ಮಹೇಶ್​ ಬಾಬು ತಂದೆ ಸೂಪರ್​ ಸ್ಟಾರ್​ ಕೃಷ್ಣ ನಿಧನ

0
98

BP NEWS: ಹೈದರಾಬಾದ್: ನವೆಂಬರ್.15:  ನಟ ಮಹೇಶ್​ ಬಾಬು ಅವರ ತಂದೆ, ಸೂಪರ್​ ಸ್ಟಾರ್​​ ಕೃಷ್ಣ ಘಟ್ಟಮನೇನಿ ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಸುಕಿನ 4 ಗಂಟೆಗೆ ನಿಧನರಾದರು. ಹೃದಯಾಘಾತದಿಂದ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 350ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಕೃಷ್ಣ ಘಟ್ಟಮನೇನಿ ಅವರ ‘ತೇನೆಮನಸಲು’, ‘ಸಾಕ್ಷಿ’, ‘ಅಲ್ಲೂರಿ ಸೀತಾರಾಮರಾಜು’ ಮುಂತಾದ ಚಿತ್ರಗಳು ಜನಪ್ರಿಯವಾಗಿದ್ದವು. ಬಾಂಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಅವರನ್ನು ಅವಿಭಜಿತ ಆಂಧ್ರಪ್ರದೇಶದ ಜನರು ‘ಬಾಂಡ್ ಕೃಷ್ಣ’ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಕೃಷ್ಣ ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರ ನಿಧನಕ್ಕೆ ಅಭಿಮಾನಿಗಳು, ಆಪ್ತರು ಹಾಗೂ ಹಲವು ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ.

LEAVE A REPLY

Please enter your comment!
Please enter your name here