ಟಿಬಿ ಮುಕ್ತ ಭಾರತ ಅಭಿಯಾನ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರಿಂದ 10 ರೋಗಿಗಳ ದತ್ತು ಸ್ವೀಕಾರ

0
281

BP NEWS: ಬಳ್ಳಾರಿ: ಅಕ್ಟೋಬರ್.01: ಪ್ರಧಾನಿ ನರೇಂದ್ರ ಮೋದಿ ಅವರ 2030ರ ವೇಳೆಗೆ `ಟಿಬಿ ಮುಕ್ತ ಭಾರತ ಅಭಿಯಾನ’ಕ್ಕೆ ಸ್ಪಂದಿಸಿರುವ ಬಳ್ಳಾರಿ-ವಿಜಯನಗರ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು 10 ಜನ ಕ್ಷಯ ರೋಗಿಗಳನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು `ಟಿಬಿ ಮುಕ್ತ ಭಾರತ ಅಭಿಯಾನ’ದ ಅಂಗವಾಗಿ `ಮನ್ ಕಿ ಬಾತ್’ನಲ್ಲಿ ವಿಷಯ ಪ್ರಸ್ತಾಪ ಮಾಡಿ, ದಾನಿಗಳು, ಕಾಪೆರ್Çರೇಟ್ ಕಚೇರಿಗಳು, ಎನ್‍ಜಿಓಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಕ್ಷಯ ರೋಗಿಗಳನ್ನು ದತ್ತು ಪಡೆದು ಅವರಿಗೆ ಆರೋಗ್ಯ ಸುಧಾರಣೆಗೆ ಸ್ಪಂದಿಸಬೇಕು ಎಂದು ಕರೆ ನೀಡಿದ್ದರು.


ಈ ಹಿನ್ನಲೆಯಲ್ಲಿ ತ್ವರಿತವಾಗಿ ಸ್ಪಂದಿಸಿದ ವೈ.ಎಂ. ಸತೀಶ್ ಅವರು, ತಾವು ದತ್ತು ಪಡೆದ 10 ಜನ ಕ್ಷಯ ರೋಗಿಗಳನ್ನು ಬಳ್ಳಾರಿ ನಗರದ ರಾಣಿತೋಟದಲ್ಲಿ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಭೇಟಿ ಮಾಡಿ, ಕ್ಷಯ ಸಮಸ್ಯೆಯಿಂದ ನರಳುತ್ತಿರುವವರು ಸಕಾಲದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆದಲ್ಲಿ ವ್ಯಾದಿಯು ಸಂಪೂರ್ಣ ಗುಣಮುಖವಾಗಲಿದೆ. ರೋಗಿಗಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು ಎಂದು ಹೇಳಿದರು.
ಕ್ಷಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದು, ದತ್ತು ಸ್ವೀಕೃತವಾದ ರೋಗಿಗಳು, ‘ಸರ್ಕಾರ ನೀಡುತ್ತಿರುವ ಔಷಧಿಯನ್ನು ಸರಿಯಾಗಿ ಪಡೆಯುತ್ತಿದ್ದೇವೆ. ಉತ್ತಮ ಚಿಕಿತ್ಸೆ ಸಿಗುತ್ತಿದೆ. ದೇಶವನ್ನು ಕ್ಷಯಮುಕ್ತಗೊಳಿಸಲು ನಾವೆಲ್ಲರೂ ಬದ್ಧವಾಗಿದ್ದು, ದಾನಿಗಳು ನೀಡುವ ಪೌಷ್ಠಿಕ ಆಹಾರವನ್ನು ಸೇವೆಸಿ ಶೀಘ್ರವೇ ಗುಣಮುಖರಾಗುತ್ತೇವೆ’ ಎಂದು ಭರವಸೆ ನೀಡಿದರು.


ಜಿಲ್ಲಾ ಕ್ಷಯ ನಿರ್ಮೂಲನಾ ಅಧಿಕಾರಿ ಡಾ.ಇಂದ್ರಾಣಿ ಅವರು ಮಾತನಾಡಿ, ದತ್ತು ಸ್ವೀಕೃತವಾದ ಕ್ಷಯ ರೋಗಿಗಳು ದಾನಿಗಳು ನಿಸ್ವಾರ್ಥವಾಗಿ ಸಲ್ಲಿಸಿರುವ ಸೇವೆಯನ್ನು ಸಮರ್ಪಕವಾಗಿ ಬಳಕೆ ಮಾಡಿ, ಗುಣಮುಖರಾಗಿ ದಾನಿಗಳ ಸೇವೆಗೆ ಸಾರ್ಥಕತೆ ತರಬೇಕು. ರೋಗಿಗಳ ಆರೋಗ್ಯ ಸುಧಾರಣೆಯಿಂದ ದಾನಿಗಳ ಸಂಖ್ಯೆ ಹೆಚ್ಚಲಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್.ದಾಸಪ್ಪನವರ
ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here