ವಿದ್ಯುತ್ ಸ್ಪರ್ಶ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾರಥಿ ಪಂಪಾಪತಿ ದಂಪತಿ ಸಾವು

0
131

BP NEWS: ಬಳ್ಳಾರಿ: ಆಗಸ್ಟ್.28:  ಬಳ್ಳಾರಿ ಜಿಲ್ಲೆಯ ಬಯಲಾಟ ಕಲಾವಿದರಾಗಿದ್ದ ಸಾರಥಿ ಪಂಪಾಪತಿ (70) ಮತ್ತು ಅವರ ಪತ್ನಿ ದ್ಯಾವಮ್ಮ (65) ವಿದ್ಯುತ್ ಸ್ಪರ್ಶದಿಂದ ಭಾನುವಾರ ಸಂಜೆ ಬಳ್ಳಾರಿಯ ಬಂಡಿಹಟ್ಟಿಯಲ್ಲಿ (5.00 ಗಂ) ಸಾವನ್ನಪ್ಪಿದ್ದಾರೆ.
ಮಳೆ ಬಂದಿದ್ದರಿಂದ ಮನೆಯ ಮೇಲಿನ ಮಾಳಿಗೆ ಮೇಲೆ ನೀರು ನಿಂತ ಕಾರಣ, ನೀರು ಹರಿಸಲು ಹೋದಾಗ ಸರ್ವೀಸ್ ವೈರೊಂದು ಮಾಳಿಗೆಗೆ ಸ್ಪರ್ಶವಾಗಿತ್ತು. ಅದೇ ವೇಳೆ ಬರಿಗಾಲಲ್ಲೇ ಗಂಡ ಹೆಂಡತಿ ಇಬ್ಬರೂ ಹೋಗಿದ್ದಾರೆ. ನೆಲವು ಅರ್ತಿಂಗ್ ಆಗುಲು ವಿದ್ಯತ್ ಹರಿದು ಅಸ್ವಸ್ಥರಾಗಿದ್ದವರನ್ನಾ ಕೂಡಲೇ ಟ್ರೋಮೋ ಕೇರ್ ಸೆಂಟರ್ ಗೆ ಸಾಗಿಸಿದ್ದರು ಚಿಕಿತ್ಸೆ ಫಲಕಾರಿಯಾಗಿದೆ ಸಾವನಪ್ಪಿದ್ದಾರೆ.
ಸಾರಥಿ ಪಂಪಾಪತಿಯವರು 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿಯನ್ನು 2005 ರಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು.

LEAVE A REPLY

Please enter your comment!
Please enter your name here