ಬಳ್ಳಾರಿಯ ಬಲಿಜ ಸಮುದಾಯದ ಪ್ರಭಲ ಕುಟುಂಬದ ವಿಕ್ರಮ ನಾಯ್ಡು KRPP ಸೇರ್ಪಡೆ.

0
485

BP NEWS: ಬಳ್ಳಾರಿ: ಫೆಬ್ರವರಿ.22:  ಇಂದು ಬೆಂಗಳೂರಿನಲ್ಲಿ ಬಳ್ಳಾರಿ ಬಲಿಜ ಸಮುದಾಯದ ಪ್ರಭಲ ಕುಟುಂಬದ ಕಮ್ಮತಮ್ ವಿಕ್ರಮ ನಾಯ್ಡು ಅವರು ಜನಾರ್ಧನ ರೆಡ್ಡಿಯವರ ಸಮ್ಮುಖದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರರ್ಪಡೆಯಾಗುವುದರ ಮೂಲಕ‌ ಹೊಸ ಸಂಚಲನ‌‌ ಮೂಡಿಸಿದ್ದಾರೆ.
ಬಳ್ಳಾರಿ‌ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕರು‌ ಮತ್ತು ಪ್ರಭಾವಿ‌ ನಾಯಕರಾಗಿದ್ದ
ಕೆ. ಬಾಸ್ಕರ್ ನಾಯ್ಡು ಅವರ ಮೊಮ್ಮಗ, ಎಸ್ ಎಂ ಕೃಷ್ಣ ಅವರ ಆಡಳಿತದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಹಾಗೂ ಮಾಜಿ‌ ಬುಡಾ ಅಧ್ಯಕ್ಷರಾಗಿದ್ದ ನಿರಂಜನ್ ನಾಯ್ಡು ಅವರ ಪುತ್ರ ಕಾಮತಮ್ ವಿಕ್ರಮ ನಾಯ್ಡು KRPP ಸೇರ್ಪಡೆ ಕುತೂಹಲಕ್ಕೆ ಕಾರಣವಾಗಿದೆ.


ಬಿಪಿ‌ನ್ಯೂಸ್ ನೊಂದಿಗೆ ಮಾತನಾಡಿದ ಅವರು ಬಳ್ಳಾರಿಯಲ್ಲಿ ಅಭಿವೃದ್ಧಿಯ ಕೆಲಸಗಳನ್ನು ನಮ್ಮ ತಾತನವರ ಕಾಲದಲ್ಲಿ ನೋಡುತ್ತಿದ್ದೆ, ಅದು ಬಿಟ್ಡರೆ ಜನಾರ್ಧನ ರೆಡ್ಡಿಯವರ ಆಡಳಿತದಲ್ಲಿ ಅಭಿವೃದ್ಧಿಯನ್ನು ‌ನೋಡಿದ್ದೇನೆ. ಯಾವುದೇ ಪದವಿಯ ಅಪೇಕ್ಷೆ ಇಲ್ಲದೆ, ಬಳ್ಳಾರಿಯ ಅಭಿವೃದ್ಧಿಗಾಗಿ ಜನಾರ್ಧನ ರೆಡ್ಡಿಯವರ KRPP ಸೇರಿದ್ದೇನೆ ಎಂದರು.

LEAVE A REPLY

Please enter your comment!
Please enter your name here