ರಾಯಚೂರು: ಹೋರಾಟಗಾರರ ಮನೆಗೆ ತೆರಳಿ ಜಿಲ್ಲಾಧಿಕಾರಿಗಳಿಂದ ಸನ್ಮಾನ

0
133

BP NEWS: ರಾಯಚೂರು: ಆಗಸ್ಟ್.09:  ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಈ ಶುಭ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ನಗರದ ಹರ್ಷಿತ ಗಾರ್ಡನ್ ಹತ್ತಿರ ಇರುವ ಕೃಷ್ಣ ಮೆಡಲ್ಸ್ ಕಾಲೋನಿಯಲ್ಲಿ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರರ ಮನೆಗೆ ತೆರಳಿ ಅವರನ್ನು ಸನ್ಮಾನಿಸಿ, ಸ್ವಾತಂತ್ರ ದಿನಾಚರಣೆಯ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಈ ವೇಳೆ ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಮಾತನಾಡಿ, ಸ್ವಾತಂತ್ರ‍್ಯಗಳಿಸಿ 75ನೇ ವರ್ಷದ ಸವಿನೆನಪಿಗಾಗಿ ದೇಶದಾದ್ಯಂತ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ವರ್ಷಾಚರಣೆ ಆರಂಭಗೊAಡಿದ್ದು, ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ದೇಶದಾದ್ಯಂತ ಇರುವ ಎಲ್ಲ ಸ್ವಾತಂತ್ರ‍್ಯ ಯೋಧರ ಮನೆ ಮನೆಗಳಿಗೆ ತೆರಳಿ ಅವರಿಗೆ ಸರಕಾರದ ವತಿಯಿಂದ ಗೌರವ ಸಮರ್ಪಿಸಲಾಗುತ್ತಿದೆ ಎಂದರು.

ಸ್ವಾತAತ್ರ‍್ಯದ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಸ್ವಾತಂತ್ರ‍್ಯಕ್ಕಾಗಿ ಹೋರಾಡಿದ ಮಹನೀಯರನ್ನು ಗೌರವಿಸುವ ಸೌಭಾಗ್ಯ ನಮ್ಮದು ಎಂದು ಹೇಳಿದರು.

ದೇವದುರ್ಗ ತಾಲೂಕಿನ ಆಲ್ಕೋಡ ಗ್ರಾಮದ ಹಿರಿಯ ಸ್ವಾತಂತ್ರ‍್ಯ ಹೋರಾಟಗಾರ ಅಮರೇಶ ಅವರ ಮನೆಗೆ ರಾಯಚೂರು ಸಹಾಯಕ ಆಯುಕ್ತ ರಜನಿಕಾಂತ್ ಅವರು ಭೇಟಿ, ನೀಡಿ ಜಿಲ್ಲಾಡಳಿತದ ವತಿಯಿಂದ ಸನ್ಮಾನ ಮಾಡಲಿದ್ದಾರೆ.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಸ್ವಾತಂತ್ರ‍್ಯ ಚಳವಳಿಯಲ್ಲಿ ಭಾಗವಹಿಸಿದ ಮಹನೀಯರ ಮನೆ ಮನೆಗೆ ತೆರಳಿ ಸನ್ಮಾನಿಸಲಾಗುತ್ತಿದೆ. ಈ ವೇಳೆ ಚಳವಳಿಯಲ್ಲಿ ಅವರು ಪಾಲ್ಗೊಂಡ ಕ್ಷಣಗಳನ್ನು ಮೆಲುಕು ಹಾಕುವ ಮೂಲಕ ನಮಗೆ ಸ್ಫೂರ್ತಿಯಾಗಿದ್ದಾರೆ. ಇದರಿಂದ ಸ್ವಾತಂತ್ರ‍್ಯ ಯೋಧರ ಸಮಕಾಲೀನರ ಪರಿಚಯ ಮತ್ತು ಹೋರಾಟದ ರೂಪುರೇಷೆಗಳನ್ನು ತಿಳಿದುಕೊಳ್ಳುವ ಭಾಗ್ಯ ನಮಗೆ ಲಭಿಸಲಿದೆ ಎಂದರು.

ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಕೆ.ಆರ್.ದುರುಗೇಶ್, ರಾಯಚೂರು ತಹಸೀಲ್ದಾರ್ ರಾಜಶೇಖರ, ಜಿಲ್ಲಾಧಿಕಾರಿಗಳ ಕಚೇರಿಯ ಪ್ರಥಮ ದರ್ಜೆ ಸಹಾಯಕ ಮಲೇಶ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here