ಕೊಪ್ಪಳದ ಸಿದ್ದಾಪುರದಲ್ಲಿ ಜೋಳಿಗೆ ಹಿಡಿದು ಪ್ಲಾಸ್ಟಿಕ್ ಸಂಗ್ರಹ: *ಸಿದ್ದಾಪುರದಲ್ಲಿ ಜೋಳಿಗೆ ಹಿಡಿದು ಪ್ಲಾಸ್ಟಿಕ್ ಸಂಗ್ರಹ: ಪ್ಲಾಸ್ಟಿಕ್ ನಿಷೇಧ ಕುರಿತು ಜಾಗೃತಿ ಜಾಥಾ

0
103

BP NEWS:ಕೊಪ್ಪಳ: ಸಪ್ಟೆಂಬರ್.30:  ಕಾರಟಗಿ ತಾಲೂಕಿನ ಸಿದ್ದಾಪುರದಲ್ಲಿ ಸ್ವಚ್ಛತಾ ಹೀ ಸೇವಾ ಆಂದೋಲನಾ ಅಂಗವಾಗಿ ಗ್ರಾಮದಲ್ಲಿ ಜಿ.ಪಂ ಉಪ ಕಾರ್ಯದರ್ಶಿಗಳಾದ ಶ್ರೀ ಸಮೀರ್ ಮುಲ್ಲಾ ಸರ್ ಅವರ ನೇತೃತ್ವದಲ್ಲಿ ಜೋಳಿಗೆ ಹಿಡಿದು ಪ್ಲಾಸ್ಟಿಕ್ ಸಂಗ್ರಹಿಸಲಾಯಿತು. ಈ ಮೊದಲು ಗ್ರಾಪಂ ಆವರಣದಲ್ಲಿ ಗ್ರಾಮ ನೈರ್ಮಲ್ಯ ನಕ್ಷೆ ಬಿಡಿಸಿ ಗ್ರಾಮಸ್ಥರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಗಮನಸೆಳೆದ ಬ್ಯಾಂಡ್ ಮೇಳ ಗ್ರಾಮದಲ್ಲಿ ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳ ಜಾಗೃತಿ ಜಾಥಾದಲ್ಲಿ ಬ್ಯಾಂಡ್ ಮೇಳ ಗಮನಸೆಳೆಯಿತು.

ಕರಪತ್ರ”: ಗ್ರಾಮದ ಹೋಟೆಲ್, ಕಿರಾಣಿ ಅಂಗಡಿ, ಬೇಕರಿಗಳಿಗೆ ತಾಪಂ ಇಓ ಡಾ.ಡಿ.ಮೋಹನ್ ನೇತೃತ್ವದ ತಂಡವು ಜೋಳಿಗೆ ಹಿಡಿದು ತೆರಳಿ ಪ್ಲಾಸ್ಟಿಕ್ ಸಂಗ್ರಹಿಸಿತು. ಮಕ್ಕಳು ಜಾಗೃತಿ ಫಲಕ ಹಿಡಿದು ಪಾಲ್ಗೊಂಡಿದ್ದರು.

ಸಹಾಯಕ ನಿರ್ದೇಶಕರು (ಗ್ರಾ.ಉ) ನರಸಪ್ಪ, ಸಹಾಯಕ ನಿರ್ದೇಶಕರಾದ ( ಪಿಆರ್) ಶ್ರೀಮತಿ ವನಜಾ,
ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಾದ  ಸಾಯಿನಾಥ ಹಾಗೂ ವಿವಿಧ ಗ್ರಾಪಂ ಪಿಡಿಓಗಳು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಗ್ರಾಪಂ ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಎನ್ ಆರ್ ಎಲ್ ಎಂ ಸಿಬ್ಬಂದಿಗಳು, ಬಿಎಫ್ ಟಿಗಳು, ಗ್ರಾಮ ಕಾಯಕ ಮಿತ್ರರು ಹಾಜರಿದ್ದರು.

LEAVE A REPLY

Please enter your comment!
Please enter your name here