ಹಲ್ಲಿ ಬಿದ್ದ ಆಹಾರ ಸೇವಿಸಿ 60 ಶಾಲಾ ವಿದ್ಯಾರ್ಥಿನಿಯರು ಅಸ್ವಸ್ಥ, ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ದರ್ಶನಾಪುರ್

0
679

BP NEWS: ಕಲಬುರ್ಗಿ: ಜುಲೈ.08: ಕೆಂಭಾವಿ ಪಟ್ಟಣದ ಸರ್ಕಾರಿ ಕನ್ಯಾ ಪ್ರೌಢಶಾಲೆಯಲ್ಲಿ ಇಂದು ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಪ್ರಯುಕ್ತ ವಿಧ್ಯಾರ್ಥಿನಿಯರು ಗೊತ್ತಿಲ್ಲದೇ ಊಟ ಮಾಡಿದ ಸಲುವಾಗಿ ಸುಮಾರು 60 ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದು ಅವರನ್ನು ಇಲ್ಲಿಯ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು..

ಸಾಯಂಕಾಲ ಜಿಲ್ಲಾ ಉಸ್ತುವಾರಿ ಸಚಿವರಾದ  ಶರಣಬಸಪ್ಪಗೌಡ ದರ್ಶನಾಪುರ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.
ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದು. ಎಲ್ಲರಿಗೂ ಆರೋಗ್ಯದಿಂದ ಚೇತರಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಈಗಾಗಲೇ ಸಿಬ್ಬಂದಿಗಳು, ತಾಲ್ಲೂಕು ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಚಿಕಿತ್ಸೆ ನೀಡಿದ್ದು, ಎಲ್ಲಾ ಮಕ್ಕಳು ಆರಾಮವಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರೀಮಾ ಪನ್ವಾರ್, ತಾಲೂಕು. ಆರೋಗ್ಯ ಅಧಿಕಾರಿ ರಾಜಾ ವೆಂಕಟಪ್ಪ ನಾಯಕ, ವಾಮನರಾವು ದೇಶಪಾಂಡೆ, ಖಾಜಾಪಟೇಲ್ ಕಾಚೂರ, ಮಹಿಪಾಲರೆಡ್ಡಿ ದಿಗ್ಗಾವಿ, ಬಸವರಾಜ ಪಾಟೀಲ್ ಚಿಂಚೋಳಿ, ಸಾಹೇಬಲಾಲ ಆಂದೇಲಿ, ದೇವಪ್ಪ ಮ್ಯಾಗೇರಿ.
ಪುರಸಭೆ ಸದಸ್ಯರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here