ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಉಚಿತ ತರಬೇತಿ ನೀಡುವ ಸ್ಪೂರ್ತಿ-2022ಗೆ ಚಾಲನೆ

0
97

BP NEWS: ಹೊಸಪೇಟೆ(ವಿಜಯನಗರ): ಆಗಸ್ಟ್,15: ವಿದ್ಯಾವಂತ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಉದ್ಯೋಗವಕಾಶಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ವಿಜಯನಗರ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದ್ದು, ಸ್ಪೂರ್ತಿ ಎನ್ನುವ ವಿಶೇಷ ಯೋಜನೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ನೀಡಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಣಿಗೊಳಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಹೇಳಿದರು.
ವಿಜಯನಗರ ಜಿಲ್ಲಾಡಳಿತ ವತಿಯಿಂದ “ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದ ಅಡಿಯಲ್ಲಿ ಹೊಸಪೇಟೆ ತಾಲೂಕಿನಲ್ಲಿರುವ ವಿದ್ಯಾವಂತ ಯುವಕರಿಗೆ ಉದ್ಯೋಗಾವಕಾಶಕ್ಕಾಗಿ” ಎಂಬ ಘೋಷಣೆಯ “ಸ್ಪೂರ್ತಿ-2022”ಕ್ಕೆ ಹೊಸಪೇಟೆ ನಗರದ ಶಂಕರ್ ಆನಂದ್‍ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಈ ಸ್ಪೂರ್ತಿ ಯೋಜನೆ ಅಡಿ ಟಿಇಟಿ, ಎಫ್‍ಡಿಎ, ಎಸ್‍ಡಿಎ, ಪಿಎಸ್‍ಐ, ಪಿಸಿ, ಬ್ಯಾಂಕಿಂಗ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವಭಾವಿ ಸಿದ್ಧತೆಗೆ ಉಚಿತ ತರಬೇತಿ ನೀಡಲಾಗುತ್ತದೆ ಎಂದರು.
ಈ ಸ್ಪರ್ಧಾತ್ಮಕ ಯುಗದಲ್ಲಿ ಸರಕಾರಿ, ಖಾಸಾಗಿ ಕಂಪನಿ ಹಾಗೂ ಸಂಸ್ಥೆಗಳಲ್ಲಿ ಉದ್ಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಬುನಾದಿ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹೇಗೆ ಇರುತ್ತವೆ;ಅದಕ್ಕೆ ನಾವು ಹೇಗೆ ತಯಾರಾಗಬೇಕು ಎಂದು ತಿಳಿಸಿಕೊಡುವುದೇ ತರಬೇತಿಯ ಮುಖ್ಯ ಉದ್ದೇಶ ಎಂದು ವಿವರಿಸಿದ ಅವರು, ಗುಣಾತ್ಮಕವಾಗಿ ಶಿಕ್ಷಣದಲ್ಲಿ ಕೆಲವು ಬದಲಾವಣೆಗಳನ್ನು ತರಲು ಈ ಉಚಿತತರಬೇತಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.


ನಾವು ಓದುವ ಸಂದರ್ಭದಲ್ಲಿ ಇಷ್ಟೇಲ್ಲ ಸೌಲಭ್ಯಗಳು ಇರಲಿಲ್ಲ, ನಾವು ಏನಾದರೂ ಮಾಹಿತಿಯನ್ನು ಪಡೆಯಲು ಕಂಪ್ಯೂಟರ್ ಸೆಂಟರ್‍ಗೆ ಹೋಗಿ ಒಂದು ಗಂಟೆಗೆ 10-20ರೂಪಾಯಿ ನೀಡಿ ಪ್ರೀಂಟೌಟ್‍ಗಳನ್ನು ತೆಗೆದುಕೊಂಡು ಬರಬೇಕಾಗಿತ್ತು. ಆದರೆ ಈಗಿನ ಸಂದರ್ಭದಲ್ಲಿ ಪ್ರತಿಯೊಂದು ಮಾಹಿತಿಯೂ ಗೂಗಲ್‍ನಲ್ಲಿ ಕ್ಷಣಾರ್ಧದಲ್ಲಿ ದೊರೆಯುತ್ತದೆ. ಅದ್ದರಿಂದ ವಿದ್ಯಾರ್ಥಿಗಳು ಈ ತಂತ್ರಜ್ಞಾನಯುಗದಲ್ಲಿ ದಿನನಿತ್ಯವು ತಮ್ಮನ್ನು ತಾವು ಅಪ್‍ಡೇಟ್ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಉತ್ತಮಜೀವನ ರೂಪಿಸಿಕೊಳ್ಳಲು ತರಬೇತಿಯು ತುಂಬಾ ಅವಶ್ಯಕವಾಗಿದ್ದು, ಈ ತರಬೇತಿಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಿಷೇಶ ಉಪನ್ಯಾಸಕರಾಗಿ ಆಗಮಿಸಿದ ಕಾಲೇಜು ಶಿಕ್ಷಣ ಇಲಾಖೆಯ ಸಹಾಯಕ ಪ್ರಾಧ್ಯಾಪಕರು ಮತ್ತು ಸಮನ್ವಯಾಧಿಕಾರಿ ಮಂಜುನಾಥ ಬಿ ಅವರು ಮಾತನಾಡಿ ತಾವು 4 ತಿಂಗಳು ಮಾಡಿದ ಪಾಠದಲ್ಲಿ 40 ಜನ ವಿಧ್ಯಾರ್ಥಿಗಳು ಬೇರೆ ಬೇರೆ ಸರಕಾರಿ ಕೆಲಸಕ್ಕೆ ಅರ್ಹರಾಗಿದ್ದಾರೆ ಎಂದು ತಿಳಿಸಿದರು.


4 ತಿಂಗಳು ಕಷ್ಟ ಪಟ್ಟರೆ 40 ವರ್ಷ ಸುಖವಾಗಿ ಇರಬಹುದು, ಸರಕಾರಿ ಕೆಲಸಕ್ಕೆ ಒಮ್ಮೆ ಆಯ್ಕೆ ಆದರೆ ಅದನ್ನು ಕಿತ್ತುಹಾಕಲು ಸಾಧ್ಯವಿಲ್ಲ ಹಾಗೂ 40 ವರ್ಷ ಸಂತೋಷವಾಗಿರಬಹುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮನಸಿದ್ದರೆ ಮಾರ್ಗ, ಬೇಡ ಎನ್ನುವ ಮನಸಿನ ಮಾತನ್ನು ಕೇಳದೆ, ಬೇಕು ಎನ್ನುವ ಮನಸಿನ ಮಾತುಗಳನ್ನು ಕೇಳಿ ಮುಂದೆ ಸಾಗಿದರೆ ಇವತ್ತೇ ನಿಮ್ಮ ಗುರಿಯ ಕಡೆ ಅರ್ಧ ಸಾಗಿದಂತೆ ಎಂದ ಉಪನ್ಯಾಸಕ ಮಂಜುನಾಥ ಅವರು ಕೆಲವೊಂದು ಸ್ಪೂರ್ತಿದಾಯಕವಾದ ಮಾತುಗಳು ಹೇಳಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.


ಇದೇ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಎನ್.ಮಹೇಶ್‍ಬಾಬು ಅವರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿತುಂಬುವಂತಹ ಮಾತುಗಳನ್ನಾಡಿದರು.
*ದೇಶವಿಭಜನೆಯ ಘೋರಘಟನೆಗಳ ಛಾಯಾಚಿತ್ರ ಪ್ರದರ್ಶನ:ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ದೇಶ ವಿಭಜನೆಯ ದುರಂತ ಘಟನೆಗಳ ಛಾಯಾಚಿತ್ರ ಪ್ರದರ್ಶನ ಹೊಸಪೇಟೆಯ ಶಂಕರಆನಂದ್ ಸಿಂಗ್ ಪ್ರಥಮದರ್ಜೆ ಕಾಲೇಜಿನಲ್ಲಿ ಸೋಮವಾರ ನಡೆಯಿತು.
ಭಾರತ ವಿಭಜನೆಯು ಮನುಕುಲಕದ ಇತಿಹಾಸದಲ್ಲಿಯೇ ಎಂದು ಕೇಳರಿಯದ ಬಲವಂತದ ಮಹಾಮಾನವ ವಲಸೆಯ ವ್ಯಾಕುಲದ ಕಥೆಯಾಗಿದೆ. ಲಕ್ಷಾಂತರ ಜನ ಅಪರಚಿತ ಜಾಗದಲ್ಲಿ ತಮ್ಮಜೀವನ ಕಟ್ಟಿಕೊಳ್ಳಲು,ಹೊಸ ಬದುಕು ಅರಸಿ ಹೊರಟ ಘಟನೆಗಳನ್ನು ಈ ಛಾಯಾಚಿತ್ರ ಪ್ರದರ್ಶನ ನೆನಪಿಸಿತು.
ಶಂಕರ ಆನಂದ್ ಸಿಂಗ್ ಕಾಲೇಜಿನಲ್ಲಿ ಹರ್-ಘರ್‍ತಿರಂಗಾ ಅಭಿಯಾನದ ಅಂಗವಾಗಿ ಏರ್ಪಡಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನದಲ್ಲಿ ಸಂಸದ ವೈ.ದೇವೇಂದ್ರಪ್ಪ, ಜಿಲ್ಲಾಧಿಕಾರಿಗಳಾದ ಅನಿರುದ್ಧ್‍ಪಿ.ಶ್ರವಣ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಡಾ.ಅರುಣ್.ಕೆ ಎ.ಡಿ.ಸಿ.ಮಹೇಶ್‍ಬಾಬು, ಸಹಾಯಕ ಆಯುಕ್ತ ಸಿದ್ದರಾಮೇಶ್ವರ ಸೇರಿದಂತೆ ಕಾಲೇಜಿನ ಸಿಬ್ಬಂದಿಯವರು ಮತ್ತು ನೂರಾರು ವಿದ್ಯಾರ್ಥಿಗಳು ಛಾಯಾಚಿತ್ರಗಳನ್ನು ವೀಕ್ಷಿಸಿದರು.


ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಂಕಮ್ಮ, ಹುಡಾ ಆಯುಕ್ತರು ಹಾಗೂ ಜಿಲ್ಲಾಖನಿಜ ನಿಧಿಯ ವಿಶೇಷಾಧಿಕಾರಿ ಈರಣ್ಣ ಬೀರಾದಾರ, ಹೊಸಪೇಟೆಯ ತಹಶೀಲ್ದಾರ್ ವಿಶ್ವಜಿತ್ ಮೆಹತಾ, ಸಮಾಜಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ್ ಸೇರಿದಂತೆ ಶಂಕರ್‍ಆನಂದ್ ಸಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾಥಿರ್üಗಳು ಇದ್ದರು.

LEAVE A REPLY

Please enter your comment!
Please enter your name here