BP NEWS: ಸಿಂಧನೂರು: ಜುಲೈ.29: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಿಂಧನೂರಿನ ಸಂತೋಷ್ ಅಂಗಡಿ ನಿವಾಸಕ್ಕೆ ಭೇಟಿ ನೀಡಿರುವ ವಿಚಾರ ಇದೀಗ ಚರ್ಚೆಯ ವಿಷಯವಾಗಿದೆ. ಶೆಟ್ಟರ್ ಅಂಗಡಿ ನಿವಾಸಕ್ಕೆ ಬರುತ್ತಿದ್ದಂತೆಯೇ ಜಿಲ್ಲಾ ಪಂಚಾಯತ್ ಚುನಾವಣೆಗೆ ಸಂತೋಷ್ ಸ್ಪರ್ಧಿಸುವುದು ಖಚಿತಾನಾ..? ಎಂದು ಸ್ಥಳೀಯ ಚರ್ಚಿಸುತ್ತಿದ್ದಾರೆ.
ಕಾಂಗ್ರೆಸ್ ಯುವ ನಾಯಕ ಸಂತೋಷ ಅಂಗಡಿ ಚುನಾವಣೆಯ ಸಂದರ್ಭದಲ್ಲಿ ಶೆಟ್ಟರ್ ಬಳಿ ಇದ್ದರು. ಕರ್ನಾಟಕ ವಿಧಾನಸಭೆ ಚುನಾವಣೆಗೆ ಶೆಟ್ಟರ್ ಪರವಾಗಿ ಚುನಾವಣೆಯಲ್ಲಿ ಸಾಕಷ್ಟು ಓಡಾಡಿಕೊಂಡಿದ್ದರು. ಇಷ್ಟು ಮಾತ್ರ ಜನರಿಗೆ ಗೊತ್ತಿತ್ತು. ಯಾವಾಗ ಜಗಧೀಶ್ ಶೆಟ್ಟರ್ ಸಂತೋಷ್ ನಿವಾಸಕ್ಕೆ ಬೇಟಿ ನೀಡಿ, ಅವರ ಕುಟುಂಬದೊಂದಿಗೆ ಕೆಲ ಸಮಯ ಕಳೆದು, ಕುಶಲೊಪರಿ ವಿಚಾರಿಸಿದರೋ ಆಗಿನಿಂದ ಸಂತೋಷ್ ಅಂಗಡಿ ಜಿಲ್ಲಾ ಪಂಚಾಯತ್ ಚುನಾವಣೆಗೆ ನಿಲ್ಲುತ್ತಾರಾ?ನಿಗಮ ಮಂಡಳಿಯ ಮೇಲೇನಾದರೂ ಕಣ್ಣಿಟ್ಡಿದ್ದಾರಾ..? ಯಾವಾ ಕ್ಷೇತ್ರ..? ಯಾವ ನಿಗಮ ಮಂಡಳಿ..? ಎನ್ನುವುದು ನೋಡಬೇಕಾಗಿದೆ.
ಶೆಟ್ಟರ್ ಗೆ ಸನ್ಮಾನ:
ಸಿಂಧನೂರಿಗೆ ಭೇಟಿ ನೀಡಿದ್ದ ಮಾಜಿ ಸಿಎಂ ಜಗಧೀಶ್ ಶೆಟ್ಟರ್ ಅವರಿಗೆ ಸಂತೋಷ್ ಅಂಗಡಿ ಕುಟುಂಬದಿಂದ ಸನ್ಮಾನಿಸಲಾಯಿತು. ಇದೇ ವೇಳೆ ನಗರದ ಕಾಂಗ್ರೆಸ್ ನ ಹಲವಾರು ಮುಖಂಡರು ಸಹಿತ ಭೇಟಿ ನೀಡಿ ಶೆಟ್ಟರ್ ಜೊತೆಗೆ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದರಲ್ಲದೆ, ಧುರೀಣರು ಹಾಗೂ ಅಭಿಮಾನಿಗಳು ಸಹ ಶೆಟ್ಟರ್ ಗೆ ಸನ್ಮಾನಿಸಿ ಗೌರವಿಸಿದರು.
ಉನ್ನತ ನಾಯಕರೊಂದಿಗೆ ಒಡನಾಟ:
ಹಾಗೆ ನೋಡಿದರೆ ಸಂತೋಷ್ ಅಂಗಡಿ ಸರಳ ಸಜ್ಜನಿಕೆಯ ರಾಜಕಾರಣ ಮಾಡುತ್ತಲೇ ರಾಜ್ಯ ಕೆಪಿಸಿಸಿ ನಾಯಕರೊಂದಿಗೂ ಉತ್ತಮ ಒಡನಾಟ ಇರಿಸಿಕೊಂಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಕೃಷಿ ಮತ್ತು ಅರಣ್ಯ ಇಲಾಖೆ ಸಚಿವರಾದ ಈಶ್ವರ್ ಖಂಡ್ರೆ, ಕೆಪಿಸಿಸಿಯ ಅಶೋಕ್ ಪಟ್ಟಣ್ ಮತ್ತು ಜಗದೀಶ್ ಶೆಟ್ಟರ್ ಅವರ ಅತ್ಮೀಯತೆ ಗಳಿಸಿದ್ದಾರೆ. ಇನ್ನು ಕಾಂಗ್ರೆಸ್ ನಿಂದ ಜಗದೀಶ್ ಶೆಟ್ಟರ್ ಅವರು ಚುನಾವಣೆಗೆ ಸ್ಪರ್ಧಿಸಿದಾಗ ಸತತ ಮೂರು ತಿಂಗಳು ತಳ ಹಂತದಿಂದ ದುಡಿದಿದ್ದಾರೆ. ಇದು ಈಗ ಇವರಿಗೆ ವರಬಾಗಬಹುದು. ಅ ಹಿನ್ನಲೆಯಲ್ಲಿ ಮುಂದಿನ ಅಂಗಡಿಯವರ ರಾಜಕೀಯ ದಿಕ್ಕು ಯಾವರೀತಿ ಬದಲಾಗುತ್ತದೆ ಅನ್ನುವುದನ್ನ ಕಾದುನೋಡಬೇಕಾಗಿದೆ.
ಸಂಭ್ರಮದ ವಾತಾವರಣ:
ಶೆಟ್ಟರ್ ಅವರ ಸಿಂಧನೂರಿನ ಭೇಟಿ ಸಾಕಷ್ಟು ಕುತೂಹಲಕ್ಕೆಡೆ ಮಾಡಿಕೊಟ್ಟಿದ್ದು, ಸಂತೋಷ್ ಅಂಗಡಿ ನಿವಾಸದಲ್ಲಿ ಸಂಭ್ರಮ ಮನೆ ಮಾಡಿತ್ತು. ಈವೇಳೆ ಸ್ಥಳೀಯ ಮುಖಂಡರಾದ ಮಲ್ಲಿಕಾರ್ಜುನಪ್ಪ ಅಂಗಡಿ, ಸಂಗಮೇಶ ಅಂಗಡಿ. ಶಿವನಗೌಡ ಗೊರೇಬಾಳ, ಜವಳಿ ಶಿವಕುಮಾರ್, ಅಮರೇಶ ಮಾಡ ಶಿರವಾರ, ಹಾಲಯ್ಯ ಹಿರೇಮಠ, ಸಂಗಮೇಶ ಹಿರೇಮಠ, ವಿಜಯ ಮಾಲಿಪಾಟೀಲ್, ಶೇಖರ್ ಯರಿದಿಹಾಳ, ವೀರೇಶರಾರಾವಿ, ಕಿರಣ್ ಜಂಬುನಾಥನಾಳಹಳ್ಳಿ, ಭದ್ರಿಸ್ವಾಮಿ, ಪಂಪಯ್ಯಸ್ವಾಮಿ ನಾಗವಾಣಿ,ಡಿ.ಪಾಟೀಲ್.ಲ, ಚನ್ನಬಸವ ಶಿರಗುಂಪ, ನಾಗರಾಜ ಅಂತರಗಂಗಿ, ಮಹಮ್ಮದ್ ಫಯಾಜ್ ಸುಕಲಪೇಟೆ ಸೇರಿದಂತೆ ಹಲವರು ಉಪಸ್ಥಿತಿತರಿದ್ದರು.