BP News Karnataka Super Fast 06-09-2022

0
146

ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಾರುತಿ ಪ್ರಸಾದ್ ಎಸ್., ನೇಮಕ


BP News ಬಳ್ಳಾರಿ,ಸೆ.6-ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಮಾರುತಿ ಪ್ರಸಾದ್ ಅವರು ಈ ಹಿಂದಿನ ಅಧ್ಯಕ್ಷರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೇ ಮುಂದುವರಿಸುವುದಾಗಿ ಹೇಳಿದ್ದಾರೆ.
ಇಂದು ಅವರನ್ನು ವಿವಿಧ ಸಂಘಟನೆಗಳು, ಮುಖಂಡರು ಮತ್ತು ಹಿತೈಷಿಗಳು ಅವರನ್ನು ಆತ್ಮೀಯವಾಗಿ ಅಭಿನಂದಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಎಲ್ಲರಿಗೂ ಅವಕಾಶ ನೀಡುತ್ತದೆ ಎನ್ನುವುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಇದುವರೆಗೆ ನಮ್ಮ ಸಮುದಾಯಕ್ಕೆ ದೊಡ್ಡ ಹುದ್ದೆ ಲಭಿಸಿರಲಿಲ್ಲ. ನಾಯಕರಾದ ಬಿ.ಶ್ರೀರಾಮುಲು, ಜಿ.ಜನಾರ್ಧನರೆಡ್ಡಿ ಮತ್ತು ಜಿ.ಸೋಮಶೇಖರ್ ರೆಡ್ಡಿ ಸೇರಿದಂತೆ ಅನೇಕ ನಾಯಕರು ನಮ್ಮ ಸಮಾಜಕ್ಕೆ ಉನ್ನತ ಸ್ಥಾನ ನೀಡಿದ್ದಕ್ಕೆ ಅಭಿನಂದಿಸುತ್ತೇನೆ ಎಂದರು.
—–
ಬ್ರ್ರಾಹ್ಮಣ ಒಕ್ಕೂಟದ ಅಧ್ಯಕ್ಷರಾಗಿ ಆರ್.ಪ್ರಕಾಶ್ ರಾವ್


BP News ಬಳ್ಳಾರಿ,ಸೆ.6-ಬ್ರಾಹ್ಮಣ ಒಕ್ಕೂಟದ ಅಧ್ಯಕ್ಷರಾಗಿ ಆರ್.ಪ್ರಕಾಶ್ ರಾವ್ ಅವರು ಆಯ್ಕೆಯಾಗಿದ್ದಾರೆ.
ಸತ್ಯನಾರಾಯಣ ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷರಾಗಿ ಡಾ.ಡಿ.ಶ್ರೀನಾಥ್, ಕಾರ್ಯದರ್ಶಿಗಳಾಗಿ ಬಿಕೆಬಿಎನ್ ಮೂರ್ತಿ, ಜಂಟಿ ಕಾರ್ಯದರ್ಶಿಯಾಗಿ ಬಳ್ಳಾರಿ ಮಹಾನಗರ ಪಾಲಿಕೆಯ ಮಾಜಿ ನಾಮನಿರ್ದೇಶಿತ ಸದಸ್ಯ ನೇಮಕಲ್ ರಾವ್ ಅವರು ಆಯ್ಕೆಯಾಗಿದ್ದಾರೆ.
ಅಧ್ಯಕ್ಷರು, ಉಪಾಧ್ಯಕ್ಷರು, ಸಹಕಾರ್ಯದರ್ಶಿಗಳು, ಖಜಾಂಚಿ ಹಾಗೂ ಎಲ್ಲ ಮುಖಂಡರುಗಳು, ಸದಸ್ಯರುಗಳು ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಬಗ್ಗೆ ಒಮ್ಮತದಿಂದ ತಿಳಿಸಿದರು. ಇದಕ್ಕನುಗುಣವಾಗಿ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
——
ಬಳ್ಳಾರಿಯ ಕೆ.ಆರ್.ಐ.ಡಿ.ಎಲ್. ಇಲಾಖೆಯಲ್ಲಿ ರೂ. 1 ಕೋಟಿ ಕಳಪೆ ಕಾಮಗಾರಿಗಳನ್ನು ಬಯಲಿಗೆಳೆದ ವಕೀಲ ಡಿ.ಮಲ್ಲಿಕಾರ್ಜುನ


BP News ಬಳ್ಳಾರಿ,ಸೆ.6-ಇಲ್ಲಿನ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ ಬಳ್ಳಾರಿ ವಿಭಾಗದ ಇಲಾಖೆಯಲ್ಲಿ ಸುಮಾರು 1 ಕೋಟಿ ರೂ.ಕಾಮಗಾರಿಗಳು ನಡೆದಿದ್ದರ ಬಗ್ಗೆ ಭ್ರಷ್ಟಾಚಾರ ನಡೆದಿರುವ ಪ್ರಕರಣವನ್ನು ವಕೀಲರಾದ ಡಿ.ಮಲ್ಲಿಕಾರ್ಜುನ ಅವರು ಬಯಲಿಗೆಳೆದಿದ್ದಾರೆ.
ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತದಿಂದ ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ನಿರ್ಮಾಣದ ಹೆಸರಿನಲ್ಲಿ ರೂ.1 ಕೋಟಿ ಅಕ್ರಮ ಕಾಮಗಾರಿಗಳನ್ನು ನಡೆಸಿದ ಕೆ.ಆರ್.ಐ.ಡಿ.ಎಲ್. ಅಧಿಕಾರಿಗಳ ಭ್ರಷ್ಟಾಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವ ವಕೀಲರು ಇದೀಗ ಸಾರ್ವಜನಿಕರ ಹಣ ಈ ರೀತಿ ವ್ಯರ್ಥವಾಗದಿರುವಂತೆ ಹೋರಾಟದ ರೂಪುರೇಷೆ ಸಿದ್ಧಪಡಿಸಲು ಅಣಿಯಾಗಿದ್ದಾರೆ.
——-
ಹಂಪಿಯ ಪ್ರತಿಮಾಶಾಸ್ತ್ರ ಬಹು ಅಪರೂಪದ್ದು – ಡಾ. ಕೆ. ರವೀಂದ್ರನಾಥ


BP News ಬಳ್ಳಾರಿ,ಸೆ.6-ಹಂಪಿಯು ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೇ ಜಾಗತೀಕವಾಗಿಯೂ ಪ್ರಸಿದ್ಧವಾಗಿದೆ. ಹಂಪಿಯ ಪ್ರತಿಮಾಶಾಸ್ತ್ರ ಬಹು ಅಪರೂಪದ್ದು, ಹಂಪಿಯ ಶಿಲ್ಪಗಳಲ್ಲಿ ಉಬ್ಬುಶಿಲ್ಪಗಳು, ದುಂಡು ಶಿಲ್ಪಗಳು ಮತ್ತು ತಗ್ಗುಶಿಲ್ಪಗಳಂತಹ ವೈವಿಧ್ಯಮಯ ಶಿಲ್ಪಗಳನ್ನು ಕಾಣಬಹುದು ಎಂದು ಕನ್ನಡ ವಿಶ್ವವಿದ್ಯಾಲದ ಲಲಿತ ಕಲೆಗಳ ನಿಕಾಯದ ಡೀನರಾದ ಡಾ. ರವೀಂದ್ರನಾಥ ಅಭಿಪ್ರಾಯಪಟ್ಟರು.
ಹಂಪಿ ವಿಶ್ವವಿದ್ಯಾಲಯದಲ್ಲಿ ವಿಜಯನಗರ ಕಾಲದ ದೇವಾಲಯಗಳ ವಾಸ್ತುಶಿಲ್ಪ ಮತ್ತು ಪ್ರತಿಮಾಶಾಸ್ತ್ರ ಎಂಬ ಎರಡು ದಿನಗಳ ಕಾರ್ಯಾಗಾರವನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದರು.
——
ರಾಜ್ಯಮಟ್ಟದ ನಿರುದ್ಯೋಗಿ ಯುವಜನ ಸಮಾವೇಶದ ಭಿತ್ತಿಪತ್ರ ಬಿಡುಗಡೆ

BP News ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಮಾರುತಿ ಪ್ರಸಾದ್ ಎಸ್., ನೇಮಕ
ಬಳ್ಳಾರಿ,ಸೆ.6-ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೂತನವಾಗಿ ನೇಮಕಗೊಂಡಿರುವ ಮಾರುತಿ ಪ್ರಸಾದ್ ಅವರು ಈ ಹಿಂದಿನ ಅಧ್ಯಕ್ಷರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನೇ ಮುಂದುವರಿಸುವುದಾಗಿ ಹೇಳಿದ್ದಾರೆ.
ಇಂದು ಅವರನ್ನು ವಿವಿಧ ಸಂಘಟನೆಗಳು, ಮುಖಂಡರು ಮತ್ತು ಹಿತೈಷಿಗಳು ಅವರನ್ನು ಆತ್ಮೀಯವಾಗಿ ಅಭಿನಂದಿಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಭಾರತೀಯ ಜನತಾ ಪಾರ್ಟಿ ಎಲ್ಲರಿಗೂ ಅವಕಾಶ ನೀಡುತ್ತದೆ ಎನ್ನುವುದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಇದುವರೆಗೆ ನಮ್ಮ ಸಮುದಾಯಕ್ಕೆ ದೊಡ್ಡ ಹುದ್ದೆ ಲಭಿಸಿರಲಿಲ್ಲ. ನಾಯಕರಾದ ಬಿ.ಶ್ರೀರಾಮುಲು, ಜಿ.ಜನಾರ್ಧನರೆಡ್ಡಿ ಮತ್ತು ಜಿ.ಸೋಮಶೇಖರ್ ರೆಡ್ಡಿ ಸೇರಿದಂತೆ ಅನೇಕ ನಾಯಕರು ನಮ್ಮ ಸಮಾಜಕ್ಕೆ ಉನ್ನತ ಸ್ಥಾನ ನೀಡಿದ್ದಕ್ಕೆ ಅಭಿನಂದಿಸುತ್ತೇನೆ ಎಂದರು.
—–

ಭಾರತ ರತ್ನ ಸರ್ವೇಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ


BP News ಬಳ್ಳಾರಿ,ಸೆ.6-ಶಿಕ್ಷಕರ ದಿನಾಚರಣೆಯಾಗಿ ಭಾರತ ರತ್ನ ಡಾ. ಸರ್ವೆಪಲ್ಲಿ ರಾಧಕೃಷ್ಣನ್ ರವರ ಜನ್ಮದಿನಾಚರಣೆ ಯನ್ನು ಗುರು ತಿಪ್ಪೇರುದ್ರ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಉಪಾಧ್ಯಾಯರು ವಿದ್ಯಾರ್ಥಿಗಳ ಭವಿಷ್ಯತ್ತನ್ನು ರೂಪಿಸುವ ಶಿಲ್ಪಿಗಳು. ಶಿಕ್ಷಕರು ಶಿಕ್ಷಣದ ಜೊತೆಗೆ ಸರ್ವತೋಮುಖ ಅಭಿವೃದ್ದಿಯ ಬೆಳಗಿಸುವ ದೀಪಗಳು ಎಂದು ಹಿರಿಯ ಉಪನ್ಯಾಸಕರಾದ ಡಾ. ಸುರೇಂದ್ರ ಬಾಬು ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ತಿಳಿಸಿದರು.
——

 

 

LEAVE A REPLY

Please enter your comment!
Please enter your name here