BP NEWS: ಬಳ್ಳಾರಿ: 16/07/2023: ಭಾನುವಾರ ನಗರದ ಡಿ ಆರ್. ಕೆ ರಂಗ ಸಿರಿಯಲ್ಲಿ ಸಿನಿಮಾ ಕಥೆ ಮತ್ತು ಚಿತ್ರಕಥೆ ಬರೆಯೋದು ಹೇಗೆ ಎನ್ನುವ ವಿಷಯ ಕುರಿತು ಒಂದು ದಿನದ ಕಾರ್ಯಗಾರವನ್ನು ರಂಗ ಜಂಗಮ ಸಂಸ್ಥೆ ಡಿಕಗ್ಗಲು ಹಾಗೂ ಅವ್ಯಕ್ತ ಫಿಲಂಸ್ ಸಹಯೋಗ ದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿಬಿರದ ನಿರ್ದೇಶಕರಾದ ಮತ್ತು ಕನ್ನಡ ಸಿನಿಮಾ ನಿರ್ದೇಶಕರು ಸಂತೋಷ್ ಗೋಪಾಲ್ ರೆಡ್ಡಿ ಅವರು ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಾ ಮೀಡಿಯಾ ಮತ್ತು ರಂಗಭೂಮಿಗೆ ಯುವ ಬರಹಗಾರರ ಅವಶ್ಯಕತೆ ಇದೆ ಪ್ರಾದೇಶಿಕ ಭಿನ್ನತೆಗಳನ್ನು ಒಳಗೊಂಡಿರುವ ಕಥೆಗಳು ಕಾದಂಬರಿಗಳು ಮತ್ತು ನಾಟಕ ಹಾಗೂ ಸಿನಿಮಾ ಸ್ಕ್ರಿಪ್ಟ್ಗಳನ್ನ ರಚಿಸುವ ಮೂಲಕ ನಾಡಿಗೆ ಹೊಸ ಆಯಾಮವನ್ನು ಪರಿಚಯಿಸಬೇಕಾದ ಜವಾಬ್ದಾರಿ ಇಂದಿನ ಯುವ ಪೀಳಿಗೆ ಮೇಲಿದೆ ಎಂಬುದಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ನುಡಿಯನ್ನ ಮಾತನಾಡಿ ಇಂತಹ ತರಬೇತಿ ಶಿಬಿರಗಳು ಮತ್ತು ಕಾರ್ಯಗಾರ ಅವಶ್ಯಕತೆ ಇಂದಿನ ಯುವ ಸಮೂಹಕ್ಕೆ ಅವಶ್ಯಕತೆ ಇದೆ ಅದೇ ನಿಟ್ಟಿನಲ್ಲಿ ಈ ಭಾಗದ ಸಮೂಹಕ್ಕೆ ಇದರ ಉಪಯೋಗವಾಗಲಿ ಎಂದು ಈ ಕಾರ್ಯವನ್ನು ಆಯೋಜಿಸಲಾಗಿದೆ ಎಂದು ಡಾ. ಅಣ್ಣಾಜಿ ಕೃಷ್ಣಾರೆಡ್ಡಿ ರಂಗ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದರು ನಂತರ ಕಾರ್ಯಕ್ರಮದ ವೇದಿಕೆಯಲ್ಲಿ ರಂಗಭೂಮಿ ಕಲಾವಿದರಾದ ಅಮರೇಶ್ ಹಚ್ಚೋಳಿಮಠ ಉಪನ್ಯಾಸಕರದ ಕಾಶಿಮಲಿ ಹಾಗೂ ರಂಗಭೂಮಿ ಮತ್ತು ಕಥೆಗಾರರಾದ ಮರಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ನಂತರ ಈ ಕಾರ್ಯಗಾರದ ಶಿಬಿರದಲ್ಲಿ ಶಿಬಿರಾರ್ಥಿಗಳು ಭಾಗವಹಿಸಿದ್ದರು.