ನಾಳೆ ಬಳ್ಳಾರಿಗೆ ಸ್ಟಾರ್ಟ್ ಅಪ್ ಬಸ್ ಆಗಮನ
BP News ಬಳ್ಳಾರಿ,ಅ.23-ಕಮಿಟಿ ಆನ್ ಎಂಎಸ್ಎಂಇ ಅಂಡ್ ಸ್ಟಾರ್ಟ್ ಅಪ್ ನಿಂದ ಕೈಗಾರಿಕೆ ಸ್ಥಾಪಿಸುವವರಿಗಾಗಿ ಮಾರ್ಗದರ್ಶನ ನೀಡಲು ಐಸಿಎಐ ಎಂಎಸ್‍ಎಂಇ ಯಾತ್ರೆ ಹೈದರಾಬಾದಿನಿಂದ ಬಸ್ ಆಗಮಿಸಲಿದ್ದು ನಾಳೆ ಬಳ್ಳಾರಿಯಲ್ಲಿ ಸ್ವಾಗತಿಸುವುದಾಗಿ ಸ್ಟಾರ್ಟ್ ಅಪ್ ನ ಸಮಿತಿ ಅಧ್ಯಕ್ಷ ಸಿರಿಗೇರಿ ಪನ್ನಾರಾಜ್ ತಿಳಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆದಾರರಿಗೆ ಪ್ರೇರಣೆ ನೀಡಲು ಹೈದರಾಬಾದ್ ನಿಂದ ಬಸ್ ಯಾತ್ರೆ ಆರಂಭವಾಗಿದೆ. ಅ.28 ಕ್ಕೆ ಆಗಮಿಸಲಿರುವ ಬಸ್ ಯಾತ್ರೆಗೆ ಸಂಸದ ವೈ.ದೇವೇಂದ್ರಪ್ಪ ಮತ್ತು ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಅವರು ಸ್ವಾಗತಿಸಲಿದ್ದಾರೆ ಎಂದರು.
——
ಬಳ್ಳಾರಿಯಲ್ಲಿ ಜಿ.ಜನಾರ್ದನರೆಡ್ಡಿ ಅವರಿಂದ ಅಪ್ಪು ಪುತ್ಥಳಿ ಅನಾವರಣ
BP News ಬಳ್ಳಾರಿ,ಅ.27-ಇಲ್ಲಿನ ತಾಳೂರು ರಸ್ತೆಯ ಬಲ ಪಾಶ್ರ್ವದಲ್ಲಿನ ಕುರುವಳ್ಳಿ ಎನ್‍ಕ್ಲೇವ್ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಿದ ವರನಟ ಡಾ.ರಾಜಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಅವರ ಪುತ್ಥಳಿಯನ್ನು ಉದ್ಯಮಿ ಜಿ.ಜನಾರ್ಧನರೆಡ್ಡಿ ಅವರು ಅನಾವರಣಗೊಳಿಸಿದರು.
ನಗರ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದ ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಿಸಿದ್ದ ಶಿಲ್ಪಿಗಳನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ್ ಮೋತ್ಕರ್, ಗುಡಿಗಂಟಿ ಹನುಮಂತ, ಸಂಘಟಕರಾದ ಸುನಿಲ್ ಕುಮಾರ್, ನಾಗರಾಜ ಕುರುವಳ್ಳಿ, ಚಂದ್ರಶೇಖರ್ ಆಚಾರ್, ಪದ್ಮಾವತಿ ಸುಭಾಷ್ ಆಚಾರ್ಯ, ಮಂಜುನಾಥ್ ಇನ್ನಿತರರು ಇದ್ದರು.
—–
ಯಾರ್ರೀ ಸುನೀಲ್ ರಾವೂರು?-ಅನಿಲ್ ಲಾಡ್ ಪ್ರಶ್ನೆ
BP News ಬಳ್ಳಾರಿ,ಅ.27-ನಗರ ವಿಧಾನಸಭಾ ಕ್ಷೇತ್ರಕ್ಕೆ ಸುನಿಲ್ ರಾವೂರು ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎನ್ನುವ ವಿಷಯ ಇದೀಗ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಬಳ್ಳಾರಿ ನಗರದ ಮಾಜಿ ಶಾಸಕ ಹೆಚ್.ಅನಿಲ್ ಲಾಡ್ ಸುನಿಲ್ ರಾವೂರು ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರ್ಯಾರೋ ಸುನಿಲ್ ಕುಮಾರ್ ಅಂತೆ…. ಡಿಕೆ ಶಿವಕುಮಾರ್ ಅವರು ಲೆಟರ್ ಕೊಟ್ಟಾರಂತೆ…. ಇನ್ ಕಮ್ ಟ್ಯಾಕ್ಸ್ ಅಧಿಕಾರಿಯ ತಮ್ಮನಂತೆ…. ಯಾರಿಗೋ ಸಹಾಯ ಮಾಡಿದ್ದಾರಂತೆ….. ಏನೇನೋ ಕಥೆ ಹೇಳ್ತಾರೆ….. ಸುಮ್ನೆ ಹೇಳೋದಲ್ಲ…. ಅದೇನಿದೆ ತೋರಿಸ್ರಪ್ಪಾ…. ಹೀಗೆಂದು ಕಿಡಿ ಕಾರಿದ್ದಾರೆ.
—–
ಬಳ್ಳಾರಿಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಅ.28ರಂದು
BP News ಬಳ್ಳಾರಿ,ಅ.27-ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ಇವರ ಸಂಯುಕ್ತಾಶ್ರಯದಲ್ಲಿ 67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನನ್ನ ನಾಡು, ನನ್ನ ಹಾಡು ಎಂಬ ಶೀರ್ಷಿಕೆಯಡಿ ಕೋಟಿ ಕಂಠ ಗಾಯನ ಕಾರ್ಯಕ್ರಮ ಅ.28ರಂದು ಬೆಳಗ್ಗೆ 11ಕ್ಕೆ ನಗರದ ಕಂಟೋನ್‍ಮೆಂಟ್‍ನ ವಿಮ್ಸ್ ಮೈದಾನದ ಆವರಣದಲ್ಲಿ ಆಯೋಜಿಸಲಾಗಿದೆ.
ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಕಾರ್ಯಕ್ರಮ ಉದ್ಘಾಟಿಸುವರು. ಬಳ್ಳಾರಿ ಗ್ರಾಮೀಣ ಶಾಸಕರಾದ ಬಿ.ನಾಗೇಂದ್ರ ಅವರು ಅಧ್ಯಕ್ಷತೆ ವಹಿಸುವರು.
——-
ೀರಿನ ಪೈಪ್ ಅಳವಡಿಕೆ ಕಾಮಗಾರಿ ಪರಿಶೀಲನೆ
BP News ಬಳ್ಳಾರಿ,ಅ.25-ಬಳ್ಳಾರಿ ನಗರದ ವಾರ್ಡ್ 21ರ ಕನಕ ದುರ್ಗಮ್ಮ ದೇವಸ್ಥಾನದಿಂದ ಗಾಂಧಿನಗರ ಬೂಸ್ಟರ್‍ವರೆಗಿನ ನೀರಿನ ಪೈಪ್ ಅಳವಡಿಕೆ ಕಾಮಗಾರಿಯನ್ನು ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರರೆಡ್ಡಿ ಅವರು ಗುರುವಾರದಂದು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕಾಮಗಾರಿಯನ್ನು ಶೀಘ್ರ ಮುಗಿಸಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇವರೊಂದಿಗೆ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕಾರ್, ರಾಬಕೊ ಹಾಲು ಒಕ್ಕೂಟ ನಿರ್ದೇಶಕರಾದ ವೀರಶೇಖರರೆಡ್ಡಿ, ಮಾಜಿ ಸದಸ್ಯ ಮಲ್ಲನಗೌಡ ಸೇರಿದಂತೆ ಇನ್ನಿತರರು ಇದ್ದರು.
—–
ಎಲ್‍ಎಲ್‍ಸಿ ಕಾಲುವೆಗೆ ನೀರು ಬಿಡಲು ಒತ್ತಾಯಿಸಿ ರಸ್ತೆ ತಡೆದು ಪ್ರತಿಭಟನೆ
BP News ಬಳ್ಳಾರಿ,ಅ.27-ಎಲ್‍ಎಲ್‍ಸಿ ಕಾಲುವೆಗೆ ಸಂಪೂರ್ಣ ನೀರು ಬಿಡಬೇಕೆಂದು ಆಗ್ರಹಿಸಿ ಆಂಧ್ರಪ್ರದೇಶ ಮತ್ತು ಕರ್ನಾಟಕದ ನೂರಾರು ರೈತರು ಬಳ್ಳಾರಿಯಿಂದ ಮೋಕಾಕ್ಕೆ ಹೋಗುವ ಎನ್.ಹೆಚ್ ರಸ್ತೆಯನ್ನು ತಡೆದು ಹೋರಾಟ ನಡೆಸಿದರು.
ಆಂಧ್ರಪ್ರದೇಶದ ಮಾಜಿ ಕೇಂದ್ರ ರೈಲ್ವೆ ಸಚಿವರಾದ ಕೊಟ್ಟ ಜಯಸೂರ್ಯ ಪ್ರಕಾಶ್ ರೆಡ್ಡಿ ಮತ್ತು ಮಾಜಿ ಡೋನ್ ಕ್ಷೇತ್ರದ ಶಾಸಕರಾದ ಸುಜಾತಮ್ಮ ಹಾಗೂ ಆಲೂರು, ಆದೋನಿ, ಮಂತ್ರಲಯಂ ಕ್ಷೇತ್ರಗಳ ನೂರಾರು ರೈತ ಹೋರಾಟಗಾರರು ಮತ್ತು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಗ್ರಾಮಾಂತರ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಕ್ಷೇತ್ರಗಳ ನೂರಾರು ರೈತರು ರಸ್ತೆ ತಡೆಯಲ್ಲಿ ಭಾಗವಹಿಸಿದ್ದರು.
—–