BP NEWS: ಬಳ್ಳಾರಿ: ನವೆಂಬರ್.01: ಶ್ರೀ ವಿವೇಕಾನಂದ ಯುವಕ ಸಂಘದ ವತಿಯಿಂದ ಶ್ರೀ ಕನಕ ದುರ್ಗಮ್ಮ ದೇವಸ್ಥಾನ ಹಿಂಬಾಗದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿದ ಬಳ್ಳಾರಿ ವಕ್ಫ್ ಬೋರ್ಡ್ ಅಧ್ಯಕ್ಷರಾದ ಉಮಾನ್ ಖಾನ್,
ಕನ್ನಡಪರ ಹೋರಾಟಗಾರರಾದ ಸಿರಿಗೆರಿ ಪನ್ನರಾಜ್ ಹಾಗೂ ಸಂಘದ ಅಧ್ಯಕ್ಷರಾದ ಪಿ ಗಾದೆಪ್ಪ ಪಾಲಿಕೆ ಸದಸ್ಯರು ಮತ್ತು ರೇಣುಕಾ ಬೇಕ್ರಿ ಮಾಲೀಕರಾದ ಹರೀಶ್ ಶೆಟ್ಟಿ ರವರು ಮತ್ತು ರೇಣುಕಾ ಹೋಟೆಲ್ನ ಮಾಲೀಕರಾದ ವಿಶ್ವನಾಥ ಶೆಟ್ಟಿ ಮತ್ತು ವಕೀಲರಾದ ಶಾಮಲಾ ಯಾದವ್, ಕೆ ಆರ್ ಎಸ್ ಪಕ್ಷದ ಶ್ರೀನಿವಾಸ್ ರೆಡ್ಡಿ, ವೀರೇಶ್ ಯಾದವ್, ಶಿವಪ್ರಸಾದ್, ಮಲ್ಲಿಕಾರ್ಜುನ್ ಸ್ವಾಮಿ, ಪ್ರಶಾಂತ್ ಕುಮಾರ್, ಶಬ್ಬೀರ್, ಶಿವಪ್ಪ ,ಕೌಶಿಕ್, ವಂಶಿ ವೀರೇಶ್, ಮಾರುತಿ, ಶೇಷಗಿರಿ ಯಾದವ್ ಹಾಗೂ ಅನೇಕ ಕನ್ನಡಪರ ಸಂಘಟನೆಗಳ ಹೋರಾಟಗಾರರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
ಧ್ವಜಾರೋಹಣದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೂರ್ಯ ಕಲಾ ಟ್ರಸ್ಟ್ ನ ಅಭಿಷೇಕ್ ಅವರಿಂದ ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮವು ನೆರವೇರಿತು.