BP NEWS: ಬಳ್ಳಾರಿ: ಆಗಸ್ಟ್.16: ಸಂಡೂರು ತಾಲೂಕು ಬಳ್ಳಾರಿ ಜಿಲ್ಲೆಯಲ್ಲಿ ಬರುವ ಉಬ್ಬಲಗಂಡಿ ಗ್ರಾಮದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ” 75ನೇ ಸ್ವತಂತ್ರ ದಿನೋತ್ಸವದ ಅಮೃತ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಜೊತೆಗೆ ಮೆಟ್ರಿಕಿ ವಲಯಮಟ್ಟದ ಕ್ರೀಡಾಕೂಟದಲ್ಲಿ ರನ್ನಿಂಗ್ ರೇಸ್ ಮನೋಜ 400 ಮೀಟರ್,
ತೇಜ 6 ಮೀಟರ್ ಗುಂಡು ಎಸೆತ,
ರಾಜೇಶ್ ತಟ್ಟೆ ಎಸೆತ 11 ಮೀಟರ್,
ಲಾಂಗ್ ಜಂಪ್ ವಿನೋದ್ ಕುಮಾರ್, ಅವರೆಲ್ಲ ವಿಜೇತರಾಗಿದ್ದು ಆಟಗಳಲ್ಲಿ ಗೆದ್ದಂತಹ ಎಲ್ಲಾ ಮಕ್ಕಳಿಗೆ ಬಹುಮಾನಗಳನ್ನು ವಿತರಿಸುಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮನ್ನು ನಡೆಸುಕೊಡುವಲ್ಲಿ ಭಾಗಿಯಾದ ಶಾಲೆಯ ಮುಖ್ಯ ಶಿಕ್ಷಕರಾದ ಮಧು ಸರ್, ಹಾಗೂ ನೂರುಲ್ ಸರ್, ಕೊಟ್ರೇಶ್ ಸರ್, ವಾಣಿ ಮೇಡಂ. ಶಾಲೆಯ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ಗಾದಿಲಿಂಗಪ್ಪ ಅವರುಗಳು ಉಪಸ್ಥಿತಿಯಲ್ಲಿದ್ದರು. ನಮ್ಮ ಕನ್ನಡ ಶಾಲೆ ನಮಗೆ ಹೆಮ್ಮೆ ಎನ್ನುವಂತೆ ಶಾಲಾ ಮಕ್ಕಳಿಗೆ ಪ್ರೋತ್ಸಾಹಿಸುತ್ತಾ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ ಬಣ)ಯ ಗ್ರಾಮ ಘಟಕದ ಅಧ್ಯಕ್ಷರಾದ ಬಿ.ಧನಂಜಯ್ಯ ಮತ್ತು ಉಪಾಧ್ಯಕ್ಷರಾದ ಕೆ.ಕೆ.ವೀರೇಶ್ ಹಾಗೂ ಶಿಕ್ಷಣ ಪ್ರೇಮಿ ಮಹೇಶ್, ನಾಗರಾಜ, ಮೂರ್ತಿ, ಮತ್ತು ಊರಿನ ಎಲ್ಲಾ ಬಾಂಧವರು ಸಡಗರದಿಂದ ಕಾರ್ಯಕ್ರಮ ನೋಡುತ್ತಾ, ಚಪ್ಪಾಳೆ ಹಾಕುವುದರ ಮೂಲಕ ಮಕ್ಕಳ ಖುಷಿಯನ್ನು ದುಪ್ಪಟ್ಟು ಮಾಡಿದರು.