BP NEWS: ಬಳ್ಳಾರಿ: ಡಿಸೆಂಬರ್.14: ಆಲಾಪ್ ಸಂಗೀತ ಕಲಾ ಟ್ರಸ್ಟ್ (ರಿ) ಬಳ್ಳಾರಿ & ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ
ವಿಶೇಷ ಘಟಕ ಯೋಜನೆ ಅಡಿಯಲ್ಲಿ
ಸಮೂಹ ನೃತ್ಯ, ಬಯಲಾಟ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ದಿನಾಂಕ 18-12-2022 ಸಂಜೆ 5-30ಕ್ಕೆ ರಾಘವ ಕಲಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಯಮನಪ್ಪ ಅಲ್ಲಿ ಪುರ ಕಲಾ ತಂಡ ಇವರಿಂದ ಸಮೂಹ ನೃತ್ಯ ನಡೆಯಲಿದ್ದು,
ಶೇಖರ್ ಬಳ್ಳಾರಿ, ಮಾಧವಿ ವೈ.ಎನ್. ಸಂಗೀತ ಶಿಕ್ಷಕರು ತೋರಣಗಲ್ಲು ಹಾಗೂ ನಂದ ಕೆ ಎನ್. ಸಂಗೀತ ಗಾರರು ತೋರಣಗಲ್ಲು ಇವರನ್ನು ಒಳಗೊಂಡ ಕಲಾ ತಂಡದಿಂದ ಜಾನಪದ ಗಾಯನ ಹಾಗೂ ಕೆ ಭೀಮೇಶ ಸಿರಿಗೇರಿ ಕಲಾ ತಂಡದಿಂದ ರಾಮಾಯಣ ಬಯಲಾಟ ಪ್ರದರ್ಶನವಿರುತ್ತದೆ ಎಂದು ಅಧ್ಯಕ್ಷರಾದ ರಮಣಪ್ಪ ಭಜಂತ್ರಿಯವರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಗೌರವ ಸನ್ಮಾನಕ್ಕೆ ಪಾತ್ರರಾದವರು ಹೆಚ್ ಪಾಂಡುರಂಗಪ್ಪ
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಬಳ್ಳಾರಿ. ಎಂ ರಾಮಾಂಜನೇಯಲು
ರಂಗಭೂಮಿ ಕಲಾವಿದರು, ಬಳ್ಳಾರಿ
ಮಂಜುನಾಥ ಗೋವಿಂದವಾಡ, ಕರ್ನಾಟಕ ಲಲಿತಕಲಾ ಅಕಾಡೆಮಿಯ ವರ್ಣಶ್ರೀ ಪ್ರಶಸ್ತಿ ಪುರಸ್ಕೃತರು, ಬಳ್ಳಾರಿ
ಎಂ ಪಾರ್ವತೀಶ
ರಂಗಭೂಮಿ ಕಲಾವಿದರು, ಗೆಣಿಕೆಹಾಳು
ಜಡೆಪ್ಪ ಎಮ್ಮಿಗನೂರು
ಜಾನಪದ ಕಲಾವಿದರು, ಬಳ್ಳಾರಿ.
ಕಾರ್ಯಕ್ರಮದ ನಿರೂಪಣೆಯನ್ನು ಆಂಜನೇಯ ಕೆ ಜಿ
ಸಹಾಯಕ ನಿರ್ದೇಶಕರು,
ಅಕ್ಷರ ದಾಸೋಹ, ಕೂಡ್ಲಿಗಿ ಇವರು ನಡಿಸಿಕೊಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ರಮಣಪ್ಪ ಭಜಂತ್ರಿ
ಅಧ್ಯಕ್ಷರು, ಕೆ ಸುರೇಶ್ ಕಾರ್ಯದರ್ಶಿ
ಅಲಾಪ್ ಸಂಗೀತ ಕಲಾ ಟ್ರಸ್ಟ್
ಬಳ್ಳಾರಿ ಅವರು ಬಿ ಪಿ ನ್ಯೂಸ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.