BP NEWS: ಲಿಂಗಸಗೂರು: ಆಗಸ್ಟ್.10: ಆಗಸ್ಟ್ 12ರಂದು ಕಾಯಕಯೋಗಿ ಕುಳುವ ನುಲಿಯ ಚಂದಯ್ಯ ಜಯಂತಿಯನ್ನು ಆಚರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಹಿನ್ನಲೆಯಲ್ಲಿ ತಾಲೂಕು ಆಡಳಿತ ವತಿಯಿಂದ ಲಿಂಗಸೂರು ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಕುಳುವ ಸಮಾಜದ ಮುಖಂಡರು, ಪದಾಧಿಕಾರಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆಯನ್ನು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಅಖಿಲ ಕರ್ನಾಟಕ ಸರ್ಕಾರಿ ಕುಳುವ ನೌಕರರ ಸಂಘದ ಜಿಲ್ಲಾಧ್ಯಕ್ಷ ಮರಿಯಪ್ಪ ತುರಡಗಿ ಮಾತನಾಡಿ, ರಾಜ್ಯದಲ್ಲಿಕುಳುವ, ಕೊರಮ, ಕೊರಚ ಸಮುದಾಯಕ್ಕೆ ಸೇರಿದ ಲಕ್ಷಾಂತರ ಮಂದಿ ಇದ್ದು,12ನೇ ಶತಮಾನದ ಬಸವಾದಿ ಪ್ರಮಥರ ಸಮಕಾಲಿನ ಶಿವಶರಣ, ಕಾಯಕ ಸದ್ಭಾವಿ, ಸರ್ವಶ್ರೇಷ್ಠ ಶಿವಶರಣ ನುಲಿಯ ಚಂದಯ್ಯ.ತಾಲೂಕಿನಾ ದ್ಯಂತ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ತಾಲೂಕಿನ ಸಮಸ್ತ ಕುಳುವ ಸಮಾಜದ ಮುಖಂಡರು ಭಾಗವಹಿಸಿ ಜಯಂತಿಯನ್ನು ಯಶಸ್ವಿಯಾಗಿ ಆಚರಿಸೋಣ ಎಂದು ಮನವಿ ಮಾಡಿಕೊಂಡರು. ಈ ಸಮಯದಲ್ಲಿ ತಾಲೂಕು ಅಧ್ಯಕ್ಷ ಯೋಗಪ್ಪ ಭಜಂತ್ರಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಯಾದವ, ಡಾ //ಅಮರೇಶ ಪಾಟೀಲ್, ಡಾ//ರಾಚಪ್ಪ, ಪುರಸಭೆ ಮುಖ್ಯಧಿಕಾರಿ ಜಗನ್ನಾಥ, ಶಿಶು ಅಭಿರುದ್ದಿ ಅಧಿಕಾರಿ ಶರಣಮ್ಮ ಕಾರನೂರು, ಬಿಸಿಎಂ ಅಧಿಕಾರಿ ಮರಿಯಮ್ಮ, ಪಿಎಸ್ಐ ಹನುಮಂತಪ್ಪ,ಶಿವಾನಂದ ನರಹಟ್ಟಿ, ನಾನಾ ಇಲಾಖೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.