BP NEWS: ಬಳ್ಳಾರಿ: ಫೆಬ್ರವರಿ.07: ನಗರದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಜನರ ನಿದ್ದೆಗೆಡಿಸಿವೆ. ಸೋಮುವಾರ ತಡರಾತ್ರಿ 10ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರಗೂ ವಟ್ಟಪ್ಪಗೆರೆ ಸೇರಿದಂತೆ ಕೌಲ್ ಬಜಾರ್ ನ ಕೆಲವು ಭಾಗಗಳಲ್ಲಿ ಜನರಿಗೆ ಹುಚ್ಚು ನಾಯಿಯೊಂದು ಏಕಾಏಕಿ ಮರಣಾಂತಿಕಹಲ್ಲೆ ಮಾಡಿದ್ದು ಜನರಲ್ಲಿ ಆತಂಕ ಉಂಟುಮಾಡಿದೆ.
ಇನ್ನೂ ನಾಯಿ ಯಾರ ಕೈಗೂ ಸಿಗದೆ ಏರಿಯಾದಲ್ಲಿ ಓಡಾಡುತ್ತಿದೆ. ಜನ ಮನೆಯಿಂದ ಹೊರ ಬರದ ಪರಿಸ್ಥಿತಿಯಲ್ಲಿದ್ದಾರೆ. ಒಬ್ಬ ಮಹಿಳೆಯ ಕೈ ಮಾಂಸಖಂಡ ಹೊರ ಬರುವಂತೆ ಕಚ್ಚಿದ್ದು, ಮಕ್ಕಳ ಮೇಲೂ ಹಲ್ಲೆ ಮಾಡಿದೆ.
ಕೌಲ್ ಬಜಾರಿನ ಕಾಂಗ್ರೆಸ್ ಮುಖಂಡರಾದ ಶ್ರೀನಿವಾಸ ಬಂಡಾರಿಯವರು ಮಾಧ್ಯಮಕ್ಕೆ ಮಾತನಾಡಿ ನಿನ್ನೆ ಸುಮಾರು 31ಜನಕ್ಕೆ ಕಚ್ಚಿದ್ದು, ಒಪಿಡಿ ಜನ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ ಈ ರೀತಿ ನಾಯಿಗಳ ಹಾವಳಿ ನಮ್ಮ ಕೌಲ್ ಬಜಾರ್ ಭಾಗದಲ್ಲಿ ವಿಪರೀತವಾಗಿದ್ದು. ಪಾಲಿಕೆಯವರು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅಗ್ರಹಿಸಿದರು.