BP News Karnataka Super Fast 22-10-2022

0
137

ಶ್ರೀ ಗುರು ರಾಘವೇಂದ್ರ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿ ಶುಭಾರಂಭ


BP News  ಬಳ್ಳಾರಿ,ಅ.22-ಶ್ರೀ ಗುರು ರಾಘವೇಂದ್ರ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿಯು ಈಗ ಆರ್ಬ್ ಎನರ್ಜಿ ಸಂಸ್ಥೆಯ 414-ಕಿಲೋವ್ಯಾಟ್ ಮೇಲ್ಚಾವಣಿಯ ಸೋಲಾರ್ ಸಿಸ್ಟಮ್‍ನಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಆರ್ಚ್ ಎನರ್ಜಿಯ ಉಪಾಧ್ಯಕ್ಷ ಸುಧೀಂದ್ರ ಹೇಳಿದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಬಳ್ಳಾರಿಯಲ್ಲಿರುವ ಶ್ರೀ ಗುರು ರಾಘವೇಂದ್ರ ಕಾಟನ್ ಜಿನ್ನಿಂಗ್ ಅಂಡ್ ಪ್ರೆಸ್ಸಿಂಗ್ ಫ್ಯಾಕ್ಟರಿಯು ಕೇವಲ 3 ವರ್ಷಗಳಲ್ಲಿ ತಮ್ಮ ಮೇಲ್ಪಾವಣಿಯ ಸೋಲಾರ್ ಸಿಸ್ಟಮ್’ ಮೂಲಕ ವರ್ಷಕ್ಕೆ ರೂ. 15 ಲಕ್ಷಕ್ಕಿಂತ ಹೆಚ್ಚು ಹಣವನ್ನು ಉಳಿಸಲಿದೆ ಎಂದು ತಿಳಿಸಿದ್ದಾರೆ.
——-
ಧನ್ವಂತ್ರಿ ಜಯಂತಿ ಆಚರಣೆ


BP News  ಬಳ್ಳಾರಿ,ಅ.22-ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತಿನ ವತಿಯಿಂದ ಇಂದು ಧನ್ವಂತ್ರಿ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಬಳ್ಳಾರಿ ಜಿಲ್ಲೆಯಲ್ಲಿ ಸರಳವಾಗಿ ಧನ್ವಂತ್ರಿ ಜಯಂತಿಯನ್ನು ಆಚರಿಸಲಾಗಿದ್ದು, ಆಯಾ ಪಾರಂಪರಿಕ ವೈದ್ಯರು ಜಯಂತಿ ನಿಮಿತ್ತ ಸಾರ್ವಜನಿಕರಿಗೆ ಉಚಿತವಾಗಿ ಔಷದಿಗಳನ್ನು ವಿತರಿಸಿದರು.
ಬಳ್ಳಾರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯಕ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶರಣಪ್ಪ ಬಳ್ಳಾರಿ ಇವರು ಅಧ್ಯಕ್ಷತೆ ವಹಿಸಿದ್ದರು. ಇವರೊಂದಿಗೆ ಸ್ಥಳೀಯರು ಕೂಡ ಇದ್ದರು.
—–
ಬಳ್ಳಾರಿಯಲ್ಲಿ ನವೆಂಬರ್ 20ರಂದು ಬಿಜೆಪಿ ಎಸ್‍ಟಿ ಮೋರ್ಚಾ ರಾಜ್ಯ ಸಮಾವೇಶ ಹಮ್ಮಿಕೊಳ್ಳಲು ನಿರ್ಧಾರ


BP News  ಬಳ್ಳಾರಿ,ಅ.22-ರಾಜ್ಯ ಬಿಜೆಪಿ ಎಸ್.ಟಿ ಮೋರ್ಚಾವನ್ನು ನವೆಂಬರ್ 20 ರಂದು ಬಳ್ಳಾರಿಯಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.
ಇಂದು ಇಲ್ಲಿನ ಸಂಗನಕಲ್ಲು ರಸ್ತೆಯಲ್ಲಿರುವ ಕೆಆರ್‍ಎಸ್ ಪಂಕ್ಷನ್ ಹಾಲ್ ನಲ್ಲಿ ನಡೆದ ಬಿಜೆಪಿ ಎಸ್‍ಟಿ ಮೋರ್ಚಾ ಪೂರ್ವಭಾವಿ ಸಮಾವೇಶದಲ್ಲಿ ಭಾಗವಹಿಸಿರುವ ಎಸ್‍ಟಿ ಸಮುದಾಯದ ನಾಯಕರು, ಸಚಿವರು ಆದ ಬಿ.ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಸಮಾವೇಶವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಭೆ ತೀರ್ಮಾನಿಸಿದ್ದು ಮನೆ ಮನೆಗೂ ಬಿಜೆಪಿಯ ಕಾರ್ಯಸಾಧನೆಗಳು ಮತ್ತು ಮೀಸಲಾತಿ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಕಾರ್ಯಕರ್ತರಿಗೆ ಪ್ರೇರಣೆ ನೀಡಲಾಯಿತು.
——
ಬಳ್ಳಾರಿಯಿಂದ ಅಂಜನಾದ್ರಿಗೆ ಬಸ್ ಆರಂಭ


BP News  ಬಳ್ಳಾರಿ,ಅ.22-ಬಳ್ಳಾರಿ ನಗರದಿಂದ ಕಂಪ್ಲಿ, ಗಂಗಾವತಿ ಮೂಲಕ ಅಂಜನಾದ್ರಿಗೆ ನೂತನವಾಗಿ ಬಸ್ ಸಂಚರಿಸಲು ಸಾರಿಗೆ ಸಚಿವರಾದ ಬಿ.ಶ್ರೀರಾಮುಲು ಚಾಲನೆ ನೀಡಿದರು.
ಆನೆಗುಂದಿ, ಸಣಾಪುರ, ಶಿವಪುರ ಬಳಿಯ ಅಂದಿಗಾಲೀಶ್ವರಸ್ವಾಮಿ ದೇವಸ್ಥಾನ ಹಾಗೂ ಹುಲಿಗಿ ದೇವಸ್ಥಾನದವರೆಗೆ ಬಸ್ ಸಂಚಾರ ಆರಂಭಿಸಲಾಗಿದೆ. ಇದು ಬಳ್ಳಾರಿ, ಕೊಪ್ಪಳ ಜಿಲ್ಲೆಗಳ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿದ್ದು ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬಹುದೆಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ನಗರ ಶಾಸಕರಾದ ಜಿ ಸೋಮಶೇಖರ್ ರೆಡ್ಡಿ, ಮಾಜಿ ಸಂಸದರಾದ ಜಿ ಶಾಂತಾ, ಮಹಾನಗರ ಪಾಲಿಕೆ ಸದಸ್ಯರಾದ ಕಲ್ಪನಾ ವೆಂಕಟರಾಮ ರೆಡ್ಡಿ ಮತ್ತಿತರರು ಇದ್ದರು.
—–
ನೂತನ ಪದಾಧಿಕಾರಿಗಳ ನೇಮಕ


BP News ಹೊಸಪೇಟೆ: ಅ22-ನೂತನ ವಿಜಯನಗರ ಜಿಲ್ಲೆಯಲ್ಲಿ ವಿಜಯನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅನ್ನು ಸ್ಥಾಪನೆಗೊಳಿಸಿ ಪದಾಧಿಕಾರಿಗಳನ್ನ ನೇಮಕ ಮಾಡಲಾಯಿತು.
ಅಸೋಸಿಯೇಷನ್ ಜಿಲ್ಲಾಧ್ಯಕ್ಷರಾಗಿ ಗುಜ್ಜಲ ರಾಮಾಂಜಿನಿ, ಗೌರವಾಧ್ಯಕ್ಷರಾಗಿ ಮಧುಸೂಧನ್ ಕುಲ್ಕರ್ಣಿ, ಹಿರಿಯ ಸಲಹೆಗಾರರಾಗಿ ಮೋಹನ್ ಕುಮಾರ್ ದಾನಪ್ಪ, ಉಪಾಧ್ಯಕ್ಷರಾಗಿ ವೀರಾಂಜನೇಯ, ಕೆ.ಎಸ್.ಸತ್ಯನಾರಾಯಣ ವಕೀಲರು, ಹೊನ್ನೂರ ಅಲಿ, ಕೆ. ನಾಗೇಂದ್ರ, ಪ್ರಧಾನ ಕಾರ್ಯದರ್ಶಿಯಾಗಿ ಜಿ. ಗಣೇಶ್ ಇವರನ್ನು ಆಯ್ಕೆ ಮಾಡಿ ನೇಮಕ ಮಾಡಲಾಯಿತು.
ಇದೇವೇಳೆ ಅಸೋಸಿಯೇಷನ್ ನ ಹಿರಿಯ ಸಲಹೆಗಾರರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ವಿಜಯನಗರ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
—–

 

LEAVE A REPLY

Please enter your comment!
Please enter your name here