BP News Karnataka Super Fast 13-09-2022

0
191

ಮಾನಸಿಕ ಖಿನ್ನತೆಗೊಳಗಾದವರನ್ನು ಗುರುತಿಸಿ ಚಿಕಿತ್ಸೆ ಕೊಡಿಸಿದ್ದಲ್ಲಿ ಗುಣಮುಖ: ಡಾ.ವೀರೇಂದ್ರ ಕುಮಾರ್


ಬಳ್ಳಾರಿ,ಸೆ.13-ವ್ಯಕ್ತಿಯಲ್ಲಿ ಪದೇ ಪದೇ ಬರುವ ತೀವ್ರತರವಾದ ಆಲೋಚನೆಗಳಿಂದ ಮತ್ತು ಜೀವನದಲ್ಲಿ ಬರುವ ಒತ್ತಡಗಳಿಂದ ಮಾನಸಿಕ ಸ್ಥಿತಿಯ ಮೇಲೆ ಒತ್ತಡ ಬೀಳುತ್ತದೆ. ಮಾನಸಿಕ ಖಿನ್ನತೆಗೆ ಒಳಗಾದವರು ಋಣಾತ್ಮಕ ಭಾವನೆಗಳಿಂದ ಕೂಡಿರುತ್ತಾರೆ. ಜೀವನದ ಬಗ್ಗೆ ನಿರಾಸೆ, ಆತಂಕ, ಜಿಗುಪ್ಸೆ ಎಂಬ ಭಾವನೆಗಳಿಂದ ಕೂಡಿರುತ್ತಾರೆ, ಇಂಥಹ ಸಂದರ್ಭದಲ್ಲಿ ಅವರನ್ನು ಆದಷ್ಠು ಬೇಗ ಗುರುತಿಸಿ ಆಪ್ತ ಸಮಾಲೋಚನೆ ಮತ್ತು ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ತಿಳಿಸಿದ್ದಾರೆ.
—–
ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಣಿಗಳ ಮೇಲಿನ ಪ್ರಯೋಗ ಪ್ರಾಮುಖ್ಯತೆ-ಪ್ರೊ.ಸಿದ್ದು ಅಲಗೂರು


ಬಳ್ಳಾರಿ,ಸೆ.13-ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಣಿಗಳ ಮೇಲಿನ ಪ್ರಯೋಗಗಳು ಬಹುಮುಖ್ಯವಾದ ಪಾತ್ರವನ್ನು ವಹಿಸುತ್ತವೆ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿದ್ದು ಪಿ.ಅಲಗೂರು ತಿಳಿಸಿದ್ದಾರೆ.
ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸ್ಥಾಪನೆಗೊಂಡಿರುವ ಎನಿಮಲ್ ಹೌಸ್ ನ್ನು ಉದ್ಘಾಟಿಸಿ ಮಾತನಾಡುತ್ತ, ಜೀವ ವಿಜ್ಞಾನ ವಿಭಾಗಗಳ ಎಲ್ಲ ಬೋಧಕರು, ಸ್ನಾತಕೊತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳಿಗೆ ಸಂಶೋಧನಾ ಚಟುವಟಿಕೆಗಳಿಗೆ ಮತ್ತಷ್ಟು ವೇಗ ದೊರಕಲಿ ಎಂದು ಶುಭ-ಕೋರಿದ್ದಾರೆ.
—–
ಸಿಇಟಿ ವ್ಯಾಜ್ಯ ಸಮಸ್ಯೆ ನಿವಾರಣೆಗೆ ತಜ್ಞರ ಸಮಿತಿ ರಚನೆಗೆ ಎಐಡಿಎಸ್‍ಓ ಒತ್ತಾಯ


ಬಳ್ಳಾರಿ,ಸೆ.13-ಸಿಇಟಿ ಕೌನ್ಸೆಲಿಂಗ್ ವಿಳಂಬವಾಗುತ್ತಿರುವ ಕಾರಣ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರದಲ್ಲಿದೆ. ಈಗಾಗಲೇ ಖಾಸಗಿ ವಿಶ್ವವಿದ್ಯಾಲಯಗಳು ಶೇ. 60 ರಷ್ಟು ಸೀಟುಗಳನ್ನು ಭರ್ತಿ ಮಾಡಿಕೊಂಡು, ತಮ್ಮ ಲಾಭಗಳಿಸುವ ಹುನ್ನಾರ ಮುಂದುವರೆಸಿಕೊಂಡು ಹೋಗುತ್ತಿದೆ. ಆದರೆ ಸಿಇಟಿ ವಿದ್ಯಾರ್ಥಿಗಳ ಕೌನ್ಸೆಲಿಂಗ್ ಪ್ರಾರಂಭವಾಗದೇ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಆತಂತ್ರದಲ್ಲಿದೆ. ಕೂಡಲೇ ರಾಜ್ಯ ಸರ್ಕಾರ ಸಮಸ್ಯೆ ನಿವಾರಣಗೆ ತಜ್ಞರ ಸಮಿತಿ ರಚಿಸಬೇಕೆಂದು ಎಐಡಿಎಸ್‍ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಒತ್ತಾಯಿಸಿದ್ದಾರೆ.
—–
ಅರಣ್ಯ ಇಲಾಖೆಯಿಂದ ಹುತಾತ್ಮರ ದಿನಾಚರಣೆ


ಬಳ್ಳಾರಿ,ಸೆ.13-ನಗರದ ರೇಡಿಯೋ ಪಾರ್ಕ್‍ನಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಡೆಯಿತು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಸೈದುಲು ಅಡಾವತ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಹಿಂದೂರಾವ್ ಸೂರ್ಯವಂಶಿ, ವಿಜಯನಗರ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್, ಬಳ್ಳಾರಿ ಉಪ-ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಂಟೆಪ್ಪ, ವಲಯ ಅರಣ್ಯಾಧಿಕಾರಿ ರಾಘವೇಂದ್ರಯ್ಯ ಆರ್.ಹೆಚ್., ಇದ್ದರು.
——-
ಯಾವ ಕ್ಷಣದಲ್ಲಾದರೂ ಕುಸಿದು ಬೀಳುವ ಹಂತದಲ್ಲಿರುವ ಭೀಮನ ಮಹಾದ್ವಾರ


ಹೊಸಪೇಟೆ,ಸೆ.13-ವಿಶ್ವ ವಿಖ್ಯಾತ ಹಂಪಿಯ ಭೀಮನ ದ್ವಾರಬಾಗಿಲು ಯಾವ ಸಮಯದಲ್ಲಾದರೂ ಕುಸಿಯುವ ಹಂತಕ್ಕೆ ತಲುಪಿದೆ.
ಕಮಲಾಪುರ ಬಳಿ ಈ ಭೀಮನ ಮಹಾದ್ವಾರವಿದೆ. ಭಾರತೀಯ ಪುರಾತತ್ವ ಇಲಾಖೆ ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದಿಂದ ಸುರಕ್ಷಿತ ಪ್ರಾಚೀನ ಸ್ಮಾರಕ ಎಂದು ಘೋಷಿಸಿಕೊಂಡ ಭೀಮನ ದ್ವಾರದ ಜೋಡಿಸಿದಂತಿರುವ ಕಲ್ಲುಗಳು ಯಾವುದೇ ಸಮಯದಲ್ಲಿ ಬೀಳುವಂತಿವೆ. ಪ್ರವಾಸಿಗರು ಇತ್ತ ಸುಳಿಯದಂತೆ ಇಲ್ಲಿ ಕಾವಲುಗಾರರನ್ನು ನೇಮಿಸಬೇಕೆಂದು ಇತಿಹಾಸ ಪ್ರಿಯರು ಆಗ್ರಹಿಸಿದ್ದಾರೆ.
——

 

 

LEAVE A REPLY

Please enter your comment!
Please enter your name here