BP NEWS: SUPER FAST: NOV.05

0
312

ವಿಜಯನಗರ ಜಿಲ್ಲೆಯ ನೂತನ ಎಸ್ಪಿ ಶ್ರೀಹರಿಬಾಬು ಬಿಎಲ್
BP NEWS: ಹೊಸಪೇಟೆ(ವಿಜಯನಗರ): ನವೆಂಬರ್.05: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಶ್ರೀಹರಿಬಾಬು ಬಿಎಲ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಎಸ್ಪಿ ಡಾ.ಅರುಣ್‍ಕುಮಾರ್.ಕೆ ಅವರು ವರ್ಗಾಯಿಸಲಾಗಿದೆ.

——————-

ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಟಿ.ವೆಂಕಟೇಶ್
BP NEWS: ಹೊಸಪೇಟೆ(ವಿಜಯನಗರ): ನವೆಂಬರ್.05: ವಿಜಯನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಟಿ.ವೆಂಕಟೇಶ್ ಅವರು ಶನಿವಾರ ಅಧಿಕಾರ ವಹಿಸಿಕೊಂಡರು.
ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಶ್ರವಣ್ ಅವರು ವರ್ಗಾವಣೆಗೊಂಡಿದ್ದಾರೆ.

—————–

ಕನಕದಾಸ, ಒನಕೆ ಓಬ್ಬವ್ವ ಜಯಂತಿ ಆಚರಣೆ ಪೂರ್ವಭಾವಿ ಸಭೆ
BP NEWS: ಬಳ್ಳಾರಿ: ನವೆಂಬರ್.03: ಜಿಲ್ಲಾಡಳಿತದ ವತಿಯಿಂದ ನವೆಂಬರ್ 11ರಂದು ಕನಕದಾಸ ಜಯಂತಿ ಹಾಗೂ ವೀರವನಿತೆ ಒನಕೆ ಓಬವ್ವ ಜಯಂತಿಯನ್ನು ಅಚ್ಚುಕಟ್ಟಾಗಿ ಆಚರಿಸಲು ಎಲ್ಲ ರೀತಿಯ ಸಿದ್ದತೆಗಳನ್ನು ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಪಿಎಸ್ ಮಂಜುನಾಥ ಅವರು ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಹಾಗೂ ಒನಕೆ ಓಬವ್ವ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಡೂರು ತಾಲೂಕಿನ ಯು ರಾಜಾಪುರ್ ಗ್ರಾಮದ ದೇವರಾದ ಆಂಜನೇಯ ಸ್ವಾಮಿಗೆ ಕಂಚಿನ ಮತ್ತು ಬೆಳ್ಳಿಯ ಕವಚ ಅರ್ಪಣೆ

BP NEWS: ಬಳ್ಳಾರಿ: 5/11/2022:  ಶನಿವಾರದಂದು ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯು.ರಾಜಾಪುರ ಗ್ರಾಮದಲ್ಲಿನ ಬನಹಟ್ಟಿ ಕುಟುಂಬದವರಾದ ದಿವಂಗತ ನಟರಾಜ್  ಅವರ ಸುಪುತ್ರರು ಹಾಗೂ ಬನಹಟ್ಟಿಯ ಕುಲಬಾಂಧವರು ಎಲ್ಲಾರು ಸೇರಿ ಗ್ರಾಮದ ದೇವರಾದ ಶ್ರೀ ಆಂಜನೇಯ ಸ್ವಾಮಿಗೆ ಕಂಚಿನ ಪ್ರಭಾವಳಿ ಮತ್ತು ಬೆಳ್ಳಿಯ ಕವಚ ನೀಡುವುದರ ಮುಖಾಂತರ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾದರು.

LEAVE A REPLY

Please enter your comment!
Please enter your name here