BP NEWS: ಬಳ್ಳಾರಿ: ಸೆಪ್ಟೆಂಬರ್.26: ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಸಾರ್ವಜನಿಕರಿಗೆ ರೂ.500 ಶುಲ್ಕವನ್ನು ಪಾವತಿಸಿಕೊಂಡು ಸರ್ವೇ ನಕ್ಷೆಯನ್ನು ನೀಡುತ್ತಿರುವುದನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಕಡಿತಗೊಳಿಸಿ ಇನ್ನು ಮುಂದೆ ಶುಲ್ಕ 300 ರೂಪಾಯಿಗಳಿಗೆ ಮನೆ ಮನೆಗೆ ಸರ್ವೇ ನಕ್ಷೆಯನ್ನು ತಲುಪಿಸಲು ನಿರ್ಣಯಿಸಲಾಗಿದೆ ಎಂದು ಬುಡಾ ಅಧ್ಯಕ್ಷರಾದ ಎಸ್.ಮಾರುತಿ ಅವರು ತಿಳಿಸಿದರು.
ಬಳ್ಳಾರಿ ನಗರದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಕೊಠಡಿಯಲ್ಲಿ ಸೋಮವಾರ ರಂದು ಜರುಗಿದ ಪ್ರತಿಕಾಗೊಷ್ಠಿಯಲ್ಲಿ ಅವರು ಮಾತನಾಡಿದರು.
ಇನ್ನೂ ಮುಂದೆ ಸಾರ್ವಜನಿಕರು ಕಚೇರಿಗೆ ಅಲೆದಾಡುವ ಅಗತ್ಯ ಇಲ್ಲ. ಬದಲಾಗಿ ಸರ್ವೇ ನಕ್ಷೆ ಬೇಕಾದಲ್ಲಿ ಅರ್ಜಿ ಸಲ್ಲಿಸಿದ 7 ದಿನಗಳಲ್ಲಿ ಅಂಚೆ ಮೂಲಕ ರಿಜಿಸ್ಟಾರ್‍ಮುಖಾಂತರ ಮನೆಯ ಬಾಗಿಲಿಗೆ ತಲುಪಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಗಾಳಿ ಶಂಕರಪ್ಪ, ಜ್ಯೋತಿ ಪ್ರಕಾಶ್, ನರಸಪ್ಪ, ವೀರಶಂಕರ ರೆಡ್ಡಿ, ಗಾದೆಪ್ಪ ಸೇರಿದಂತೆ ಇನ್ನೀತರರು ಇದ್ದರು.