ಬಳ್ಳಾರಿ ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ಕಲ್ಯಾಣ ಕರ್ನಾಟಕ ದಿನಾಚರಣೆ.

0
249

BP NEWS: ಬಳ್ಳಾರಿ: ಸೆಪ್ಟೆಂಬರ್.17: ಹೈದ್ರಾಬಾದ್ ನಿಜಾಮನ ದಬ್ಬಾಳಿಕೆಯ ಆಡಳಿತದ ವಿರುದ್ದ ಜನಾಂದೋಲನವೇ ರೂಪಗೊಂಡಿತು. ಅಂದಿನ ಗೃಹ ಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕಾರ್ಯ ಕ್ಷಮತೆಯ ಮಿಲಿಟರಿ ಕಾರ್ಯಚರಣೆಯಿಂದಾಗಿ ನಿಜಾಮನು ಶರಣಾಗತನಾದ್ದರಿಂದ ಕಲ್ಯಾಣ ಕರ್ನಾಟಕವು ರಜಾಕಾರರ ದೌರ್ಜನ್ಯದಿಂದ ಮುಕ್ತಿ ಪಡೆಯಿತು ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದರು.
ಅವರು ನಗರದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಲುಗಿಹೋದ ಜನರಲ್ಲಿ ಹೋರಾಟದ ಕೆಚ್ಚನ್ನು ತುಂಬಿದ ಸ್ವಾಮಿ ರಮಾನಂದ ತೀರ್ಥ,ಸರ್ದಾರ್ ಶರಣಗೌಡ ,ಅಳವಂಡಿ ಶಿವಮೂರ್ತಿ ಸ್ವಾಮಿ,ರಾಮಚಂದ್ರ ವೀರಪ್ಪ ಮುಂತಾದ ದಿಟ್ಟ ಹೋರಾಟಗಾರರನ್ನು ಸ್ಮರಿಸಬೇಕಾಗಿದೆ.ಕನ್ನಡ ಭಾಷೆಗೆ ಕುತ್ತು ಬಂದಾಗ ಮಠ ಮಾನ್ಯಗಳು ಉರ್ದು ಭಾಷೆಯ ಬದಲಾಗಿ ಈ ನೆಲದ ಕನ್ನಡ ಭಾಷೆಯನ್ನು ಕಲಿಸುವ ಮೂಲಕ ಜೀವಂತಿಕೆಗೆ ಕಾರಣರಾದರು ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಟಿ.ಎಚ್.ಎಂ.ಬಸವರಾಜ, ಶ್ರೀಮತಿ ಕಾಮಾಕ್ಷಮ್ಮ,ವಿ.ಎಂ.ರಾಜಶೇಖರ,ಪಿ.ಗಾದೆಪ್ಪ,ರಮೇಶಗೌಡ ಪಾಟೀಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರಾದ ಅರವಿ ಶರಣಬಸವ, ಆರ್.ಜೆ.ಸುಜಾತ, ಯಂ.ಮಂಜುನಾಥಗೌಡ, ಕೆ.ವಿ.ವೀಣಾ ಪಿ, ಬಸವರಾಜ ಗೌಡ ಹಾಗೂ ಕರೂರು ವಿರುಪಾಕ್ಷಗೌಡ ಮುಖ್ಯೋಪಾಧ್ಯಾಯರಾದ ಎಂ.ಗಿರಿಜ ಪಿ, ಕಟ್ಟೆಮ್ಮ ಪ್ರಾಥಮಿಕ ಶಾಲೆಯ ತಿಪ್ಪೇರುದ್ರಪ್ಪ ಉಪಸ್ಥಿತರಿದ್ದರು.
ಕುಮಾರಿ ಹೇಮ ಮತ್ತು ತಂಡದವರು ಪ್ರಾರ್ಥಿಸಿ ನಾಡಗೀತೆ ಹೇಳಿದರು, ಪ್ರೀತಿ ಸ್ವಾಗತಿಸಿ, ಮಹಾಲಕ್ಷ್ಮಿ ನಿರೂಪಿಸಿದರು, ಸೌಮ್ಯ ವಂದಿಸಿದರು.

LEAVE A REPLY

Please enter your comment!
Please enter your name here