BP NEWS: ಬಳ್ಳಾರಿ: ಜನೇವರಿ.13: ನೆಹರು ಯುವ ಕೇಂದ್ರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ಹಾಗೂ ಸಿರಿವಾರ ಗ್ರಾಮ ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಗಾಲಿ ರುಕ್ಮೀಣಮ್ಮ ಚೆಂಗಾರೆಡ್ಡಿಸ್ಮಾರಕ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಗುರುವಾರದಿಂದ ಎರಡು ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.
ಗಾಲಿ ರುಕ್ಮೀಣಮ್ಮ ಚೆಂಗಾರೆಡ್ಡಿ ಸ್ಮಾರಕದ ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಬೀನಾ ಸುಲ್ತಾನ್ ಅವರು ಅಧ್ಯಕ್ಷತೆ ವಹಿಸಿದ್ದರು.
ಮಹಿಳೆಯರಿಗಾಗಿ ನಡೆದ 100 ಮೀ ಓಟದ ಸರ್ಧೆಯಲ್ಲಿ ಮಹಿಳೆಯರು ಪ್ರಥಮ ಸ್ಥಾನ ಶಿವರುದ್ರಮ್ಮ, ದ್ವಿತೀಯ ಸ್ಥಾನ ರೇಣುಕಾ, ತೃತೀಯ ಸ್ಥಾನ ಕಾವೇರಿ ಮತ್ತು ಕಬ್ಬಡಿಯಲ್ಲಿ ಮಹಿಳೆಯರು ಪ್ರಥಮ ಸ್ಥಾನ ಭಾರತಿ, ದ್ವಿತೀಯ ಸ್ಥಾನ ಕಾಮಕ್ಷಿ, ಖೋಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಶಿವರುದ್ರಮ್ಮ, ದ್ವಿತೀಯ ಸ್ಥಾನ ದೀಪಿಕ ಅವರು ಪಡೆದರು.
ಪುರುಷರಿಗಾಗಿ ನಡೆದ ವಾಲಿಬಾಲ್‍ನಲ್ಲಿ ಪ್ರಥಮ ಸ್ಥಾನ ಮೌನೇಶ, ದ್ವಿತೀಯ ಸ್ಥಾನ ಕುಬೇರ, ಪುರುಷರ ಕಬ್ಬಡಿಯಲ್ಲಿ ಪ್ರಥಮ ಸ್ಥಾನ ನೂರಬಾಷ್, ದ್ವಿತೀಯಸ್ಥಾನ ಮಹಾಂತೇಶ ನಾಯ್ಕ, ಪುರುಷರ ಖೋಖೋನಲ್ಲಿ ಪ್ರಥಮ ಸ್ಥಾನ ಅಂಬರೇಶ, ದ್ವಿತೀಯ ಸ್ಥಾನ ಯರ್ರಿಸ್ವಾಮಿ, ಫುಟ್‍ಬಾಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಭಾರತನಾಯ್ಕ, ದ್ವಿತೀಯ ಸ್ಥಾನ ತಾನೇಶನಾಯ್ಕ ಅವರು ಪಡೆದಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಥಿಗಳಾದ ಕಾಲೇಜು ದೈಹಿಕ ನಿರ್ದೇಶಕ ಕೆ.ವಿ.ಮುತ್ತೆಗೌಡ, ಸ್ವಾಮಿ ವಿವೇಕಾನಂದ ಯುವಕರ ಸ್ವ ಸಹಾಯ ಸಂಘದ ಅಧ್ಯಕ್ಷರಾದ ಮಣಿರತ್ನಂ, ಡಾ.ಸುಧಾಕರ, ಡಾ.ಸೋಮಶೇಖರ, ಡಾ.ಹಾಲಕರ ರಾಚಪ್ಪ ಸೇರಿದಂತೆ ಸಿರಿವಾರ, ಹೊನ್ನಳಿತಾಂಡ, ಬಳ್ಳಾರಿ, ಬಂಡಿಹಟ್ಟಿ, ತಾಳೂರು, ತೆಕ್ಕಲಕೋಟೆ, ಕಪ್ಪಗಲ್ಲು ಗ್ರಾಮಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.