ಬಳ್ಳಾರಿ: ಗ್ರಾಮೀಣ ಮಕ್ಕಳ ಸಾಂಸ್ಕೃತಿಕ ಸೌರಭ

0
107

BP NEWS: ಬಳ್ಳಾರಿ: ಡಿಸೆಂಬರ್.22:  ರಂಗಕಹಳೆ ಸಾಂಸ್ಕೃತಿಕ ಸಂಘ, ಸಂಜೀವರಾಯನಕೋಟೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 21/12/2022 ರಂದು ಸಂಜೆ 5 ಗಂಟೆಗೆ ಮುರಾರ್ಜಿ ದೇಸಾಯಿ ವಸತಿ ಶಾಲೆ ಮೆಟ್ರಿಕಿ ಗ್ರಾಮ, ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಮೀಣ ಮಕ್ಕಳ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಉದ್ಘಾಟಕರಾಗಿ  ಓಂಕಾರಪ್ಪ ಪ್ರಾಂಶುಪಾಲರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಿಗೆ ನಿರಂತರವಾಗಿ ರಂಗ ಚಟುವಟಿಕೆಗಳು ಹಾಗೂ ಜಾನಪದ ಕಲೆಗಳ ಒಂದು ಅರಿವು ಇದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಮತ್ತು ಕಲೆಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಟ್ರಗೌಡ ಪ್ರಭಾವಿ ನಿಲಯ ಪಾಲಕರು ಮೊರಾರ್ಜಿ ದೇಸಾಯಿ ವಸತಿ ಶಾಲೆ ಇವರು ಮುಂದಿನ ದಿನಗಳಲ್ಲಿ ರಂಗ ಕಲೆಗಳು ಹಾಗೂ ಜಾನಪದ ಕಲೆಗಳು ಒಟ್ಟಾಗಿ ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸುವ ನೆಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು
ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಬಿ ಹನುಮಂತಪ್ಪ ಪ್ರಾಂಶುಪಾಲರು ಮುರಾರ್ಜಿ ದೇಸಾಯಿ ವಸತಿ ಶಾಲೆ ಇವರು ಮಕ್ಕಳ ಒಂದು ಮುಂದಿನ ದಿನಗಳಲ್ಲಿನ ಭವಿಷ್ಯದ ಬಗ್ಗೆ ಒಂದು ಚಿಕ್ಕ ಏಕಲವ್ಯನ ಕಥೆಯನ್ನು ಹೇಳಿ ಹಾಗೂ ಅವರು ತಮ್ಮ ಬಾಲ್ಯ ಮತ್ತು ಕಾಲೇಜು ಜೀವನದಲ್ಲಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವಂತಹ ಅನೇಕ ವಿಷಯಗಳನ್ನು ಪ್ರಸ್ತಾಪಿಸಿ ಅವರು ಮಾಡಿರತಕ್ಕಂತಹ ಪೌರಾಣಿಕ ಐತಿಹಾಸಿಕ ನಾಟಕಗಳ ಬಗ್ಗೆಯೂ ವಿಷಯಗಳನ್ನು ಪ್ರಸ್ತಾಪಿಸಿದರು.

ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಕಲೆ ಮತ್ತು ಸಂಸ್ಕೃತಿ ಹರಿವು ಕೂಡ ಬೇಕು ಏಕೆಂದರೆ ಮುಂದಿನ ದಿನಗಳಲ್ಲಿ ನಮ್ಮ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ. ಹಾಗೂ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರಂದದವರು ಸಿಬ್ಬಂದಿ ವರ್ಗದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಡೊಳ್ಳು ಕುಣಿತ – ಗಣೇಶಪ್ಪ ಮತ್ತು ತಂಡ …
ಜಾನಪದ ನೃತ್ಯ – ರಾಜೇಶ್ವರಿ ಮತ್ತು ತಂಡ….
ಸಮೂಹ ನೃತ್ಯ – ಪೂರ್ಣಿಮಾ ಬಿ ಮತ್ತು ತಂಡ…
ಜಾನಪದ ನೃತ್ಯ -. ಹುಲಿಯಪ್ಪ ಡಿ ಮತ್ತು ತಂಡ
ಜಾನಪದ ಗಾಯನ – ಡಿ ಜೆ ತಿರುಮಲ ಮತ್ತು ತಂಡ…..

ಐದು ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಸಿಕೊಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಡಿ ಜೆ ತಿರುಮಲ ಜಾನಪದ ಗಾಯಕರು, ಚಿತ್ರಕಲಾ ಕಲಾವಿದರು ಮತ್ತು ಮೊರಾಜಿ ದೇಸಾಯಿ ವಸತಿ ಶಾಲೆಯ ಚಿತ್ರಕಲೆ ಶಿಕ್ಷಕರು ಇವರು ನಡೆಸಿಕೊಟ್ಟರು ಹಾಗೂ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಬಸಾಪುರ. ದೊಡ್ಡಬಸಪ್ಪ .ಬಿ.
ರಂಗ ಕಹಳೆ ಸಂಸ್ಥೆಯ ಕಾರ್ಯದರ್ಶಿಗಳು
ನಾಗರಾಜ ಕೆ ಉಪಸ್ಥಿತರಿದ್ದರು…

LEAVE A REPLY

Please enter your comment!
Please enter your name here