ಭರತನಾಟ್ಯ ಕಲಾವಿದೆ ಅವನಿ ಗಂಗಾವತಿ ಅವರಿಗೆ “ಕೊಪ್ಪಳ ಐಸಿರಿ” ಪ್ರಶಸ್ತಿ.

0
393

BP NEWS: ಕೊಪ್ಪಳ: ಆಗಸ್ಟ್.27:  ದಿನಾಂಕ .26.8.2022: ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆದ ಕೊಪ್ಪಳ ಜಿಲ್ಲಾ ಬೆಳ್ಳಿ ಹಬ್ಬ ಸಂಭ್ರಮಾಚರಣೆ ಯೊಂದಿಗೆ ಕೊಪ್ಪಳ ಜಿಲ್ಲಾ ನಾಗರಿಕ ವೇದಿಕೆಯವರು ನಡೆಸಿಕೊಡುವ 15ನೇ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ, ಭರತನಾಟ್ಯ ಕಲಾವಿದೆ ಕುಮಾರಿ ಅವನಿ ಗಂಗಾವತಿ ಅವರಿಗೆ *ಕೊಪ್ಪಳ ಐಸಿರಿ* ಪ್ರಶಸ್ತಿಯನ್ನು ನೀಡಿ ಗೌರವಿಸಿ, ಸನ್ಮಾನಿಸಲಾಯಿತು. ಅವನಿ ಗಂಗಾವತಿ ಶ್ರೀಮತಿ ಶಾರದಾ ಆಚಾರ್ಯ ಅವರ ಹತ್ತಿರ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾಳೆ.

ಉತ್ಸವದ ಉದ್ಘಾಟನೆಯನ್ನು ರಾಘವೇಂದ್ರ ಹಿಟ್ನಾಳ್ ಶಾಸಕರು, ಕೊಪ್ಪಳ ಇವರು ನೆರವೇರಿಸಿ ಕೊಟ್ಟರು. 26. 8. 2022 ರಿಂದ 28. 8. 2022 ರವರೆಗೆ ನಡೆಯುವ ಮೂರು ದಿನದ ಈ ಉತ್ಸವದಲ್ಲಿ ಐದನೇ ಉರ್ದು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ,
15ನೇ ಮಕ್ಕಳ ಸಾಂಸ್ಕೃತಿಕ ಸಮ್ಮೇಳನ,
13ನೇ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನ ನಡೆಯಲಿದ್ದು,

ಪ್ರತಿದಿನ ಸಂಜೆ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು ಎಂದು ಉತ್ಸವದ ಸಂಚಾಲಕರಾದ ಮಹೇಶ್ ಬಾಬು ಸುರ್ವೆ ಅವರು ಬಿಪಿ ನ್ಯೂಸ್ಗೆ ತಿಳಿಸಿದರು.

LEAVE A REPLY

Please enter your comment!
Please enter your name here