ಇಂಧನ ಸಂರಕ್ಷಣಾ ದಿನಾಚರಣೆಯ ನಿಮಿತ್ತ ಜಾಗೃತಿ ಕಾರ್ಯಾಗಾರ

0
73

BP NEWS: ಬಳ್ಳಾರಿ: ಡಿಸೆಂಬರ್.26: ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಲಿಮಿಟೆಡ್ (ಕೆಆರ್‍ಇಡಿಎಲ್) ಮತ್ತು ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ (ಬಿಇಇ) ಇವರ ಸಂಯುಕ್ತಾಶ್ರಯದಲ್ಲಿ ಇಂಧನ ಸಂರಕ್ಷಣಾ ದಿನ ಆಚರಣೆಯ ನಿಮಿತ್ತ ಪ್ಯಾಟ್ Pಂಖಿ (Peಡಿಜಿoಡಿm, ಂಛಿhieve, ಖಿಡಿಚಿಜe) ಕುರಿತಂತೆ ಜಾಗೃತಿ ಕಾರ್ಯಾಗಾರವನ್ನು ಸೋಮವಾರ ನಗರದ ನಕ್ಷತ್ರ ಹೋಟೆಲ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಲಬುರಗಿಯ ಕೆಆರ್‍ಇಡಿಎಲ್‍ನ ತಾಂತ್ರಿಕ ಅಧಿಕಾರಿ ಮಾಲಿನಿ ಸ್ವಾಮಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಜಾಗತಿಕ ತಾಪಮಾನ ಕಡಿಮೆ ಮಾಡಲು ಅನೇಕ ಬಗೆಯ ಉದ್ಯಮಗಳಲ್ಲಿ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವುದೇ ಕಾರ್ಯಾಗಾರದ ಉದ್ದೇಶವಾಗಿದೆ ಎಂದು ತಿಳಿಸಿದರು.
ಉದ್ಯಮಗಳಲ್ಲಿ ಮಾಡಲೇಬೇಕಾದ ಇಂಧನ ಸಂರಕ್ಷಣೆ ವಿಧಾನಗಳು ಹಾಗೂ ಅನುಸರಿಸಬೇಕಾದ ಕ್ರಮಗಳನ್ನು ಕಾರ್ಯಾಗಾರದಲ್ಲಿ ತಿಳಿಸಿಕೊಟ್ಟರು.
ಕಾರ್ಯಾಗಾರದಲ್ಲಿ ಜೆಎಸ್‍ಡಬ್ಲ್ಯೂ ಸ್ಟೀಲ್ಸ್, ಮಿನೆರಾ ಸ್ಟೀಲ್ ಅಂಡ್ ಪವರ್ ಲಿಮಿಟೆಡ್, ಬಿಎಂಎಂ ಇಸ್ಪಾತ್ ಸೇರಿದಂತೆ ಸುಮಾರು 15 ಕಂಪನಿಗಳ ಅಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here