BP NEWS: ಬಳ್ಳಾರಿ: ನವೆಂಬರ್.01: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಮಂಗಳವಾರದಂದು ವಿವಿಯ ಆಡಳಿತ ಭವನದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸಲಾಯಿತು.
ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಎಸ್.ಸಿ ಪಾಟೀಲ್‍ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕರ್ನಾಟಕದಲ್ಲಿ ಅನೇಕ ಕನ್ನಡ ಪ್ರಭೇದಗಳಿರುವುದನ್ನು ಉಲ್ಲೇಖಿಸುತ್ತಾ ಕನ್ನಡಿಗರು ಅನ್ಯ ಭಾμÉಯ ಬಗೆಗೆ ಉದಾರಿಗಳಾಗದೆ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ರಮೇಶ್ ಓಲೇಕಾರ್ ಮಾತನಾಡಿ, ಬಳ್ಳಾರಿ ಪ್ರದೇಶವು ಕರ್ನಾಟಕದಲ್ಲಿ ಉಳಿಯುವಲ್ಲಿ ಬಳ್ಳಾರಿ ಮಹಿಳೆಯರ ಕೊಡುಗೆಯನ್ನು ಸ್ಮರಿಸಿ ಕನ್ನಡವನ್ನು ಪ್ರತಿಯೊಬ್ಬರು ನಡೆ-ನುಡಿಯಲ್ಲಿ ರೂಢಿಸಿಕೊಳ್ಳುವ ಅಗತ್ಯತೆಯಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಧ್ಯಯನ ವಿಭಾಗದ ಅಧ್ಯಾಪಕರಾದ ಡಾ.ಕೆ.ಎಸ್. ಶಿವಪ್ರಕಾಶ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಪ್ರೊ.ರಾಬರ್ಟ್ ಜೋಸ್, ಕನ್ನಡ ವಿಭಾಗದ ಉಪನ್ಯಾಸಕರಾದ ಡಾ.ಗಿರೇಗೌಡ ಅರಳಿಹಳ್ಳಿ, ಡಾ.ಕೆ.ಶಕೀಲಾ, ಕು.ಹರಿಣಿ, ಸಿದ್ದೇಶ್ ಮತ್ತು ವಿವಿಧ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಇನ್ನೀತರರು ಇದ್ದರು.