

• ಆರಂಭದಲ್ಲಿ ವಾಸವಿ ಶಾಲೆಯಲ್ಲಿ 2 ಸಾವಿರ ಮಕ್ಕಳಿದ್ದರು. ಈಗ ಕೇವಲ ಅಂದಾಜು 425 ಇರಬಹುದು ಸುಮಾರು ಮಂದಿ ಇರುವ ಡಿ.ಫಾರ್ಮ ಕೋರ್ಸನ್ನು ತೆಗೆದುಹಾಕಲಾಗಿದೆ. ಪಿ.ಯು.ಸಿ. ಕೂಡ ಇತ್ತು, ಆದರೇ ಅವರುಗಳು ಪಿ.ಯು.ಸಿ ಕ್ಲಾಸುಗಳನ್ನು ನಡೆಸುವುದಕ್ಕೆ ಆಗಲಿಲ್ಲ. 2005 ರಲ್ಲಿ ವಿನಾಯಕ ಎಜುಕೇಷನ್ ಸೊಸೈಟಿಗೆ ಪಿ.ಯು ಕಾಲೇಜು ನಡೆಸಲು ಸಬ್ ಲೀಜ್ ನೀಡಿದ್ದರು. ಇಂದು ಅದುಕೂಡ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.

• ನಮಗೆ ಕೇವಲ 10 ಸಾವಿರ ಚದುರ ಅಡಿಗಳನ್ನು ಸಾರ್ವಜನಿಕ ಮತ್ತು ಬಡವರು ಪ್ರಯೋಜನೆಗಾಗಿ ಕೇಳಿದ್ದಕ್ಕೆ ಈಗ ಇಲ್ಲಸಲ್ಲದ ಅಪವಾದಗಳನ್ನು ಮಾತನಾಡುವ ಅವರನ್ನು ಏನು ಅಂತೆ ಕರೆಯಬೇಕು ತಾವೇ

• ಎಲ್ಲಾ ಪ್ರೆಸ್‌ನವರು ಡಿ.ಡಿ.ಪಿ.ಐ, ಬಳ್ಳಾರಿ ಅವರನ್ನು ಕರೆಸಿ ಇದರ ಬಗ್ಗೆ ವಿಚಾರಿಸಲು ಅಂದರೆ ಈ ಆಫೀಸರ್‌ಗಳು ಯಾವ ತರಹವಾಗಿ ಪ್ರತಿವರ್ಷವೂ ಲೈಸೆನ್ಸನ್ನು 2016 ರಿಂದ ಈ 7 ವರ್ಷದ ವರೆಗೆ ಲ್ಲೇಜ್ ಡೀಡ್ ಇಲ್ಲದೆ ಕೊಟ್ಟಿರುತ್ತಾರೆ ಎಂಬುದು ಕೇಳಬೇಕಾಗಿದೆ.

• ಸ್ವಂತವಾಗಿ 13.40 ಎಕರೆಗಳು ಹೊಸಪೇಟೆ ರಸ್ತೆಯಲ್ಲಿ ಇದ್ದರೂ ಸಹ ಅವರುಗಳು,

ಪ್ರಕಟಣೆಯಲ್ಲಿ ತಿಳಸಿದಂತೆ,

ಶ್ರೀ ವಾಸವಿ ಎಜುಕೇಷನ್ ಟ್ರಸ್ಟ್ ಇವರು ಬಳ್ಳಾರಿ ನಗರದ ಇನ್ಫಟ್ರಿ ರಸ್ತೆಯಲ್ಲಿರುವ ವಾಸವಿ ಶಾಲೆಯನ್ನು ನಡೆಸುತ್ತಿದ್ದಾರೆ. ಆ ಜಾಗ ಮೂಲತಃ ನಮ್ಮ ಆರ್ಯವೈಶ್ಯ ಅಸೋಸಿಯೇಷನ್‌ಗೆ ಸೇರಿದ್ದಾಗಿದ್ದು, 1969 ರಲ್ಲಿ ಸರ್ಕಾರದಿಂದ ನಮ್ಮ ಸಂಸ್ಥೆಗೆ 2.08 ಎಕರೆ ಜಮೀನನ್ನು (ಸರ್ವೆ ನಂ.522/ಬಿ) ಶಿಕ್ಷಣ ಮತ್ತು ಹಾಸ್ಟೆಲ್‌ಗಾಗಿ ಸರ್ಕಾರ ಈ ಜಮೀನು ನೀಡಿದ್ದು, ಎಲ್ಲರಿಗೂ ಗೊತ್ತಿರುವ ವಿಚಾರ. ಅಂದಿನಿAದ ಆರ್ಯವೈಶ್ಯ ಅಸೋಸಿಯೇಷನ್ ಅಂದಿನಿAದ ಆರ್ಯವೈಶ್ಯ ಸ್ಕೂಲ್ ಕಮಿಟಿ ಮಾಡಿ ಶಿಕ್ಷಣ ನೀಡುತ್ತಿತ್ತು.
1986 ರಲ್ಲಿ ವಾಸವಿ ಎಜುಕೇಷನ್ ಟ್ರಸ್ಟನ್ನು ಮುಂದುವರಿಸುವುದಾಗಿ ಹೇಳಿ 2.08 ಎಕರೆ ಜಾಗದಲ್ಲಿರುವ ಕಟ್ಟಡವನ್ನು 30 ವರ್ಷಕ್ಕೆ ಲೀಜ್ ಒಪ್ಪಂದ ಮಾಡಿಕೊಡಲಾಗಿತ್ತು, ಈಗ ಆ ಒಪ್ಪಂದ 2016ಕ್ಕೆ ಮುಕ್ತಾಯವಾಗಿದೆ. ಶಿಕ್ಷಣ ಸಂಸ್ಥೆ ನಡೆಯುತ್ತಿದೆ ಎಂದು ನಮ್ಮ ಸಂಸ್ಥೆ ಯಾವುದೇ ತಕರಾರು ಮಾಡದೇ ಸುಮ್ಮನಿದ್ದೆವು. ಅವರು ವರ್ಷಕ್ಕೆ ರೂ.5,000/- ಪ್ರಕಾರ ಕಟ್ಟುತ್ತಿದ್ದರು ಮತ್ತು ಪ್ರತಿ 10 ವರ್ಷಕ್ಕೊಮ್ಮೆ ರೂ.1,250/- ಗಳನ್ನು ಹೆಚ್ಚು ಮಾಡುತ್ತಿದ್ದರು.
ಈಗ ಮುಂದುವರೆದು ಆರ್ಯವೈಶ್ಯ ಸಂಘ ಬಳ್ಳಾರಿಯ ಜನತೆಯ ಆರೋಗ್ಯದ ದೃಷ್ಟಿಯಿಂದ ಡಯಾಲಿಸಿಸ್ ಮತ್ತು ಪಿಜಿಯೋಥೆರಪಿಗಳನ್ನು ಬಡವರಿಗೆ ರೂ.5.00 ಕೋಟಿ ಗಳನ್ನು ಖರ್ಚುಮಾಡಿ ಕಟ್ಟಡವನ್ನು ಕಟ್ಟಲಿಕ್ಕೆ ತಯಾರಾಗಿದ್ದೇವೆ. ಪ್ರತಿವಾರ ಸುಮಾರು 250 ಮಂದಿ ರೋಗಿಗಳು ಬಳ್ಳಾರಿಗೆ ಬಂದು ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ. ಅವರಿಗೆ ತಿಂಗಳಿಗೆ ರೂ.15,000/- ರಿಂದ ರೂ.20,000/- ಖರ್ಚು ಆಗುತ್ತದೆ. ನಮ್ಮ ಡಯಾಲಸ್ ಸೆಂಟರ್ ಅಲ್ಲಿ ಕೇವಲ ರೂ.2,500/- ರಿಂದ ರೂ.4,000/- ಗಳ ಒಳವೆ ಖರ್ಚು ಆಗುತ್ತದೆ. ಬಡವರಿಗೆ ಉಪಯೋಗವಾಗುತ್ತದೆ.
ವಾಸವಿ ಶಾಲೆಗೆ ನಾವು ನೀಡಿದ ಆ ಜಾಗ 96 ಸಾವಿರ ಚದುರ ಅಡಿ ಇದೆ. ಇದರಲ್ಲಿ 10 ಸಾವಿರ ಚದರ ಅಡಿ. ಕಾರಣ ಡಯಾಗ್ನೋಶ್ಟಿಕ್ ಸೆಂಟರ್ ಆರಂಭಿಸಬೇಕೆAದು ನಿರ್ಧರಿಸಿರುವುದು. ಶಿಕ್ಷಣ ಮತ್ತು ಆರೋಗ್ಯ ಎರಡು ಪುರೈಸಿದರೆ ನಮ್ಮ ಸಮುದಾಯಕ್ಕೆ ಮತ್ತು ಈ ಅಸೋಸಿಯೇಷನ್‌ಗೆ ಸಮಾಜದಲ್ಲಿ ಗೌರವಯುತವಾಗಿರುತ್ತದೆ ಎಂದು ಹೇಳಿದ್ದೆವು.
ಈಗಾಗಲೇ ಸ್ವತಃ ಡಿ.ಸಿ.ಯವರೇ ಸಾರ್ವಜನಿಕರ ಹಿತಕ್ಕಾಗಿ ಈ ನಡೆಯನ್ನು ಮೆಚ್ಚಿ ಆ ಜಾಗದಲ್ಲಿ ಡಯಾಲಿಸಿಸ್ ಮತ್ತು ಫಿಜಿಯೋಥೆರಪಿ ಘಟಕವನ್ನು ಮಾಡಲು ಅನುಮತಿಯ ಪತ್ರವನ್ನು ನೀಡಿದ್ದಾರೆ. ಉಪ ಜಿಲ್ಲಾಧಿಕಾರಿಗಳು (ಎ.ಸಿ) ಮತ್ತು ಸರ್ವೆಯರ್‌ಗಳು ಈ ಜಾಗವನ್ನು ಖುದ್ದಾಗಿ ಪರಿಶೀಲಿಸಿ ವಿವರವಾದ ವರದಿಯನ್ನು ನೀಡಿರುತ್ತಾರೆ. ಇದಕ್ಕಾಗಿ ಎಲ್ಲಾ ತರಹದ ಚರ್ಯೆಗಳನ್ನು ತೆಗೆದುಕೊಂಡಿರುತ್ತಾರೆ. ವಾಸವಿ ಎಡುಕೇಷನ್ ಟ್ರಸ್ಟ್ ಒಂದು ಕೇಸನ್ನು ಜಿಲ್ಲಾಧಿಕಾರಿಗಳು, ಉಪ ಜಿಲ್ಲಾಧಿಕಾರಿಗಳು, ಎ.ವಿ.ಎ ಮತ್ತು ಬುಡಾ ಚೇರ್‌ಮೆನ್ ಇದರಬಗ್ಗೆ ವಿರುದ್ಧವಾಗಿ ಇವರುಗಳು ಸರಿಯಾಗಿ ಮಾಡಿಲ್ಲವೆಂದು ಹೈ ಕೋರ್ಟ್ನಲ್ಲಿ ಕೇಸ್ ಹಾಕಿರುತ್ತಾರೆ. ಇಬ್ಬರು ಐ.ಎ.ಎಸ್ ಮತ್ತು ಒಬ್ಬ ಕೆ.ಎ.ಎಸ್ ಅಧಿಕಾರಿಗಳು ತಪುö್ಪ ಮಾಡಲಿಕ್ಕೆ ಸಾಧ್ಯವೇ? ಬಡ ಪ್ರಜೆಗಳಿಗೆ ಅನುಕೂಲವಾಗಬೇಕೆಂದು ಕಾರ್ಯಾಚರಣೆ ಮಾಡುವುದು ತಪ್ಪೇ?
ಇಂದು ಒಟ್ಟು 2.08 ಎಕರೆ ಆಸ್ತಿಯನ್ನು ಅವರ ಟ್ರಸ್ಟ್ಗೆ ಸೇರಿದೆ ಎಂದು ಬಳ್ಳಾರಿ ಕೋರ್ಟ್ನಲ್ಲಿ ಕೇಸ್ ಫೈಲ್ ಮಾಡಿದ್ದಾರೆ.
ಆರ್ಯವೈಶ್ಯ ಅಸೋಸಿಯೇಷನ್ ಅಷ್ಟು ಜಾಗವನ್ನು ನಮಗೆ ಬಿಟ್ಟುಕೊಟ್ಟಿದೆ. ಹಾಗಾಗಿ ಆ ಜಾಗ ಶ್ರೀ ವಾಸವಿ ಎಜುಕೇಷನ್ ಸಂಸ್ಥೆಗೆ ಸೇರಿದ ಅಂತಾ ಹೇಳಿಕೆ ಕೊಟ್ಟವರು ಕಳೆದ ವಾರ ಮತ್ತೆ 30 ವರ್ಷಗಳಿಗೆ ಲೀಜ್ ರಿನಿವಲ್ ಮಾಡಿಕೊಡಿ ಅಂತ ವಿನಂತಿ ಮಾಡಿ ನಮ್ಮಗೆ ಪತ್ರಬರೆದಿದ್ದಾರೆ.
ಹೈ ಕೋರ್ಟ್ನಲ್ಲಿ ಅವರುಗಳು ಇದರ ಬಾಡಿಗೆಗಳನ್ನು ಸರಿಯಾಗಿ ಕಟ್ಟುತ್ತಾ ಬಂದಿರುತ್ತಾರೆAದು ಹೇಳಿ ಮತ್ತು ಬಳ್ಳಾರಿ ಕೋರ್ಟ್ನಲ್ಲಿ 2.08 ಎಕರೆಗಳ ಮಾಲೀಕರಾಗಿ ರುತ್ತಾರೆ ಅಂತ ಹೇಳುತ್ತಿದ್ದಾರೆ. ಅವರುಗಳು ಎರಡು ಕೋರ್ಟ್ಗಳಲ್ಲಿ ತಪುö್ಪ ಮಾಹಿತಿ ಕೊಟ್ಟಿದ್ದಾರೆ. ಇಂತಹ ವಿಷಯವನ್ನು ಬಳ್ಳಾರಿಯ ಜನ ಸಾಮಾನ್ಯರು ಸರಿ ಎಂದು ನಂಬುತ್ತಾರೆಯೇ…? ಇಷ್ಟು ಅನ್ಯಾಯ ಮಾಡಬಹುದೇ?

ಆರಂಭದಲ್ಲಿ ವಾಸವಿ ಶಾಲೆಯಲ್ಲಿ 2 ಸಾವಿರ ಮಕ್ಕಳಿದ್ದರು. ಈಗ ಕೇವಲ ಅಂದಾಜು 425 ಇರಬಹುದು ಸುಮಾರು ಮಂದಿ ಇರುವ ಡಿ.ಫಾರ್ಮ ಕೋರ್ಸನ್ನು ತೆಗೆದುಹಾಕಲಾಗಿದೆ. ಪಿ.ಯು.ಸಿ. ಕೂಡ ಇತ್ತು, ಆದರೇ ಅವರುಗಳು ಪಿ.ಯು.ಸಿ ಕ್ಲಾಸುಗಳನ್ನು ನಡೆಸುವುದಕ್ಕೆ ಆಗಲಿಲ್ಲ. 2005 ರಲ್ಲಿ ವಿನಾಯಕ ಎಜುಕೇಷನ್ ಸೊಸೈಟಿಗೆ ಪಿ.ಯು ಕಾಲೇಜು ನಡೆಸಲು ಸಬ್ ಲೀಜ್ ನೀಡಿದ್ದರು. ಇಂದು ಅದುಕೂಡ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಇದರಿಂದೇನಾಗಿದೆ? ಆರ್ಯವೈಶ್ಯ ಸಂಘದ ಧೇಯೋದ್ದೇಶಗಳು ಯಾರಿಗೂ ಮುಟ್ಟಿಲ್ಲ. ನಮಗೆ ಕೇವಲ 10 ಸಾವಿರ ಚದುರ ಮೀಟರ್‌ಗಳನ್ನು ಸಾರ್ವಜನಿಕ ಮತ್ತು ಬಡವರು ಪ್ರಯೋಜನೆಗಾಗಿ ಕೇಳಿದ್ದಕ್ಕೆ ಈಗ ಇಲ್ಲಸಲ್ಲದ ಅಪವಾದಗಳನ್ನು ಮಾತನಾಡುವ ಅವರನ್ನು ಏನು ಅಂತೆ ಕರೆಯಬೇಕು ತಾವೇ ಹೇಳಿ.

ಯಾವುದೇ ಜಾಗ ಶಿಕ್ಷಣಕ್ಕೆ ನೀಡಿದರೆ ಅದು 30 ವರ್ಷಕ್ಕೆ ರಿಜಿಸ್ಟರ್ ಲೀಸ್ ಡೀಡ್ ಕರಾರನ್ನು ಮಾಡಿ ಇರಬೇಕು. ಇಲ್ಲವೇ ಶಾಶ್ವತವಾಗಿ ಸ್ವಂತ ಆಸ್ತಿಯಾಗಿ ಇರಬೇಕು. ಇದು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿಯಮ. ವಾಸವಿ ಎಜುಕೇಷನ್ ಟ್ರಸ್ಟ್ನವರು ಡಿ.ಡಿ.ಪಿ.ಐ ಅವರಿಗೆ 2016 ರಿಂದ ಇಲ್ಲಿಯವರೆಗೂ ಹೇಗೆ ರಿನಿವಲ್ ಮಾಡಿದ್ದಾರೆ? ಇದು ಎಲ್ಲರೂ ಡಿ.ಡಿ.ಪಿ.ಐ ನವರನ್ನು ಕೇಳಬೇಕಾದ ಪ್ರಶ್ನೆ.

ಈಗಾಗಲೇ ವಾಸವಿ ಎಜುಕೇಷನ್ ಟ್ರಸ್ಟ್ ನವರು 13.4 ಎಕರೆ ಜಾಗವನ್ನ ದಿನಾಂಕ: 24.01.2003 ರಂದು ಕರೀದಿಸಿದ್ದಾರೆ. ಹೊಸಪೇಟೆ ರಸ್ತೆಯಲ್ಲಿರುವ ವೇಣಿವೀರಾಪುರದಲ್ಲಿ ಈ ಜಾಗವನ್ನು ಖರೀದಿ ಮಾಡಿರುತ್ತಾರೆ. 25 ವರ್ಷಗಳಾದರೂ ಅವರಿಗೆ ಶಾಲೆ ಕಟ್ಟಡವನ್ನು ಕಟ್ಟಲಿಕ್ಕೆ ಸಾಧ್ಯವಾಗಿಲ್ಲ.

ಸ್ವಂತವಾಗಿ 13.40 ಎಕರೆಗಳು ಹೊಸಪೇಟೆ ರಸ್ತೆಯಲ್ಲಿ ಇದ್ದರೂ ಸಹ ಅವರುಗಳು, ಅವರು ಒಂದು ಮೆಡಿಕಲ್ ಸೆಂಟರ್ ಬಡವರಿಗೋಸ್ಕರ ಬಳ್ಳಾರಿಯಲ್ಲಿ ಕಟ್ಟುವುದು ತಪುö್ಪ ಅಂತ ಹೈ ಕೋರ್ಟೆ್ಗಗೆ ಅರ್ಜಿ ಸಲ್ಲಿಸಿದ್ದಾರೆ.

ನಮ್ಮ ಷರತ್ತುಗಳಿಗೆ ಬದ್ಧವಾಗಿದ್ದರೆ ಮಾತ್ರ ನಮ್ಮ ಸ್ಥಳದಲ್ಲಿ ನೀವು ಮುಂದುವರೆಸಿಕೊAಡು ಹೋಗಿ ನಮಗೆ ಯಾವುದೇ ಅಭ್ಯಂತರವಿಲ್ಲ. ಇಲ್ಲವಾದರೆ ಜಾಗವನ್ನು ರಿನಿವಲ್ ಮಾಡದೇ ಆ ಶಾಲೆಯನ್ನ ನಮ್ಮ ಸಂಘದ ಧ್ಯೇಯೋದ್ದೇಶಗಳೊಂದಿಗೆ ನಾವು ಮುಂದುವರಿಸುತ್ತೇವೆ ಅಂದು ವಾಸವಿ ಎಜುಕೇಷಣ್ ಟ್ರಸ್ಟ್ ನವರು ಹೇಳಿರುತ್ತಾರೆ ಮತ್ತು ನಾವು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸಮರ್ಥರಾಗಿದ್ದೇವೆ ಮತ್ತು ವಿದ್ಯಾರ್ಥಿಗಳ ಒಟ್ಟಾರೆ ಬೆಳವಣಿಗೆಗಳನ್ನು ಖಚಿತಪಡಿಸುತ್ತೇವೆ. ಇದಕ್ಕೆ ಆರ್ಯ ವೈಶ್ಯ ಅಸೋಸಿಯೇಷನ್ ರವರು ತಯಾರಾಗಿದ್ದೇವೆ.

30 ವರ್ಷ ರಿಜಿಸ್ಟೆçÃಷನ್ ಡೀಡ್ ಇಲ್ಲದೇ 2023-24 ರ ಮಕ್ಕಳ ಹಾಜರಾತಿಯನ್ನ ಶಾಲೆಯಲ್ಲಿ ಪಡೆಯುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ತೊಂದರೆ ಆಗಬಹುದತ್ತು. ಪೋಷಕರಿಗೆ ಗೊಂದಲ ಆಗಬಹುದು. ಇದರಿಂದ ನಮ್ಮ ಸಮಾಜಕ್ಕೆ ಕೆಟ್ಟ ಹೆಸರು ಬರುತ್ತದೆ. ಇದಕ್ಕಾಗಿ ಎಲ್ಲಾ ತರಹದ ಮಾಲೀಕತ್ವದ ಪ್ರೂಫ್‌ಗಳನ್ನು ( 2.08 ಎಕರೆಗಳನ್ನು) ಪ್ರೆಸ್ಸಿಗೆ ಕೂಡಾ ಕಳುಹಿಸಿರುತ್ತೇವೆ.

ಎಲ್ಲಾ ಪ್ರೆಸ್‌ನವರು ಡಿ.ಡಿ.ಪಿ.ಐ, ಬಳ್ಳಾರಿ ಅವರನ್ನು ಕರೆಸಿ ಇದರ ಬಗ್ಗೆ ವಿಚಾರಿಸಲು ಅಂದರೆ ಈ ಆಫೀಸರ್‌ಗಳು ಯಾವ ತರಹವಾಗಿ ಪ್ರತಿವರ್ಷವೂ ಲೈಸೆನ್ಸನ್ನು 2016 ರಿಂದ ಈ 7 ವರ್ಷದ ವರೆಗೆ ಲ್ಲೇಜ್ ಡೀಡ್ ಇಲ್ಲದೆ ಕೊಟ್ಟಿರುತ್ತಾರೆ ಎಂಬುದು ಕೇಳಬೇಕಾಗಿದೆ.

ಇವರುಗಳಿಗೆ ಯಾವ ತರಹವಾದ ಗವರ್ನಮೆಂಟ್ ರೂಲ್ಸ್ಗಳನ್ನು ಅನುಸರಿಸದೆ ಮತ್ತು “ಸ್ಕೂಲ್ 30 ವರ್ಷದ ರಿಜಿಸ್ಟರ್ ಲೀಜ್ ಡೀಡ್ ಇಲ್ಲದೇ ಮತ್ತು ಮಾಲೀಕರ ಸಹಿ ಇಲ್ಲದೇ, ಕರ್ನಾಟಕ ಎಜುಕೇಷನ್ ವೆಬ್‌ಸೈಟ್‌ನಲ್ಲಿ ನೋಂದಣಿ ಇಲ್ಲದೇ ಇರುವುದು” ತಪ್ಪಲ್ಲವೇ…? ಇದನ್ನು ನಾವು ಪೂರ್ತಿಯಾಗಿ ಬಳ್ಳಾರಿ ಸಾರ್ವಜನಿಕರು ಮತ್ತು ಪತ್ರಿಕೆ ಮಾಧ್ಯಮದವರ ತೀರ್ಪುಗಾಗಿ ಬಿಟ್ಟುಕೊಟ್ಟಿರುತ್ತೇವೆ.ಇದನ್ನು ಕಟುವಾಗಿ ಖಂಡಿಸುತ್ತೇವೆ.ಸತ್ಯಮೇವ ಜಯತೆ… “ ಎಂದು ಕಟುವಾಗಿ ಠೀಕಿಸಿದ್ದಾರೆ.

ದಿನ ದಿನಕ್ಕೆ ಬಿಕ್ಕಟ್ಟು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ಪಾಲಕರು ಚಿಂತಿಸುವಂತಾಗಿದೆ. ಅಲ್ಲದೆ ಬಳ್ಳಾರಿಗೆ ತಮ್ಮದೆಯಾದ ಕೊಡುಗೆಯನ್ನು ನೀಡಿರುವ ಆರ್ಯ ವೈಶ್ಯ ಸಮುದಾಯಕ್ಕೆ ಮುಜುಗರವನ್ನುಂಟು ಮಾಡುತ್ತಿದ್ದು, ಸಮುದಾಯದ ಹಿರಿಯರು ಈ ವೊಂದು ಗೊಂದಲಕ್ಕೆ ತೆರೆ ಎಳೆದು ಶಮನಗೊಳಿಸುತ್ತಾರಾ?? ಅನ್ನುವುದನ್ನಾ ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here