ಯಶಸ್ವಿಯಾಗಿ ಜರುಗಿದ ತನುಶ್ರೀ ಪ್ರಕಾಶನ ಸಂಸ್ಥೆಯ ಮೊದಲ ವಾರ್ಷಿಕೋತ್ಸವ ಹಾಗೂ ದ್ವಿತೀಯ ಸಾಹಿತ್ಯ ಸಂಭ್ರಮ.

0
166

BP NEWS: ಬಳ್ಳಾರಿ: ಜನೇವರಿ.16:  ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ಮತ್ತು ತನುಶ್ರೀ ಸಾಹಿತ್ಯ, ಸಾಂಸ್ಕೃತಿಕ ಕಲಾ ವೇದಿಕೆ ರಾಜ್ಯ ಘಟಕದ ಚಿತ್ರದುರ್ಗ ವತಿಯಿಂದ ಆಯೋಜಿಸಿದ್ದ ಮೊದಲ ವಾರ್ಷಿಕೋತ್ಸವ ಹಾಗೂ ದ್ವಿತೀಯ ಸಾಹಿತ್ಯ ಸಂಭ್ರಮ ಹಮ್ಮಿಕೊಳ್ಳಲಾಗಿತ್ತು. ಆದರಲ್ಲಿ ಉದ್ಘಾಟನೆಯನ್ನು  ಬಿ. ತಿಪ್ಪಣ್ಣ ಮರಿಕುಂಟೆ ಖ್ಯಾತ ಕಥೆಗಾರರು ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉಧ್ಘಾಟನೆ ಮಾಡಿದರು.

ಆನಂತರ ಎಸ್. ರಾಜು ಸೂಲೇನಹಳ್ಳಿ ಪ್ರಕಾಶಕರು ಪ್ರಾಸ್ತಾವಿಕ ನುಡಿಯಲ್ಲಿ ತಮ್ಮ ಸಂಸ್ಥೆಯ ಕಾರ್ಯ ವೈಖರಿ ಬಗ್ಗೆ ಮಾಹಿತಿ ನೀಡಿದರು ಹಾಗೂ ಘನ ಉಪಸ್ಥಿತಿಯನ್ನು ಟಿ. ರಘುಮೂರ್ತಿ ಜನಪ್ರಿಯ ಶಾಸಕರು ಪುಸ್ತಕ ಬಿಡುಗಡೆ ಸಮಾರಂಭ ಮಾಡಿದರು. ಮುಖ್ಯ ಅತಿಥಿಗಳಾಗಿ ಎನ್. ರಘುಮೂರ್ತಿ ತಹಶೀಲ್ದಾರರು ತಮ್ಮ ನುಡಿಯಲ್ಲಿ ತನುಶ್ರೀ ಪ್ರಕಾಶನ ಕೆಲಸಗಳ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದರು ವೇದಿಕೆಯಲ್ಲಿ ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ ವತಿಯಿಂದ ಮುದ್ರಣ ಆದ ಅನಿತಾ ಕೆ. ಆರ್. ಅವರ ಚೊಚ್ಚಲ ಕವನ ಸಂಕಲನ ‘ನನ್ನೊಳಗಿನ ದಿನ, ಶುಭಾ ವಿಷ್ಣು ಸಭಾಹಿತ ಅಗ್ರಹಾರ ಹಳದೀಪುರ ಅವರ’ ಕಂಗಳ ಬೆಳದಿಂಗಳು’ ಭಾಗ್ಯಶ್ರೀ ಜಗದೇವಿಲಿಂಗಣಸುತೆ ಅವರ ‘ ಒಡಲಾಳ ನುಡಿಯೊಡೆದು ‘ ಕೃತಿ ಬಸವರಾಜ ಪೂಜಾರ್ ಕೋಡಿಹಳ್ಳಿ ಅವರ ‘ ರೈತರ ನೋವಿನ ಹನಿಗಳು ‘ ಕೃತಿ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ನಂತರ ತನುಶ್ರೀ ಪ್ರಕಾಶನ ನೀಡುವ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಆದ ತನುಶ್ರೀ ಜೀವಸಮ್ಮಾನ ಪುರಸ್ಕಾರ ಬಿ. ತಿಪ್ಪಣ್ಣ ಮರಿಕುಂಟೆ ಅವರಿಗೆ ನೀಡಲಾಯಿತು ‘ತನುಶ್ರೀ ಕಲಾ ರತ್ನ ಪುರಸ್ಕಾರ ‘ ಹಜರತ್ ಅಲಿ ಅವರಿಗೆ ನೀಡಲಾಯಿತು ‘ತನುಶ್ರೀ ಕಾವ್ಯ ರತ್ನ ಪುರಸ್ಕಾರ ‘ಅನಂತ್ ಕುಣಿಗಲ್ ಅವರಿಗೆ ನೀಡಲಾಯಿತು ‘ತನುಶ್ರೀ ತ್ರಿವೇಣಿ ರತ್ನ ಪುರಸ್ಕಾರ’ ಅರ್ಚನಾ ಎನ್ ಪಾಟೀಲ ಅವರಿಗೆ ನೀಡಲಾಯಿತು ಹಾಗೆ ಬಳ್ಳಾರಿಯ ಇಬ್ಬರು ಪುಟ್ಟ ಭರತನಾಟ್ಯ ಕಲಾವಿದರು ಸನ್ನಿಧಿ ಬಿ ಹಾಗು ಹಾರಿಕ ಜಕ್ಕ ಉದ್ಘಾಟನೆ ನೃತ್ಯ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡಿದರು ಹಾಗೆ ಇಬ್ಬರು ಕಲಾವಿದೆಯರಿಗೆ ಉದಯೋನ್ಮುಖ ಕಲಾಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಹಾಗೆಯೇ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಡಾ. ಶಫೀವುಲ್ಲಾ ಹಿರಿಯೂರು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕನಕ ಪ್ರೀತೇಶ್ ಹಿರಿಯೂರು ಸಂಸ್ಥಾಪಕರು ಕರುನಾಡ ಹಣತೆ ಕವಿ ಬಳಗ, ಶುಭಾ ವಿಷ್ಣು ಸಭಾಹಿತ ಅಗ್ರಹಾರ, ಬಸವರಾಜ ಪೂಜಾರ್ ಕೋಡಿಹಳ್ಳಿ, ಬಸವರಾಜ ಕರುವಿನ ಬಸವನಾಳು, ಕಾರ್ತಿಕ್ ಆಚಾರ್ಯ ಎಂ ಕಲ್ಲಹಳ್ಳಿ, ವಹಿಸಿದ್ದರು ಎಲ್ಲಾ ಕವಿಗಳಿಗೆ ಇ ಪ್ರಮಾಣ ಪತ್ರ ಕೊಟ್ಟು ಪುರಸ್ಕರಿಸಿ ಗೌರವಿಸಲಾಗಿದೆ ಕಾರ್ಯಕ್ರಮದ ಉಪಸ್ಥಿತಿ ಡಿ. ಜಿ. ತಿರುಮಲ ಕಲಾವಿದರು ಮುಖ್ಯ ಸಂಚಾಲಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ,ವಹಿಸಿದರು.

ಓಬಣ್ಣ ತುಮಕೂರ್ಲಹಳ್ಳಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅನುದಾನಿತ ಶಾಲಾ ಶಿಕ್ಷಕರ ಸಂಘ ಬೆಂಗಳೂರು, ಲೋಕೇಶ್ ಪಲ್ಲವಿ ಗಾಯಕರು, ಜಯಪ್ರಕಾಶ್ ಕೊಂಡ್ಲಹಳ್ಳಿ ಪ್ರಜಾವಾಣಿ ಪತ್ರಕರ್ತರು, ಉದಯ್ ಬಡಿಗೇರ್ ಮೈದೂರು ಕಾರ್ಯಕಾರಿ ಸಂಚಾಲಕರು ಕಾರ್ಯಕ್ರಮ ನಿರೂಪಿಸಿದರು, ಹೆಚ್. ಎಂ. ಮಲ್ಲೇಶಪ್ಪ ಸೂರಮ್ಮನಹಳ್ಳಿ, ಚಿದಾನಂದ ಮೂರ್ತಿ ನೇರ್ಲಹಳ್ಳಿ, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here