ವಿಶ್ವ ವಿಕಲಚೇತನರ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ

0
133

BP NEWS: ಬಳ್ಳಾರಿ: ನವೆಂಬರ್.25: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವÀ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ವಿಕಲಚೇತನರಿಗಾಗಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ ಪ್ರಯುಕ್ತ ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಯ ವಿಕಲಚೇತನರಿಗೆ ಶುಕ್ರವಾರ ನಗರದ ವಿಮ್ಸ್ ಕ್ರೀಡಾಂಗಣದಲ್ಲಿ ವಿಶ್ವ ವಿಕಲಚೇತನರ ಕ್ರೀಡಾ ಹಾಗೂ ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕರಾದ ವಿಜಯ್ ಕುಮಾರ್ ಕೆ.ಹೆಚ್. ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲು ಗೆಲುವಿನ ಮೆಟ್ಟಿಲು, ಅವುಗಳನ್ನು ಸಮಾನವಾಗಿ ಸ್ವೀಕರಿಸಬೇಕು. ವಿಕಲಚೇತನ ಕ್ರೀಡಾಪಟುಗಳು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.


ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ರಾಜನಾಯಕ್, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಹೆಚ್.ಎಂ, ಚೆಂಗಾರೆಡ್ಡಿ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖ್ಯಸ್ಥರಾದ ಕೆ.ಹೆಚ್.ಗುರುಮೂರ್ತಿ, ಅನುಗ್ರಹ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖ್ಯಸ್ಥರಾದ ಸಿಸ್ಟರ್ ಲಿನೆಟ್ ಫರ್ನಾಂಡಿಸ್, ಡಾ.ಭೀಮಾ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯ ಮುಖ್ಯಸ್ಥರಾದ ಮಹೇಶ್ ಹೆಚ್.ಎಂ., ಸ್ಮೈಲ್ ಸಂಸ್ಥೆಯ ಮುಖ್ಯಸ್ಥರಾದ ಪಣಿರಾಜ್, ನವಜೀವನ ಸಂಸ್ಥೆಯ ಎಸ್ಥರ್, ಅಂಗವಿಕಲರ ಒಕ್ಕೂಟದ ಸಂಘದಿಂದ ಸುಬ್ಬರಾವ್, ಪರಶುರಾಮ್, ಅಂಗವಿಕಲ ಪಾಲಕರ ಒಕ್ಕೂಟದ ಅಧ್ಯಕ್ಷ ಎನ್.ಕುಮಾರಪ್ಪ, ನವತಾರೆ ಅಂಗವಿಕರ ಒಕ್ಕೂಟದ ಅಧಕ್ಷ ಸಾದಿಕ್, ಬಾಕಿದ್, ಸಾಧ್ಯ ಬುದ್ದಿಮಾಂದ್ಯ ಮಕ್ಕಳ ಸಂಸ್ಥೆಯಿಂದ ಗೋವಿಂದಪ್ಪ, ಆಕಾಂಕ್ಷ ವಿಶೇಷ ಮಕ್ಕಳ ಶಾಲೆಯಿಂದ ಕೃಷ್ಣ ಕುಮಾರ್, ವಿಶ್ವ ಚೇತನ ಅಂಧ ಮಕ್ಕಳ ಸಂಸ್ಥೆಯ ಮುಖ್ಯಸ್ಥ ಗಂಗಾಧರ್, ಸರ್ಕಾರಿ ಕಿವುಡು ಮಕ್ಕಳ ಪಾಠಶಾಲೆಯ ಶಿಕ್ಷಕ ರವಿ.ಸಿ.ಕೆ. ಮತ್ತು ವೈಶಾಲಿ, ಅವಳಿ ಜಿಲ್ಲೆಯ ಎಂ.ಆರ್.ಡಬ್ಲ್ಯೂ ಯು,ಆರ್.ಡಬ್ಲ್ಯೂ ವಿ.ಆರ್.ಡಬ್ಲ್ಯೂ ಕಾರ್ಯಕರ್ತರು ಸೇರಿದಂತೆ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ವಿವಿಧ ಅಂಗವಿಕಲತೆಯ 800 ಜನ ವಿಶೇಷಚೇತನರು ಕ್ರಿಕೆಟ್, ಗುಂಡು ಎಸೆತ, ರನ್ನಿಂಗ್ ರೇಸ್, ಕಬ್ಬಡ್ಡಿ ಬೈಕ್ ರೇಸ್, ಕೇನ್ ರೇಸ್, ಜಾವಲಿನ್ ಥ್ರೋ, ಮ್ಯೂಜಿಕಲ್ ಚೇರ್, ಸಾಂಸ್ಕøತಿಕ ಕಾರ್ಯಕ್ರಮಗಳಾದ ಜಾನಪದ ಗೀತೆ, ಭಾವಗೀತೆ, ಫ್ಯಾನ್ಸಿ ಡ್ರೆಸ್, ಚಿತ್ರಕಲೆ, ಮುಂತಾದ ಸ್ಫರ್ಧೆಗಳಲ್ಲಿ ಭಾಗವಹಿಸಿದ್ದು ಗಮನಸೆಳೆಯಿತು.

LEAVE A REPLY

Please enter your comment!
Please enter your name here