ಬಳ್ಳಾರಿ: ಜಿಲ್ಲಾ ಮಟ್ಟದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು

0
109

BP NEWS: ಬಳ್ಳಾರಿ: ಅಕ್ಟೋಬರ್.07: ನೆಹರು ಯುವ ಕೇಂದ್ರದಿಂದ ರಾಷ್ಟ್ರೀಯ ಏಕತೆ ಹಾಗೂ ಒಗ್ಗಟ್ಟು ಎಂಬ ವಿಷಯದಡಿ ಜಿಲ್ಲಾ ಮಟ್ಟದ ಜಿಲ್ಲಾ ಯುವ ಉತ್ಸವ ಎಂಬ ವಿನೂತನವಾದ ಕಾರ್ಯಕ್ರಮದಡಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಮೊಂಟು ಪಾತರ್ ಅವರು ತಿಳಿಸಿದ್ದಾರೆ.
ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗುತ್ತಿದ್ದು, ಜಿಲ್ಲೆಯ 15 ವರ್ಷದಿಂದ 29 ವರ್ಷ ವಯೋಮಿತಿಯ ಯುವಕ, ಯುವತಿಯರು ಭಾಗವಹಿಸಬಹುದು. ವಿಜೇತರಾದ ತಂಡಗಳಿಗೆ ಪ್ರಥಮ, ದ್ವಿತೀಯ, ತೃತೀಯ ನಗದು ಬಹುಮಾನ ಹಾಗೂ ಆಕರ್ಷಕ ಪಾರಿತೋಷಕ ಮತ್ತು ಪ್ರಮಾಣ ಪತ್ರ ನೀಡಲಾಗುತ್ತದೆ. ಇದರಲ್ಲಿ ಪ್ರಥಮ ಸ್ಥಾನ ಪಡೆದು ವಿಜೇತರಾದವರು ರಾಜ್ಯ ಮಟ್ಟದ ಕಾರ್ಯಕ್ರಮಗಳಿಗೆ ಭಾಗವಹಿಸಬಹುದು ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ್ದು ವಿಜೇತರಾದವರು ರಾಷ್ಟ್ರ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಇದು ಸ್ಪರ್ಧಾ ಕಾರ್ಯಕ್ರಮ ಮಾತ್ರವಲ್ಲದೇ ಸ್ಥಳೀಯ ಯುವ ಪ್ರತಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ಹಾಗೂ ಮನೋರಂಜನೆ ಅಲ್ಲದೇ ಸಾಮಾಜಿಕ ಸಂದೇಶವನ್ನು ಯುವ ಜನರಿಗೆ ಮುಟ್ಟಿಸುವ ಕೆಲಸವನ್ನು ಈ ಸ್ಪರ್ಧಾ ಕಾರ್ಯಕ್ರಮಗಳಿಂದ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.
ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ವಿವರ:
ಯುವ ಕಲಾವಿದರ ಚಿತ್ರಾಕಲಾ ಸ್ಪರ್ಧೆ(Pಚಿiಟಿಣiಟಿg): ವಿಷಯ ರಾಷ್ಟ್ರೀಯ ಏಕತೆ ಹಾಗೂ ಒಗ್ಗಟ್ಟು ಕುರಿತಂತೆ ಸಮಯ ಅವಕಾಶ 1 ಗಂಟೆ ಮಾತ್ರ, ಚಿತ್ರ ಬಿಡಿಸಲು ಪರಿಕಾರಗಳನ್ನು ಸ್ಪರ್ಧಿಗಳೇ ತರಬೇಕು, ಜಿಲ್ಲೆಯ 30 ಜನರಿಗೆ ಭಾಗವಹಿಸಲು ಅವಕಾಶ ಇರುತ್ತದೆ ಹಾಗೂ ವಿಜೇತರಾದವರಿಗೆ ಬಹುಮಾನ ಪ್ರಥಮ 1ಸಾವಿರ, ದ್ವಿತೀಯ ಬಹುಮಾನ 750, ಮೂರನೇಯ ಬಹುಮಾನವಾಗಿ ರೂ.500 ಆಗಿರುತ್ತದೆ. ಮೊಬೈಲ್ ಛಾಯಾಗ್ರಹಣ ಸ್ಪರ್ಧೆ(Phoಣogಡಿಚಿಠಿhಥಿ): ಸ್ಪರ್ಧೆಯ ವಿಷಯವನ್ನು ಸ್ಥಳದಲ್ಲಿಯೇ ನೀಡಲಾಗುವುದು. ಸಮಯ 2 ಗಂಟೆ ಮತ್ತು 30 ಜನರಿಗೆ ಭಾಗವಹಿಸಲು ಅವಕಾಶವಿದ್ದು, ವಿಜೇತರಾದವರಿಗೆ ಬಹುಮಾನ ಪ್ರಥಮ 1ಸಾವಿರ, ದ್ವಿತೀಯ ಬಹುಮಾನ 750, ಮೂರನೇಯ ಬಹುಮಾನವಾಗಿ ರೂ.500 ಆಗಿರುತ್ತದೆ.
ಯುವ ಬರಹಗಾರರ ಸ್ಪರ್ಧೆ(ಙouಟಿg Wಡಿiಣeಡಿs): ಕವಿತೆ ರಚನೆ ಮಾಡುವುದು, ವಿಷಯ ರಾಷ್ಟ್ರೀಯ ಏಕತೆ ಹಾಗೂ ಒಗ್ಗಟ್ಟು ಆಗಿದ್ದು, ಕನ್ನಡ ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ರಚಿಸಬಹುದು, ಸಮಯ ಅವಕಾಶ 45ನಿಮಿಷಗಳು, ಜಿಲ್ಲೆಯ 30 ಜನರಿಗೆ ಅವಕಾಶವಿದ್ದು, ವಿಜೇತರಾದವರಿಗೆ ಬಹುಮಾನ ಪ್ರಥಮ 1ಸಾವಿರ, ದ್ವಿತೀಯ ಬಹುಮಾನ 750, ಮೂರನೇಯ ಬಹುಮಾನವಾಗಿ ರೂ.500 ಆಗಿರುತ್ತದೆ.
ಭಾಷಣ ಸ್ಪರ್ಧೆ(Sಠಿeeಛಿh ಅoಟಿಣesಣ): ವಿಷಯವಾಗಿ ರಾಷ್ಟ್ರೀಯ ಏಕತೆ ಹಾಗೂ ಒಗ್ಗಟ್ಟು, ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ನಡೆಸಲಾಗುತ್ತದೆ. ಸಮಯ 7ನಿಮಿಷವಿದ್ದು, 10 ಜನರಿಗೆ ಅವಕಾಶ ಇರುತ್ತದೆ, ವಿಜೇತರಾದವರಿಗೆ ಪ್ರಥಮ 5ಸಾವಿರ ಬಹುಮಾನ, ದ್ವಿತೀಯ ಬಹುಮಾನ 2ಸಾವಿರ, ಮೂರನೇಯ ಬಹುಮಾನವಾಗಿ 1ಸಾವಿರ ಆಗಿರುತ್ತದೆ.
ಯುವ ಸಂವಾದ ಚರ್ಚೆ(ಆebಚಿಣe ಅomಠಿeಣiಣioಟಿ): ಇಂಡಿಯಾ@2047, ರಾಷ್ಟ್ರೀಯ ಏಕತೆ ಹಾಗೂ ಒಗ್ಗಟ್ಟು ಎಂಬ ವಿಷಯಗಳ ಕುರಿತು, ಕನಿಷ್ಟ 100 ಯುವ ಜನರು ಕನ್ನಡ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಮಾತನಾಡಬಹುದು, ವಿಜೇತರಾದವರಿಗೆ 1500ರೂ. ಬಹುಮಾನ(4 ಜನ) ವಿತರಿಸಲಾಗುವುದು.
ಸಾಂಸ್ಕøತಿಕ ಉತ್ಸವ(ಜಾನಪದ ನೃತ್ಯ): 10 ತಂಡಗಳಿಗೆ ಅವಕಾಶ ಕಲ್ಪಿಸಲಾಗಿದ್ದು, ತಂಡದಲ್ಲಿ ಕನಿಷ್ಟ 10 ಗರಿಷ್ಟ 15 ಜನ ಇರತಕ್ಕದು, ಸಮಯ ಅವಕಾಶ 8 ನಿಮಿಷ ಆಗಿರುತ್ತದೆ. ವಿಜೇತರಾದವರಿಗೆ ಪ್ರಥಮ 5ಸಾವಿರ ಬಹುಮಾನ, ದ್ವಿತೀಯ ಬಹುಮಾನ 2,500, ಮೂರನೇಯ ಬಹುಮಾನವಾಗಿ 1250ರೂ. ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಸೂಚನೆ: ಈ ಎಲ್ಲಾ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಬ್ಬರಿಗೆ ಒಂದು ಕಾರ್ಯಕ್ರಮದಲ್ಲಿ ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ. ಭಾಗವಹಿಸುವ ಸ್ಪರ್ಧಿಗಳು 10 ನಿಮಿಷ ಮುಂಚಿತವಾಗಿ ಇರತಕ್ಕದು. ಭಾಗವಹಿಸುವ ಸ್ಪರ್ಧಾಳುಗಳು ನೆಹರು ಯುವ ಕೇಂದ್ರದ ಕಚೇರಿ ಅಥವಾ ವಾಟ್ಸಪ್ ಮೂಲಕ ಕಡ್ಡಾಯವಾಗಿ ನೊಂದಣೆ ಮಾಡಬೇಕು. ನೊಂದಣೆಯಾದವರಿಗೆ ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.
ಅ.14ರಂದು ನೊಂದಣೆ ಮಾಡಲು ಕೊನೆಯ ದಿನವಾಗಿರುತ್ತದೆ. ನೊಂದಣೆ ಮಾಡಲು ಅರ್ಜಿಗಳನ್ನು ಇ-ಮೇಲ್ ಜಥಿಛಿಟಿಥಿಞbeಟಟಚಿಡಿಥಿ@gmಚಿiಟ.ಛಿom ಹಾಗೂ ವಾಟ್ಸಾಪ್ ನಂ.9049487027, 9448006150 ಮೂಲಕ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.08392-276839 ಹಾಗೂ ಲಿಯಾ ಸಂಸ್ಥೆಯ ಅಧ್ಯಕ್ಷರಾದ ಆರ್‍ಕೆ ಅಬ್ರಹಂ ಅವರ ಮೊ.9448006150 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here