ಸಚಿವ ಬಿ.ಶ್ರೀರಾಮುಲು ನೇತೃತ್ವದಲ್ಲಿ 140 ಅಡಿ ಎತ್ತರದ ಗಡಿಯಾರ ಸ್ಥಂಭ ನಿರ್ಮಾಣಕ್ಕೆ ಚರ್ಚೆ
BP News ಬಳ್ಳಾರಿ,ಆ.23-ಬಳ್ಳಾರಿ ನಗರದ ಮಧ್ಯಭಾಗವಾದ ಗಡಗಿ ಚೆನ್ನಪ್ಪ ವೃತ್ತದಲ್ಲಿ 07 ಕೋಟಿ ರೂ.ವೆಚ್ಚದಲ್ಲಿ 140 ಅಡಿ ಎತ್ತರದ ನೂತನ ಗಡಿಯಾರ ಸ್ಥಂಭ(ಕ್ಲಾಕ್ ಟವರ್) ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು.
ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷರಾದ ಪಿ.ಪಾಲಣ್ಣ, ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ, ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಎಡಿಸಿ ಮಂಜುನಾಥ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
—-
ಹಲಕುಂದಿ ಗ್ರಾಮ ಪಂಚಾಯಿತಿ ಪರಿಸರದಲ್ಲಿ ಮಾಲಿನ್ಯ
BP News ಬಳ್ಳಾರಿ,ಆ.23-ತಾಲೂಕಿನ ಹಲಕುಂದಿ ಗ್ರಾಮದಲ್ಲಿ ಹಲವಾರು ಕಾರ್ಖಾನೆಗಳಿಂದ ಹೊರ ಹೊಮ್ಮುವ ರಾಸಾಯನಿಕ ಕಪ್ಪು ಹೊಗೆಯಿಂದ ಮಾಲಿನ್ಯ ನಶಿಸುತ್ತಿದೆ ಎಂದು ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸರ ಇಲಾಖೆ, ಸರ್ಕಾರ ಮತ್ತು ಜಿಲ್ಲಾಡಳಿತ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜನ-ಜಾನುವಾರುಗಳ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ವೈಜ್ಞಾನಿಕ ವರದಿ ಸಿದ್ಧಪಡಿಸಿ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
—-
ಬಳ್ಳಾರಿಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಮದ ಗೋವಾದೊಂದಿಗೆ ಒಡಂಬಡಿಕೆ
BP News ಬಳ್ಳಾರಿ,ಆ.23-ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯು ಗೋವಾ ರಾಜ್ಯದ ಚೇಂಬರ್ ಆಫ್ ಕಾಮರ್ಸ್ ಜೊತೆಗೆ ವ್ಯಾಪಾರ-ವ್ಯವಹಾರದ ಒಡಂಬಡಿಕೆ ಮಾಡಿಕೊಂಡಿದೆ.
ಸಂಸ್ಥೆಯ ಸಭಾಂಗಣದಲ್ಲಿ ನಡೆದ ಜಂಟಿ ಸಭೆಯಲ್ಲಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ, ಸಂಸ್ಥೆಯ ಗೌರವ ಕಾರ್ಯದರ್ಶಿ ಯಶವಂತರಾಜ್ ನಾಗಿರೆಡ್ಡಿ, ಅಧ್ಯಕ್ಷರಾದ ಸಿ.ಶ್ರೀನಿವಾಸ್ ರಾವ್, ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಎಲ್.ರಮೇಶ ಗೋಪಾಲ್, ಗೋವಾ ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರದ ಅಧ್ಯಕ್ಷ ರಾಲ್ಫ್ ಡಿಸೋಜ ಇನ್ನಿತರರು ಸಭೆಯಲ್ಲಿದ್ದರು.
——
ಸಿದ್ಧಾಪುರ ಗ್ರಾಮದ ಬೆಟ್ಟದಲ್ಲಿ ಕಾಡು ಮಲ್ಲಿಗೆಯ ಕಂಪಿನೊಂದಿಗೆ ನಗುತ್ತಿರುವ ಶ್ರೀ ಗವಿಸಿದ್ಧೇಶ್ವರ
BP News ಬಳ್ಳಾರಿ,ಆ.23-ಕರ್ನಾಟಕ ಆಂಧ್ರಪ್ರದೇಶದ ಸಿದ್ಧಾಪುರ ಗ್ರಾಮದ ವ್ಯಾಪ್ತಿಯಲ್ಲಿ ಪುರಾಣ ಕಾಲದಿಂದಲೂ ನೆಲೆಗೊಂಡಿರುವ ಶ್ರೀ ಗವಿಸಿದ್ಧೇಶ್ವರ ಸ್ವಾಮಿ ಕಾಡು ಮಲ್ಲಿಗೆಯ ಘಮ ಘಮ ಪರಿಮಳದ ನಡುವೆ ವಿರಾಜಮಾನನಾಗಿದ್ದು ಭಕ್ತರನ್ನು ಕೈಬೀಸಿ ಕರೆಯುತ್ತಿದ್ದಾನೆ.
ಶ್ರಾವಣ ಮಾಸದ ನಿಮಿತ್ತ ನಗರ, ಪಟ್ಟಣ ಹಾಗೂ ಹಲವಾರು ಹಳ್ಳಿಗಳಿಂದ ಮಕ್ಕಳು, ಮಹಿಳೆಯರು ಒಳಗೊಂಡಂತೆ ಸಾವಿರಾರು ಭಕ್ತರು ಹಲವಾರು ತಂಡಗಳಾಗಿ ಪಾದಯಾತ್ರೆ ನಡೆಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಕವಳೆ, ಕಾರೆ, ಕಾಡು ತುಳಸಿ, ಮೊಸರು ಕಡ್ಡಿ ಗಿಡ ಸೇರಿ ಹಲವು ಔಷಧೀಯ ಜನ್ಯ ಸಸ್ಯಗಳ ನಡುವೆ ಶಿವ ಪರಿವಾರ ದರ್ಶಿಸಿದ ಭಕ್ತರು ಧನ್ಯತೆ ಹೊಂದಿದರು.
——