ಬಳ್ಳಾರಿ ಸಂಚಾರ ಠಾಣೆಯ ವಿರುಪಣ್ಣ ಅಪಘಾತದಲ್ಲಿ ಮೃತ ಎಸ್.ಬಿ.ಐ. ವತಿಯಿಂದ 30ಲಕ್ಷ ಪರಿಹಾರ ಚೆಕ್ ಇನ್ಸೂರೆನ್ಸ್ ವಿತರಣೆ

0
116

BP NEWS: ಬಳ್ಳಾರಿ: ಸೆಪ್ಟೆಂಬರ್.30: ಬಳ್ಳಾರಿ ಸಂಚಾರಿ ಪೊಲೀಸ್ ಠಾಣೆಯ ಪಿಸಿ ವಿರುಪಣ್ಣ ಅವರು ಜೂನ್ 20 ರಂದು ಅಪಘಾತದಲ್ಲಿ ಮರಣ ಹೊಂದಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್‌ನಲ್ಲಿ ಸ್ಯಾಲರಿ ಪ್ಯಾಕೇಜ್ ಇನ್ಸೂರೆನ್ಸ್ ಯೋಜನೆಯ ಫಲಾನುಭವಿಯಾಗಿದ್ದರು. ಅವರ ಕುಟುಂಬಕ್ಕೆ 30 ಲಕ್ಷ ರೂ.ಪರಿಹಾರ ಚೆಕ್‌ನ್ನು ನೀಡಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೈದುಲು ಅಡಾವತ್ ಅವರು ಶುಕ್ರವಾರದಂದು ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅಕಾಲಿಕ ಮರಣ ಹೊಂದಿದ್ದಲ್ಲಿ, ಸ್ಯಾಲರಿ ಪ್ಯಾಕೇಜ್ ಇನ್ಸೂರೆನ್ಸ್ ಯೋಜನೆಯ ಫಲಾನುಭವಿಯಾಗಿದ್ದರೆ ಮಾತ್ರ ಇದು ಉಪಯೋಗವಾಗಲಿದೆ ಎಂದು ಹೇಳಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಪೊಲೀಸ್ ಇಲಾಖೆ ಒಡಂಬಡಿಕೆಯಿAದ ಈ ಸ್ಯಾಲರಿ ಪ್ಯಾಕೇಜ್ ಯೋಜನೆಯು ಪ್ರಾರಂಭವಾಗಿದೆ. ರಾಜ್ಯಾದಾದ್ಯಂತ ಈ ಯೋಜನೆಯು ಜಾರಿಯಲ್ಲಿದ್ದು, ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸೇವೆಯ ಸಂದರ್ಭದಲ್ಲಿ ಅಕಾಲಿಕ ಮರಣ ಹೊಂದಿದಲ್ಲಿ ಈ ಯೋಜನೆಯನ್ನು ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಎ ನಟರಾಜ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪ್ರಾದೇಶಿಕ ವ್ಯವಸ್ಥಾಪಕರಾದ ಲಕ್ಷಣ್ ಸಿಂಹ.ಎA, ಆರ್‌ಬಿಓ ಹಾಗೂ ಎಸ್‌ಬಿಐನ ಮುಖ್ಯ ವ್ಯವಸ್ಥಾಪಕರಾದ ಸಿ.ಎಂ.ಸತೀಶ್ ಕುಮಾರ್, ಮೋತಿ ವೃತ್ತದ ಎಸ್‌ಬಿಐನ ಮುಖ್ಯ ವ್ಯವಸ್ಥಾಪಕ ರಾಜ್‌ಗೋಪಾಲ್ ಸೇರಿದಂತೆ ಕಚೇರಿಯ ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here