BP NEWS: ರಾಯಚೂರು: ಸಪ್ಟೆಂಬರ್.12: ಹೆಣ್ಣು ಜಗದ ಕಣ್ಣು” ಸಾಹಿತ್ಯ ವೇದಿಕೆ ರಾಯಚೂರು ಹಾಗೂ “ಕಪ್ಪತ್ತಗಿರಿ “ಸಾಹಿತ್ಯ ವೇದಿಕೆ ಗದಗ ಇವರ ಸಹಯೋಗದಲ್ಲಿ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಮುದಗಲ್ ಪಟ್ಟಣದ ನೇಹಾ ಫಂಕ್ಷನ್ ಹಾಲ್ ನಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ತಿಮ್ಮಾಪುರ್ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಈ ಸಂದರ್ಭದಲ್ಲಿ
ಪಿ ಎಸ್ ಐ ಪ್ರಕಾಶ್ ರೆಡ್ಡಿ ಡಂಬಳ. ಮಲ್ಲಿಕಾರ್ಜುನ್ ಗೌಡರ್ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷರು. ಅಶೋಕ್ ಗೌಡ ಪಟೇಲ್ ಪುರಸಭೆ ಮಾಜಿ ಅಧ್ಯಕ್ಷರು.
ರಮೇಶ್ ಬಾಬು ಯಾಳಗಿ ಸಾಹಿತಿಗಳು ಹಾಗೂ ಉಪನ್ಯಾಸಕರು ಮಾನ್ವಿ.
ಪಂಚಯ್ಯ ಹಿರೇಮಠ. ಶಿಕ್ಷಕರು ಹಾಗೂ ಸಾಹಿತಿಗಳು ರೋಣ.
ರಮೇಶ್ ನಾಯ್ಕ್. ( ಸಂಸ್ಥಾಪಕ ಅಧ್ಯಕ್ಷರು ಹೆಣ್ಣು ಜಗದ ಕಣ್ಣು ಸಾಹಿತ್ಯ ವೇದಿಕೆ ರಾಯಚೂರು)
ಚಂದ್ರಕಲಾ( ಸಂಸ್ಥಾಪಕ ಅಧ್ಯಕ್ಷರು ಕಪೋತಗಿರಿ ಸಾಹಿತ್ಯ ವೇದಿಕೆ ಗದಗ)
ಪ್ರಭುಲಿಂಗ ಗದ್ದಿ. ಬಸಪ್ಪ ಹಂದ್ರಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣ ಹಾಗೂ ಸಾವಿತ್ರಿಬಾಯಿಪುಲೆ ಶಿಕ್ಷಕ ರತ್ನ ಪ್ರಶಸ್ತಿಗೆ ಸುಮಾರು 50 ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ. ಸರ್ವಪಲ್ಲಿ ರಾಧಾಕೃಷ್ಣ ಪ್ರಶಸ್ತಿಗೆ ಭಾಜನರಾದ ಶ್ರೀ ರಾಯಪ್ಪ ಬಳಗಾನೂರ ಇವರು ಲಿಂಗಸುಗೂರ ತಾಲ್ಲೂಕಿನ ಹಟ್ಟಿಚಿನ್ನದಗಣಿ ಶ್ರೀ ಶರಣಬಸವೇಶ್ವರ ಬಾಲಕಿಯರ ಶಾಲೆಯ ದೈಹಿಕ ಶಿಕ್ಷಕರಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀ ರಾಯಪ್ಪ ಶಿಕ್ಷಕರಿಗೆ ಪ್ರಶಸ್ತಿ ಲಭಿಸಿದ್ದಕ್ಕೆ ಅವರ ಸ್ನೇಹಿತರು. ಹಿತೈಷಿಗಳು. ಶಾಲಾ ಆಡಳಿತ ಮಂಡಳಿ. ಹಾಗೂ ವಿದ್ಯಾರ್ಥಿಗಳು ಶುಭಹಾರೈಸಿದರು.