ಬಳ್ಳಾರಿ ಮಹಾನಗರ ಪಾಲಿಕೆ: ಜಾಹೀರಾತು ಹಾಗೂ ವ್ಯಾಪಾರ ವಹಿವಾಟುಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಬಳಸಿ

0
229

BP NEWS: ಬಳ್ಳಾರಿ: ಅಕ್ಟೋಬರ್.25: ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಳವಡಿಸುವ ಜಾಹೀರಾತು ಹಾಗೂ ವ್ಯಾಪಾರ ವಹಿವಾಟುಗಳ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ನಮೂದಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಾದ ರುದ್ರೇಶ್ ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ನಗರದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲು ಹಾಗೂ ಕನ್ನಡ ಭಾಷೆಯನ್ನು ಬಳಸಲು ಕಡ್ಡಾಯವಾಗಿ ಸೂಚಿಸಿರುವುದರಿಂದ ಉದ್ದಿಮೆದಾರರು ತಮ್ಮ ತಮ್ಮ ಜಾಹೀರಾತು ಫಲಕಗಳಲ್ಲಿ ಹಾಗೂ ವ್ಯಾಪಾರ ವಹಿವಾಟುಗಳಾದ ಅಂಗಡಿ, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ವಸತಿಗೃಹಗಳು, ಚಿತ್ರಮಂದಿರಗಳು ಹಾಗೂ ಇತ್ಯಾದಿ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ನಾಮಫಲಕವನ್ನು ಬಳಸಿ ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here