ಯಶಸ್ವಿಯಾಗಿ ನಡೆದ ಬಳ್ಳಾರಿಯ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ (ಬಿಇಡಿ) ಹಮ್ಮಿಕೊಂಡಿದ್ದ “ಭುವನದ ಬೆಳಕು” ಕಾರ್ಯಕ್ರಮ.

0
198

BP NEWS: ಬಳ್ಳಾರಿ: ಸಪ್ಟೆಂಬರ್.13:  ಇಂದು ನಡೆದ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯ (ಬಿಇಡಿ), ಬಳ್ಳಾರಿ ಹಮ್ಮಿಕೊಂಡಿದ್ದ “ಭುವನದ ಬೆಳಕು” ಅರ್ಥಾತ್ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ವಿಶೇಷ ಉಪನ್ಯಾಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಜಯದೇವಯ್ಯ ಎಂ ವಿ ಅವರು ಉದ್ಘಾಟಿಸಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅಂತಾರಾಷ್ಟ್ರೀಯ ಕಲಾವಿದ ಮೆಹಬೂಬ್ ಸಾಬ್ ಕಿಲ್ಲೇದಾರ್ ಅವರು ಮಾತನಾಡುತ್ತ ಶಿಕ್ಷಕರಾದವರಿಗೆ ಬಹುಮುಖ್ಯವಾಗಿ, ತಾಳ್ಮೆ ಮತ್ತು ಹೊಂದಾಣಿಕೆ ಬಹಳ ಮುಖ್ಯ ಜೊತೆಗೆ ಶಾಲಾ ಮಕ್ಕಳಿಗೆ ಬೋಧನೆ ಮಾಡುವ ಸಂದರ್ಭದಲ್ಲಿ ಮಕ್ಕಳ ಮಾನಸಿಕ ಒತ್ತಡವನ್ನು ಅರಿತುಕೊಂಡು ಬೋಧನಾ ತಂತ್ರಗಳನ್ನು ಬಳಸಿಕೊಂಡು ಬೋಧನೆ ಮಾಡಿದಾಗ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಹಾಗೆಯೇ ತಮ್ಮ ಅದ್ಭುತವಾದ ಕಂಠದಿಂದ ಹಾಡುಗಳ ಮೂಲಕ ಜನರ ಮನಸೋರೆಗೊಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ ವಿ ರಾಮಾಂಜನೇಯ (ಅಶ್ವ ರಾಮು) ಅವರು ಮಾತನಾಡುತ್ತಾ ಶಿಕ್ಷಕರಾದಂತವರು ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಮತ್ತು ದಾರಿ ದೀಪವಾಗುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಹೇಳುತ್ತಾ ಅಧ್ಯಕ್ಷತೆ ನುಡಿಗಳನ್ನಾಡಿದರು.


ಕಾಲೇಜಿನ ಪ್ರಾಧ್ಯಾಪಕರಾದ ಆಲಂಬಾಷ ಅವರು ವಿಶೇಷ ಉಪನ್ಯಾಸಕರ ಕಿರು ಪರಿಚಯವನ್ನು ಮಾಡಿದರು.
ಪ್ರಶಿಕ್ಷಣಾರ್ಥಿಗಳು ಪ್ರಾಧ್ಯಾಪಕರಿಗಳಿಗೆ ಸನ್ಮಾನಿಸಿ ಗೌರವಿಸಿದರು.


ನಿರೂಪಣೆ ಪದ್ಮಾವತಿ ಡಿ ಕೆ, ರಾಜೇಶ್ವರಿ ಕೆ ದೆವೇಂದ್ರ, ಪ್ರಾರ್ಥನೆ ರೋಜಾ, ಸ್ವಾಗತ ಸಿಂಧೂಶ್ರೀ, ವಂದನಾರ್ಪಣೆ ಸುನಿಲ್ ಅವರು ನೆರವೇರಿಸಿದರು ನಂತರ ಪ್ರಶಿಕ್ಷಣಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

LEAVE A REPLY

Please enter your comment!
Please enter your name here