BP NEWS: ಸಿಂಧನೂರು: ಮಾರ್ಚ್.01: ನಗರದ ಪ್ರಮುಖ ಸ್ಥಾನವಾಗಿರುವ ಕೋರ್ಟ್ ಪಕ್ಕದಲ್ಲಿರುವ ಪ್ರವಾಸಿ ಮಂದಿರವು ಈಗ ಅಕ್ಷರಶಃ ನಿರ್ಲಕ್ಷಕ್ಕೆ ಒಳಗಾಗಿದೆ. ಲೋಕೋಪಯೋಗಿ ಇಲಾಖೆ ಅಡಿಯಲ್ಲಿ ಬರುವಂತಹ ಈ ಪ್ರವಾಸಿ ಮಂದಿರದ ಸುತ್ತಲೂ ಯಾವುದೇ ಲೈಟಿನ ವ್ಯವಸ್ಥೆ ಇಲ್ಲದೆ, ಸರಿಯಾದ ಮೂಲ ಭೂತಸೌಕರ್ಯಗಳಿಲ್ಲದೆ ಅನಾಥವಾಗಿದೆ ಅಂದರೆ ತಪ್ಪಾಗಲಿಕ್ಕಿಲ್ಲ ಅಂತ ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಆದರೆ ಬ್ರಹ್ಮಾಂಡ ಬ್ರಷ್ಟಾಚಾರದಲ್ಲಿ ಮುಳುಗಿರುವಂತಹ ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಲು ಸಮಯವಿಲ್ಲ ಅನ್ನುವಂತೆ ವರ್ತಿಸುತ್ತಿರುವುದು ಶೋಚನೀಯವಾಗಿದೆ.
ಹೊರಗಡೆಯಿಂದ ಬಂದ ಸಮಾಜದ ಗಣ್ಯರಿಗೆ, ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ವಸತಿ ಸೌಲಭ್ಯಕ್ಕಾಗಿ ಸರ್ಕಾರ ವಸತಿ ಮಂದಿರವನ್ನು ನಿರ್ಮಿಸಿದರೆ. ಅಧಿಕಾರಿಗಳಿ ಅದನ್ನು ಕಾಪಾಡಿ ಕೊಳ್ಳಬೇಕಾಗುವುದು ಅವರ ಕರ್ತವ್ಯವಾಗಿದೆ.
ಕಳೆದ ತಿಂಗಳು ವ್ಯಕ್ತಿಯೋರ್ವರಿಗೆ ಚೇಳಿ ಕಚ್ಚಿ ಆಸ್ಪತ್ರೆಗೆ ದಾಖಲಾದ ಘಟನೆ ಇನ್ನು ಮಾಸಿಲ್ಲ ಹಾಗಾಗಿ ಆದಷ್ಟು ಬೇಗ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಬೇಸುತ್ತಾರಾ ಕಾದು ನೋಡಬೇಕಲ್ಲವೇ ಅಂತ ಹೋರಾಟಗಾರರೊಬ್ಬರು ಪತ್ರಿಕೆಗೆ ಮನವಿ ಮಾಡಿಕೊಂಡಿದ್ದಾರೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಯಮುಖರಾಗಿತ್ತಾರಾ ಕಾದು ನೋಡಬೇಕಾಗಿದೆ.