“ಹಂಪಿ ಉತ್ಸವ 2022-23”ರ ನಿಮಿತ್ತ “ವಿಜಯನಗರ ವೈಭವ” ಬೃಹತ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಕಲಾವಿದರ ಆಯ್ಕೆ ಪ್ರಕ್ರಿಯೆ ಜ.16ರಂದು

0
98

BP NEWS: ವಿಜಯನಗರ(ಹೊಸಪೇಟೆ): ಜನೇವರಿ.11: ಕೇಂದ್ರ ಸಂವಹನ ಇಲಾಖೆ (ಸಂಗೀತ ಮತ್ತು ನಾಟಕ ವಿಭಾಗ) ಬೆಂಗಳೂರು, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಹಾಗೂ ವಿಜಯನಗರ ಜಿಲ್ಲಾಡಳಿತ ಇವರ ಸಹಯೋಗದಲ್ಲಿ “ಹಂಪಿ ಉತ್ಸವ 2022-23” ರ ನಿಮಿತ್ತ “ವಿಜಯನಗರ ವೈಭವ”À ಬೃಹತ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮವನ್ನು ಹಂಪಿಯ ಆನೆಲಾಯದ ಆವರಣದಲ್ಲಿ ಜ.27ರಿಂದ ಫೆ.02ರವರೆಗೆ ಆಯೋಜಿಸಲಾಗಿದೆ ಎಂದು ಕೇಂದ್ರ ಸಂವಹನ ಕಾರ್ಯಾಲಯದ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸದರಿ ಕಾರ್ಯಕ್ರಮಕ್ಕೆ ಅವಶ್ಯಕತೆ ಇರುವ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನು ಜ.16ರಂದು ಬೆಳಗ್ಗೆ 10ಕ್ಕೆ ಹೊಸಪೇಟೆಯ ಸಂಡೂರು ರಸ್ತೆ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಆಸಕ್ತ ಕಲಾವಿದರು, ಭರತ ನಾಟ್ಯ ಪರಿಣಿತರು, ಬಾಲ ಕಲಾವಿದರು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು 2 ಸ್ಟ್ಯಾಂಪ್ ಸೈಜ್ ಭಾವಚಿತ್ರ, ವಿಳಾಸ ಖಚಿತ ಪಡಿಸುವ ಆಧಾರ ಕಾರ್ಡ್ ಅಥವಾ ಓಟರ್ ಐ.ಡಿ, ಗೆಜೆಟೆಡ್ ಅಧಿಕಾರಿಗಳಿಂದ ಪಡೆದ ನಡತೆ ಪ್ರಮಾಣ ಪತ್ರ ಹಾಗೂ ತಾವು ಈ ಹಿಂದೆ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಗ್ಗೆ ಇರುವ ದಾಖಲಾತಿಗಳೊಂದಿಗೆ ಆಯ್ಕೆ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ ನೀಡಲಾಗುವ ನಿಗಧಿತ ಅರ್ಜಿಯನ್ನು ಭರ್ತಿ ಮಾಡಿ ಮೇಲೆ ತಿಳಿಸಿದ ದಾಖಲೆಗಳನ್ನು ಲಗತ್ತಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಆಯ್ಕೆಯಾದ ಕಲಾವಿದರು 7 ದಿನಗಳ ಪೂರ್ವ ಸಿದ್ಧತಾ ತರಬೇತಿ ಹಾಗೂ 7 ದಿನಗಳ ಪ್ರದರ್ಶನ ಒಟ್ಟು 14 ದಿನಗಳವರೆಗೆ ಯಾವುದೇ ಗೈರು ಹಾಜರಾತಿ ಇಲ್ಲದೇ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here